ಗದಗ 23: ದಿ. 23ರಂದು ಗದಗ ನಗರದ ದೋಭಿಘಾಟ ಪಕ್ಕದಲ್ಲಿ ರೂ.68.00 ಲಕ್ಷಗಳ ಪುಟ್ಬಾಲ್ ಪ್ರ್ಯಾಕ್ಟೀಸ್ ಅಂಕಣಕ್ಕೆ ಎಚ್.ಕೆ. ಪಾಟೀಲ, ಶಾಸಕರು, ಗದಗ ವಿಧಾನಸಭಾ ಕ್ಷೇತ್ರ ಇವರು ಭೂಮಿ ಪೂಜೆ ನೆರವೇರಿಸಿದರು.
ಈ ಅಂಕಣವು ಒಂದು ಉತ್ತಮ ರಾಷ್ಟ್ರ ಮಟ್ಟದ ಅಂಕಣವಾಗಿ ಗದಗಿನ ಕ್ರೀಡಾಪಟುಗಳಿಗೆ ದೊರೆಯುವಂತೆ ಅನುಕೂಲ ಮಾಡಿಕೊಡಲು ಕೂಡಲೇ ಕಾಮಗಾರಿಯನ್ನು ಪ್ರಾರಂಭಿಸುವಂತೆ ಯೋಜನಾ ವ್ಯವಸ್ಥಾಪಕರು, ನಿಮರ್ಿತಿ ಕೇಂದ್ರ, ಗದಗ ಇವರಿಗೆ ಸೂಚಿಸಿದರು. ಸಮಾರಂಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ವಾಸಪ್ಪ ಕುಬೇರಪ್ಪ ಕುರಡಗಿ, ತಾಲೂಕು ಪಂಚಾಯತಿ ಅಧ್ಯಕ್ಷರಾದ ಮೋಹನ ಗುರಣ್ಣನವರು, ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ಶಕುಂತಲಾ ರವೀಂದ್ರನಾಥ್ ಮೂಲಿಮನಿ, ಜಿಲ್ಲಾಧಿಕಾರಿಗಳಾದ ಎಂ.ಜಿ. ಹಿರೇಮಠ, ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳಾದ ಮಂಜುನಾಥ್ ಆರ್. ಚವ್ಹಾಣ, ನಗರಸಭೆ ಅಧ್ಯಕ್ಷರಾದ ಸುರೇಶ ಚಂದಪ್ಪ ಕಟ್ಟಿಮನಿ, ನಗರಸಭೆ ಸದಸ್ಯರಾದ ಅನಿಲ ಸಿಂಗಟಾಲೂರ, ಅಸೂಟಿಯವರು, ಎಂ.ಸಿ. ಶೇಖ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿದರ್ೇಶಕ ವಿಶ್ವನಾಥ, ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾ ಕ್ರೀಡಾಂಗಣ ಸಮಿತಿಯ ಸದಸ್ಯರುಗಳು ಹಾಜರಿದ್ದರು ಎಂದು ಕ್ರೀಡಾ ಇಲಾಖೆಯ ಪ್ರಕಟಣೆ ತಿಳಿಸಿದೆ.