ಭೂ ಸಂಪನ್ಮೂಲ ಮಾಹಿತಿ ಕಾರ್ಯಗಾರ

ಲೋಕದರ್ಶನ ವರದಿ

ಗದಗ23:   ಜಿಲ್ಲಾ ಪಂಚಾಯತ್,   ಕೃಷಿ ಇಲಾಖೆ  ಗದಗ  ಹಾಗೂ ಕೃಷಿ ವಿಶ್ವ ವಿದ್ಯಾಲಯ, ಧಾರವಾಡ  ಇವರ ಸಂಯುಕ್ತಾಶ್ರಯದಲ್ಲಿ ಸುಜಲಾ-   ಯೋಜನೆಯಡಿ   ಭೂ ಸಂಪನ್ಮೂಲ ಮಾಹಿತಿ ಕಾರ್ಯಾಗಾರ ಮತ್ತು ಸಮಗ್ರ ಕೃಷಿ ಅಭಿಯಾನ-2018 ನಗರದ  ಅಂಬೇಡ್ಕರ ಭವನ ಹತ್ತಿರ ಇರುವ ಶ್ರೀನಿವಾಸ ಭವನದಲ್ಲಿ ಏರ್ಪಡಿಸಲಾಗಿದೆ.  

         ಕನರ್ಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿರುವ ಈ ಕಾರ್ಯಕ್ರಮವನ್ನು  ಶಾಸಕ ಎಚ್.ಕೆ. ಪಾಟೀಲ ಉದ್ಘಾಟಿಸುವರು.  

         ಜಿ.ಪಂ. ಅಧ್ಯಕ್ಷ ಎಸ್.ಪಿ. ಬಳಿಗಾರ, ಸಂಸದರುಗಳಾದ ಶಿವಕುಮಾರ ಉದಾಸಿ, ಪಿ.ಸಿ. ಗದ್ದಿಗೌಡ್ರ,  ಶಾಸಕರುಗಳಾದ ಸಿ.ಸಿ.ಪಾಟೀಲ, ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀನಿವಾಸ ಮಾನೆ, ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ್ , ತಾ.ಪಂ. ಅಧ್ಯಕ್ಷ ಮೋಹನ ದುರಗಣ್ಣವರ, ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ,  ಜಿಲ್ಲಾ ಕೃಷಿಕ ಸಮಾಜದ  ಅಧ್ಯಕ್ಷ  ಶಿವಕುಮಾರಗೌಡ  ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸುವರು. 

         ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರಾದ ಪ್ರಭಾಷ ಚಂದ್ರರೇ ,  ನಿದರ್ೇಶಕರಾದ ಎ. ಪದ್ಮಯ ನಾಯಕ್  ವಿಶೇಷ ಆಮಂತ್ರಿತರಾಗಿ  ಆಗಮಿಸುವರು.    

         ಜಿಲ್ಲಾದಿಕಾರಿ ಎಂ.ಜಿ.ಹಿರೇಮಠ, ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಮಂಜುನಾಥ ಚವ್ಹಾಣ ,  ತೋಟಗಾರಿಕೆ ಇಲಾಖೆ  ಉಪನಿದರ್ೇಶಕ ಎಲ್. ಪ್ರದೀಪ,  ಕೃಷಿ ವಿಶ್ವ ವಿದ್ಯಾಲಯ ವಿಜ್ಞಾನಿ  ಡಾ. ಪಿ.ಎಲ್. ಪಾಟೀಲ  ಅತಿಥಿಗಳಾಗಿ ಆಗಮಿಸುವರು.