ಲೋಕದರ್ಶನ ವರದಿ
ಮುದ್ದೇಬಿಹಾಳ 23:ಪಟ್ಟಣದ ಶ್ರೀ ಬನಶಂಕರಿ ರಥೋಥ್ಸವ ಸೋಮವಾರ ಸಂಜೆ 7.15ಕ್ಕೆ ಸಾವಿರಾರು ಭಕ್ತಾದಿಗಳ ಜಯಘೋಷಗಳ ಮಧ್ಯೆ ವಿಜೃಂಭಣೆಯಿಂದ ಜರುಗಿತು.ಮದ್ಯಾಹ್ನ ಶ್ರೀದೇವಿಯ ರಥೋತ್ಸವದ ಕಳಸವು ಶ್ರೀದೇವಿಯ ಸ್ಥಳದಿಂದ ಹೊರಟು ಶ್ರೀ ಕಾಳಿಕಾದೇವಿಯ ದೇವಸ್ಥಾನದ ಗಂಗಾಸ್ಥಳಕ್ಕೆ ಹೋಗಿ ಶಿರೋಳ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದ ಸಮೀತಿಯ ನೇತೃತ್ವದಲ್ಲಿ ರಥೋತ್ಸವ ಹಗ್ಗದ ಜೊತೆಗೆ ಗಂಗಸ್ಥಳದಿಂದ ಮೆರವಣಿಗೆ ಮುಖಾಂತರ ಬನಶಂಕರಿ ದೇವಿ ಸನ್ನಿಧಾನಕ್ಕೆ ಆಗಮಿಸಿದ ಬಳಿಕ ಕಳಸಾರೋಹಣದ ಬಳಿಕ ರಥೋತ್ಸವ ನಡೆಸಲಾಯಿತು.
ರಥೋತ್ಸವದ ವೇಳೆ ಭಕ್ತರು ಬನಶಂಕರಿ ನಿನ್ನ ಪಾದಕ ಶಂಭುಕೋ,ಜೈ ಬನಶಂಕರಿ ದೇವಿ ಎಂದು ಘೋಷಣೆಗಳನ್ನು ಕೂಗಿದರು.ಅಲ್ಲದೇ ರಥಕ್ಕೆ ಉತ್ತತ್ತಿ,ಬಾಳೆಹಣ್ಣು,ಲಾಡು,ಹೂವು ಅಪರ್ಿಸಿ ಧನ್ಯತೆ ಮರೆದರು.
ಮುಂಜಾಗ್ರತಾ ಕ್ರಮವಾಗಿ ಸಿಪಿಐ ರವಿಕುಮಾರ ಕಪ್ಪತ್ತನವರ,ಪಿಎಸೈ ಮಲ್ಲಪ್ಪ ಮಡ್ಡಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಪೊಲೀಸರು ವ್ಯಾಪಕ ಬಿಗಿ ಬಂದೋಬಸ್ತ್ ವಹಿಸಿದ್ದರು.ರಥೋತ್ಸವಕ್ಕೂ ಮುನ್ನ ಮದ್ದು ಸುಡುವ ಕಾರ್ಯಕ್ರಮವೂ ನಡೆಯಿತು.ಭಾನುವಾರ ರಾತ್ರಿ ಅಗ್ಗಿ ಹಾಯುವ ಕಾಯಕ್ರಮ ನಡೆಯಿತು.ಸಾವಿರಾರು ಭಕ್ತರು ಅಗ್ಗಿ ತುಳಿದರು.