ಓದುಗರ ಕೊರತೆಯಿಂದ ಸಾಹಿತ್ಯಕ್ಕೆ ಕೊಡಲಿ ಪೆಟ್ಟು: ಶಾಸಕ ಬಸವರಾಜ ಶಿವಣ್ಣನವರ
ಬ್ಯಾಡಗಿ 25: ಕನ್ನಡ ಭಾಷೆಗೆ, ಸಾಹಿತ್ಯಕ್ಕೆ ಇರುವ ಚರಿತ್ರೆ ಬಹಳ ಭವ್ಯವಾಗಿದೆ, ಆದರೆ ಇಂದು ಸಾಹಿತ್ಯ, ಪುಸ್ತಕಗಳನ್ನು ಓದುವವರ ಕೊರತೆಯಿಂದ ಸಾಹಿತ್ಯಕ್ಕೆ ಕೊಡಲಿ ಪೆಟ್ಟು ಬಿದ್ದಂತಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಕಳವಳ ವ್ಯಕ್ತ ಪಡಿಸಿದರು. ಕನ್ನಡಿಗರು ಕನ್ನಡಕ್ಕಾಗಿ ಒಂದಾಗಬೇಕು. ಕನ್ನಡಿಗರು ಒಂದಾದರೆ ನಮ್ಮನ್ನು ತಡೆಯುವ ಶಕ್ತಿ ಇಲ್ಲ ನಮ್ಮ ಜಿಲ್ಲೆ ವಿಶಿಷ್ಟ ವಾದ ಜಿಲ್ಲೆ ಸಂತರನ್ನು ಹೊಂದಿದ ನಮ್ಮ ಜಿಲ್ಲೆಯಾಗಿದೆ ಎಲ್ಲರಿತಿಯ ಸಾಹಿತಿಗಳನ್ನು ಹೊಂದಿದ ಜಿಲ್ಲೆ ಮತ್ತು ಜಗತ್ತಿಗೆ ಪ್ರಸಿದ್ಧ ವಾದ ಮೆಣಸಿನಕಾಯಿ ವ್ಯಾಪಾರ ಮಾರುಕಟ್ಟೆ ಹೊಂದಿದ ನಮ್ಮ ಬ್ಯಾಡಗಿ ಪಟ್ಟಣವಾಗಿದೆ.ಬ್ಯಾಡಗಿ ರ?ತರಿಗೆ ಕಷ್ಷ ಬರಬಹುದು ಇದರಿಂದ ರ?ತ ಕಷ್ಟಕ್ಕೆ ಬಿಳುತ್ತಿದ್ದಾನೆ ಇದನ್ನು ಬಿಟ್ಟು ಧ?ರ್ಯ ದಿಂದ ಜೀವನವನ್ನು ನಡೆಸುವ ಕೆಲಸ ರ?ತ ಮಾಡಬೇಕಾಗಿದೆ. ನಮ್ಮ ತಾಯಿ ಕನ್ನಡ ನಾವು ನಮ್ಮ ಭಾಷಗೆ ತಲೆಬಾಗುವ ಕೆಲಸ ಆಗಬೇಕು ಜೀವನೊಪಾಯಕ್ಕಾಗಿ ಇಂಗ್ಲಿಷ್ ಕಲೆಯಿರಿ ನಾಡು ನುಡಿ ಉಳಿಸಲು ಕನ್ನಡ ಬಳಸಿರಿ ಎಂದರು.ಉದ್ಘಾಟನಾಕಾರಾದ ಜಾನಪದ ವಿದ್ವಾಂಸಕ ಶಂಭು ಬಳೆಗಾರ ಮಾತನಾಡಿ ಕನ್ನಡ ನಮ್ಮ ಮೊದಲ ಭಾಷೆ ನಾವು ಮೊದಲು ಕನ್ನಡಿಗರು ಎಂದು ನಾವು ತಿಳಿದುಕೊಳ್ಳಬೇಕು.
ನಾವು ಎಲ್ಲಾ ತಾಲೂಕು ಹೋಬಳಿ ಗ್ರಾಮ ಮಟ್ಟದಲ್ಲಿ ಕನ್ನಡ ಸಮ್ಮೇಳನ ಮಾಡಿ ಕನ್ನಡ ಉಳಿಸುವ ಕೆಲಸ ನಾವು ಮಾಡಬೇಕು ಯಾಕಂದರೆ ಇಂದಿನ ದಿನಮಾನದಲ್ಲಿ ಇದು ಅವಶ್ಯಕತೆ ಇದೆ.ಕನ್ನಡಕ್ಕೆ ಕುತ್ತು ಬಂದಿದೆ ಇಂಗ್ಲಿಷ್ ಭಾಷೆ ಇಂದು ಮುಂಚುಣಿಯಲ್ಲಿ ಬರುತ್ತಿದೆ ಇಂದು ಅದು ನಮಗೆ ತುಗು ಕತ್ತಿ ತುಗುತ್ತಿದೆ ಎಂದರು ಇತ್ತಿಚೆಗೆ ಶಿಕ್ಷಣಗಳು ಉದ್ಯಮವಾಗಿ ಪರಿಣಮಿಸಿದೆ ಇದರಿಂದ ನಾವು ಇನ್ನು ಕೆಲವೆ ವರ್ಷಗಳಲ್ಲಿ ನಾವು ಕನ್ನಡವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ವಿಷಾದಿಸಿದರು.ಕನ್ನಡ ನಮ್ಮ ಹೃದಯ ಭಾಷೆ ಆಗಬೇಕಾಗಿದೆ ಎಂದು ಹೇಳಿದರು.ಸಮ್ಮೇಳನದ ಸರ್ವಾಧ್ಯಕ್ಷ ಜೀವರಾಜ ಛತ್ರದ ತಮ್ಮ ಅಧ್ಯಕ್ಷೀಯ ಭಾಷಣ ಮತ್ತು ಹಕ್ಕೊತ್ತಾಯಗಳನ್ನು ಮಂಡಿಸಿದರು. ಹೊಸ ಸಾಹಿತಿಗಳನ್ನು ಉತ್ತೇಜಿಸುವ ಕೆಲಸ ಮಾಡಬೇಕು ಕನ್ನಡ ಸಾಹಿತ್ಯ ಪರಿಷತ್ತ ಇನ್ನಷ್ಟು ಕ್ರಿಯಾಶೀಲವಾಗಬೇಕು. ಸ್ಥಳೀಯವಾಗಿರುವ ಪ್ರತಿಭೆಗಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು. ಪ್ರತಿಭಾವಂತರಿಗೆ ಅವಕಾಶಗಳು ಮತ್ತು ವೇದಿಕೆಗಳನ್ನು ಕಲ್ಪಿಸುವ ಕೆಲಸ ಇಂದಿನ ದಿನಮಾನಗಳಲ್ಲಿ ಹೊಟ್ಟೆ ತುಂಬಿಸುವ ಕಲಿಕೆಯನ್ನು ಶಿಕ್ಷಕರ ನೀಡಬೇಕಾಗಿದೆ ಎಂದು ಹೇಳಿದರು.ಮಾಜಿ ಶಾಸಕರು ವೀರುಪಾಕ್ಷಪ್ಪ ಬಳ್ಳಾರಿ ಮಾತನಾಡಿ ಸರ್ವಜ್ಞ ಹುಟ್ಟಿದ ಜಿಲ್ಲೆ ಸ್ವಾತಂತ್ರ ಹೋರಾಟಗಾರರ ಕ್ಷೇತ್ರ ಕನಕದಾಸರು ನೆಲೆಸಿದ ಸ್ಥಳ ಇಂತಹ ಪುಣ್ಯ ಕ್ಷೇತ್ರ ನಮ್ಮ ಜಿಲ್ಲೆ ನಮ್ಮ ತಾಲೂಕು ಎಂದು ಹೇಳಿದರು.ಮಾಜಿ ಶಾಸಕರು ಸುರೇಶಗೌಡ ಪಾಟೀಲ ಮಾತನಾಡಿ ಭಾರತ ದೇಶದಲ್ಲಿ ಸಮೃದ್ಧ ವಾಗಿರುವ ನಾಡು ನಮ್ಮ ಕನ್ನಡಾಡು ಸಂಸ್ಕೃತಿ ಗಳ ನಾಡು ಕಲೆಗಳ ಬಿಡು ಅಂತಹ ನಾಡಲ್ಲಿ ನಾವು ಧನ್ಯರು ನಾವು ಎಲ್ಲಿಗೆ ಹೋದರು ನಮ್ಮ ಭಾಷೆಗೆ ಬೆಲೆ ಇದೆ ನಾವು ನಮ್ಮ ತಾಯಿ ಭಾಷೆಯನ್ನು ಎಂದಿಗೂ ಮರೆಯಬಾರದು ನಾವು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲೆಸುವ ಕೆಲಸ ಮಾಡಿ ಎಂದು ಹೇಳಿದರು.ಕಸಾಪ ತಾಲೂಕು ಅಧ್ಯಕ್ಷ ಬಿ ಎಂ ಜಗಾಪೂರ ಪ್ರಾಸ್ತಾವಿಕ ಮಾತನಾಡಿದರು.
ಬೆಳಗ್ಗೆ 7.30ಕ್ಕೆ ರಾಷ್ಟ್ರ ಮತ್ತು ನಾಡ ಧ್ವಜಾರೋಹಣ ಜರುಗಿತು. ನಂತರ ಶ್ರೀ ದಾನಮ್ಮ ದೇವಿ ದೇವಸ್ಥಾನದಿಂದ ಮುಖ್ಯ ರಸ್ತೆ ಮೂಲಕ ಸಿದ್ದೇಶ್ವರ ಸಭಾಭವನಕ್ಕೆ ಅವರು ಸಮ್ಮೇಳನಾಧ್ಯಕ್ಷರ ಮೇರವಣಿಗೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಸ್ ಜಿ ಕೋಟಿ ಚಾಲನೆ ನೀಡಿದರು. ಮೇರವಣಿಗೆಯಲ್ಲಿ ಕಲಾ ತಂಡಗಳು ಭಾಗಿಯಾಗಿದ್ದವುಈ ಸಮ್ಮೇಳನ ಮಾಜಿ ಶಾಸಕ ಸುರೇಶಗೌಡ ಪಾಟೀಲ. ಮಾಜಿ ಶಾಸಕ ವೀರುಪಾಕ್ಷಪ್ಪ ಬಳ್ಳಾರಿ. ಪಂಚ ಗ್ಯಾರಂಟಿ ರಾಜ್ಯ ಉಪಾಧ್ಯಕ್ಷರು ಎಸ್. ಆರ್ ಪಾಟೀಲ. ಹಿರಿಯ ಸಾಹಿತಿ ಸತೀಶ ಕುಲಕರ್ಣಿ.ಸಂಕಮ್ಮ ಸಂಕಣ್ಣನವರ.ಅಧ್ಯಕ್ಷ ಜೀವರಾಜ ಚತ್ರದ. ಲಿಂಗಯ್ಯ ಹೀರೆಮಠ.ಮುರಗೆಪ್ಪ ಶೆಟ್ಟರ. ಚಂದ್ರಣ್ಣ ಶೆಟ್ಟರ.ಜಿತೆಂದ್ರ ಸುಣಗಾರ. ವೀರಯ್ಯ ಹಿರೇಮಠ.ಎಸ್ ಜಿ ವೈದ್ಯ.ಅಬ್ದುಲ್ ಮುನಾಫ ಎರೆಸಿಮಿ.ಶಿವಯೋಗಿ ಶಿರೂರ.ಹಾಗೂ ಅನೇಕ ಮುಖಂಡರು. ಎಲ್ಲಾ ತಾಲೂಕಿನ ಶಿಕ್ಷಕರು ಸಾಹಿತ್ಯ ಪರಿಷತ್ ಪದಾದಿಕಾರಿಗಳು ಮುದ್ದು ಮಕ್ಕಳು. ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.