20 ಸಾವಿರ ಗಿಡ ನೆಡುವ ಯೋಜನೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚಾಲನೆ 5 ಸಾವಿರ ಹೆರಿಗೆ ಮಾಡಿಸಿದ 107 ವಯಸ್ಸಿನ ಸೂಲಗಿತ್ತಿ ಪಣಿಯಮ್ಮಗೆ ಸನ್ಮಾನ

ಬೆಳಗಾವಿ: 25: ಲಕ್ಷ್ಮಿ ತಾಯಿ ಫೌಂಡೇಶನ್ ಮೂಲಕ ಈ ವರ್ಷ 20 ಸಾವಿರ ಗಿಡಗಳನ್ನು ನೆಡುವ ಯೋಜನೆ ಹಮ್ಮಿಕೊಂಡಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಕಾಮರ್ಿಕರಿಗೆ 500 ಗಿಡಗಳನ್ನು ವಿತರಿಸುವ ಮೂಲಕ ಯೋಜನೆಗೆ ಚಾಲನೆ 

ನೀಡಿದರು. 

ಮಂಗಳವಾರ ಸಾಂಬ್ರಾಕ್ಕೆ ತೆರಳಿದ ಹೆಬ್ಬಾಳಕರ್, ಅಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ತೊಡಗಿರುವ ಕಾಮರ್ಿಕರಿಗೆ 500 ಗಿಡಗಳನ್ನು ವಿತರಿಸಿದ್ದಲ್ಲದೆ, ಅವರಿಗೆ ಊಟದ ವ್ಯವಸ್ಥೆ ಮಾಡಿ, ಅವರೊಂದಿಗೇ ಊಟ ಮಾಡಿದರು. 

ಬರಬರುತ್ತ ಬರಗಾಲ ತೀವ್ರವಾಗುತ್ತಿದೆ. ಅಂತರ್ಜಲ ಕಡಿಮೆಯಾಗುತ್ತಿದೆ. ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕುಡಿಯಲು ಹನಿ ನೀರು ಕೂಡ ಸಿಗುವುದಿಲ್ಲ. ಏನೇ ಆಸ್ತಿ ಮಾಡದಿದ್ದರೂ ಗಿಡಗಳನ್ನಾದರೂ ನೆಡುವ ಮೂಲಕ ಮುಂದಿನ ಪೀಳಿಗೆಗೆ ದೊಡ್ಡ ಆಸ್ತಿ ಮಾಡಿಟ್ಟು ಹೋಗಬೇಕು. ಹಾಗಾಗಿ ಪ್ರತಿಯೊಬ್ಬರೂ ಗಿಡಗಳನ್ನು ನೆಡಬೇಕು ಎಂದು ಹೆಬ್ಬಾಳಕರ್ ಕರೆ ನೀಡಿದರು. 

ಈ ಸಂದರ್ಭದಲ್ಲಿ ಮಾರಿಹಾಳ ಪೊಲೀಸ್ ಇನಸ್ಪೆಕ್ಟರ್ ವಿಜಯಕುಮಾರ ಸಿನ್ನೂರ್, ತಾಲೂಕ್ ಪಂಚಾಯತ್ ಅಧ್ಯಕ್ಷ ಶಂಕರಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗೇಶ ದೇಸಾಯಿ, ಗ್ರಾಮ ಪಂಚಾಯತ್ ಅಧ್ಯಕ್ಷ- ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. 

ಸೂಲಗಿತ್ತಿ ಪಣಿಯಮ್ಮಗೆ ಸನ್ಮಾನ :

ಇದೇ ಸಂದರ್ಭದಲ್ಲಿ, ಈವರೆಗೆ 5 ಸಾವಿರಕ್ಕಿಂತ ಹೆಚ್ಚು ಹೆರಿಗೆ ಮಾಡಿಸಿರುವ 107 ವಯಸ್ಸಿನ ಸೂಲಗಿತ್ತಿ ಸಾಂಬ್ರಾದ ಪಣಿಮಾ ತಾನ್ಸೆವಾಲೆ ಅವರನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸನ್ಮಾನಿಸಿದರು.