ಕಾರವಾರದಲ್ಲಿ ಐತಿಹಾಸಿಕ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥ ಯಶಸ್ವಿ

  ಕಾರವಾರದಲ್ಲಿ ಐತಿಹಾಸಿಕ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥ ಯಶಸ್ವಿ Law awareness rally of historic forest dwellers in Karwar a success

ಕಾರವಾರ 06 : ಜಿಲ್ಲಾದ್ಯಂತ ಮೂಲೆ ಮೂಲೆಯಿಂದ ಅರಣ್ಯವಾಸಿಗಳ ಸಮಸ್ಯೆಗಳೊಂದಿಗೆ, ಭೂಮಿ ಹಕ್ಕಿನ ನೀರಿಕ್ಷೆಗಾಗಿ ಚಳಿಗಾಲದ ಅಧಿವೇಶನದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಹಕ್ಕೋತ್ತಾಯಿಸಿ ಬಿಸಿಲಿನಲ್ಲಿಯೂ ಅರಣ್ಯವಾಸಿಳು ಹೆಜ್ಜೆ ಹಾಕಿ ಬಂದ ಅರಣ್ಯವಾಸಿಗಳ ಬೃಹತ್ ಸಮಾವೇಶ ಐತಿಹಾಸಿಕವಾಗಿತ್ತು.      

   ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥವು ನಗರದ ಪ್ರಮುಖ ಬೀದಿಯಲ್ಲಿ ಇಂದು ಕಾರವಾರದಲ್ಲಿ ಜರುಗಿದವು.       

ಜಾತಿ,ಮತ, ಪಂಥ, ಬೇಧ ಭಾವವಿಲ್ಲದೇ ಒಗಟ್ಟಾಗಿ ಭೂಮಿ ಹಕ್ಕಿನ ಕೂಗೂ ಇಂದಿನ ಸಮಾವೇಶದಲ್ಲಿ ಕೇಳಿ ಬಂದಿರುವುದು ವಿಶೇಷ. ವಿವಿಧ ಅರಣ್ಯವಾಸಿಗಳ ಕಲಾ ತಂಡವೂ ಐತಿಹಾಸಿಕ ಅರಣ್ಯವಾಸಿಗಳ ಸಮಾವೇಶಕ್ಕೆ ಮೆರಗು ತಂದವು.   

ಮಾಲಾದೇವಿ ಮೈದಾನದ   ಜಿಲ್ಲಾ ರಂಗ ಮಂದಿರದಿಂದ ಸಾಗಿದ ಅರಣ್ಯವಾಸಿಗಳ ಸಮೂಹವು ಸಂಗ್ರಾಮದಂತೆ ಘೋಷಣೆ ಕೂಗಿದರು. ಹಕ್ಕೋತ್ತಾಯದ  ಧ್ವನಿ ಮೆರವಣಿಗೆಯಲ್ಲಿ ಮೊಳಗಿದವು. ಮೆರವಣಿಗೆಯೂ ಮಾಲಾದೇವಿ ಕ್ರೀಡಾಂಗಣದಲ್ಲಿ ಸಮಾವೇಶವಾಗಿ ಪರಿವರ್ತನೆ ಗೊಂಡಿತು.       

ಮೆರವಣಿಗೆ ನೇತೃತ್ವವನ್ನ ಹೋರಟಗಾರರ ವೇದಿಕೆಯ ಜಿಲ್ಲಾ ಸಂಚಾಲಕರಾದ ಇಬ್ರಾಹೀಂ ಗೌಡಳ್ಳಿ, ರಾಜೇಶ್ ಮಿತ್ರ ನಾಯ್ಕ, ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಕುಮಟಾ ಅದ್ಯಕ್ಷ ಮಂಜುನಾಥ ಮರಾಠಿ ನಾಗೂರು, ಮಹೇಶ ನಾಯ್ಕ ಕಾನಕ್ಕಿ, ಮುಂಡಗೊಡ ಅಧ್ಯಕ್ಷ ಶಿವಾನಂದ ಜೋಗಿ ಮುಂಡಗೋಡ, ಅಂಕೋಲ ಅದ್ಯಕ್ಷ ರಮಾನಂದ ನಾಯಕ ಅಚವೆ, ಯಲ್ಲಾಪುರ ಅಧ್ಯಕ್ಷ ಭೀಮಸಿ ವಾಲ್ಮೀಕಿ,ಜಗದೀಶ್ ಶಿರಳಗಿ, ಪಾಂಡುರಂಗ ನಾಯ್ಕ ಬೆಳಕೆ,

ಚಂದ್ರ ಪೂಜಾರಿ ಮಂಚಿಕೇರಿ, ದಿವಾಕರ್ ಮರಾಠಿ ಆನಗೋಡ, ದೇವರಾಜ ಗೊಂಡ, ರಪೀಕ ಗಫಾರ, ಪ್ರಭಾಕರ ವೇಳಿಪ್ ಜೋಯಿಡ, ವಿಜು ಪೀಟರ್ ಪಿಲ್ಲೆ, ಶಾಂತರಾಮ ನಾಯ್ಕ ಅಂಕೋಲ, ರಾಮು ಕಲಕರಡಿ, ಹರಿಹರ ನಾಯ್ಕ ಓಂಕಾರ, ಸೀತಾರಾಮ ಗೌಡ, ಅರವಿಂದ ಗೌಡ, ಉದಯ ಗುನಗ ಅಚವೆ, ಶಂಕರ್ ಕೊಡಿಯಾ, ಮಾದೇವ ನಾಯಕ ಮುಂತಾದವರು ನೇತೃತ್ವವಹಿಸಿದು.  ಸಹಸ್ರಾರು ಸಂಖ್ಯೆಯಲ್ಲಿ ಆಕ್ಷೇಪಣೆ: ಅರಣ್ಯ ಹಕ್ಕು ಕಾಯಿದೆ,

ನ್ಯಾಯಾಲಯದ ತೀಪು ಮತ್ತು ಕೇಂದ್ರ ಸರ್ಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ 73 ಸಾವಿರ ಅರ್ಜಿಗಳು ತಿರಸ್ಕರಿಸಿರುವ ಹಿನ್ನಲೆಯಲ್ಲಿ ಇಂದು ಜಿಲ್ಲಾದ್ಯಂತ ಆಗಮಿಸಿದ ಸಹಸ್ರಾರು ಅರಣ್ಯವಾಸಿಗಳು, ಜಿಲ್ಲಾ ಅರಣ್ಯ ಭೂಮಿ ಹಕ್ಕು ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗಳಿಗೆ ವಯಕ್ತಿಕವಾಗಿ ಆಕ್ಷೇಪ ಪತ್ರ ಸಲ್ಲಿಸಲಾಯಿತು. ಒಂದೇ ದಿನದಲ್ಲಿ ಏಕ ಕಾಲದಲ್ಲಿ ಬೃಹತ್ ಸಂಖ್ಯೆಯಲ್ಲಿ ಆಕ್ಷೇಪ ಪತ್ರಗಳನ್ನು ಸರ್ಕಾರಕ್ಕೆ ಸಲ್ಲಿಸಿರುವದು ದಾಖಲಾರ್ಹ..