ಅಡವಿಸೋಮಾಪೂರ ಗ್ರಾಪಂ ಉಪಚುನಾವಣೆ ಲಕ್ಷ್ಮವ್ವ ಜಡಿ ಗೆಲುವು

ಲೋಕದರ್ಶನ ವರದಿ

ಗದಗ 04: ತಾಲ್ಲೂಕಿನ   ಅಡವಿಸೋಮಾಪೂರ ಗ್ರಾಮ ಪಂಚಾಯಿತಿ 1 ವಾರ್ಡನ ಉಪಚುನಾವಣೆಯಲ್ಲಿ. ಶುಕ್ರವಾರ ನಡೆದ ಮತ ಏಣಿಕೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯಥರ್ಿ ಲಕ್ಷ್ಮವ್ವ ಜಡಿ ಅವರು 479 ಮತಗಳನ್ನು ಪಡೆದು ಜಯಗಳಿಸಿದ್ದಾರೆ. 

ಉಪಚುನಾವಣೆಯಲ್ಲಿ ಒಟ್ಟು   740 ಮತಗಳು ಚಲಾವಣೆಯಾಗಿದ್ದು   ಲಕ್ಷ್ಮವ್ವ ನಾಗಪ್ಪ ಜಡಿ  ಅವರು 479 ಮತಗಳು ಪಡೆದು ಜಯಶಾಲಿಯಾದರೆ. ಗೀತಾ ಮುಕ್ಕಣ್ಣವರು 241 ಪಡೆದು ಸೋಲು ಕಂಡಿದ್ದಾರೆ. ಗೆಲುವು ಪಡೆದ  ಅಭ್ಯಥರ್ಿ ಲಕ್ಷ್ಮವ್ವ ಜಡಿ ಅವರು ಬೆಂಬಲಿಗರೊಂದಿಗೆ    ಗ್ರಾಮದೇವತೆಗೆ ಪೂಜೆ ಸಲ್ಲಿಸಿದರು ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಪ್ರಲ್ಹಾದ ಹೊಸಳ್ಳಿ, ಯುವ ಮುಖಂಡರಾದ  ಗಣಪತಿ ಜಡಿ, ಮಾಜಿ  ಗ್ರಾಮ ಪಂಚಾಯತ್ ಅಧ್ಯಕ್ಷರು ಫಕ್ಕಿರಪ್ಪ ಜಡಿ, ದೇವಪ್ಪ ಹೊಸಳ್ಳಿ, ಮಲ್ಲಪ್ಪ ಅಸುಂಡಿ, ಜಯರಾಮ ಹುಲಗಣ್ಣವರ,  ಇಮಾಮಸಾಬ  ನದಾಫ್,  ಮಂಜುನಾಥ ಜಡಿ, ಬಸವರಾಜ   ಹಮ್ಮಿಗಿ, ಶಾಂತವ್ವ ಹೊಂಬಳ,  ಶೇಖವ್ವ ಕರಿ, ಅರವಿಂದಪ್ಪ ಚಿಕ್ಕಣವರ, ಶಂಕ್ರಪ್ಪ ಹೊಸಳ್ಳಿ, ಪರಶುರಾಮ ಜಡಿ, ಯಲ್ಲಪ್ಪ ಅಣ್ಣಿಗೇರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.