ಮಂದಗತಿಯಲ್ಲಿ ಸಾಗಿದ ರೈಲ್ವೇ ಕಾಮಗಾರಿ : ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಸಂಸದ ಸುರೇಶ ಅಂಗಡಿ

ಲೋಕದರ್ಶನ ವರದಿ

ಬೆಳಗಾವಿ : ಗಣೇಶನ ಹಬ್ಬ ಮುಗಿವಷ್ಟರಲ್ಲಿ ರೈಲ್ವೇ ಓವರ್ ಬ್ರಿಡ್ಜ್  ಕಾಮಗಾರಿಯನ್ನು ಮುಗಿಸಲು ಸೂಚಿಸಲಾಗಿತ್ತು ಆದರೆ  ಆಮೆಗತಿಯಲ್ಲಿ ಸಾಗುತ್ತಿರುವ ಕೆಲಸ ಮುಗಿಯುವ ಯಾವ ಲಕ್ಷಣಗಳು ಕಾಣುತ್ತಿಲ್ಲ ಎಂದು ಸಂಸದ ಸುರೇಶ ಅಂಗಡಿ ಅವರು ಅಸಮಾದಾನ ವ್ಯಕ್ತ ಪಡಿಸಿದರು.

ಮಂಗಳವಾರ ನಗರದ ಕಾಡಾ ಕಚೇರಿ ಸಭಾಂಗಣದಲ್ಲಿ  ರೈಲ್ವೇ ಹಾಗೂ ಮಹಾನಗರ ಪಾಲಿಕೆಯವರು ಸೇರಿ ಸಭೆ ನಡೆಸಿದರು. ನವ್ಹೆಂಬರ್ 20ರೊಳಗೆ ಹೊಸ  ಬ್ರಿಡ್ಜ್ನ್ನುಸೇವೆಗೆ ನೀಡಲಾಗುವದೆಂದು ರೈಲ್ವೇ ಅಧಿಕಾರಿಗಳು ಸಭೆಯಲ್ಲಿ ಭರವಸೆಯ ಮಾತನಾಡಿದರು. ರಾಷ್ಟ್ರಪತಿ ಬೆಳಗಾವಿಗೆ ಬಂದಾಗಲೇ ರಸ್ತೆಯನ್ನು ರಿಪೇರಿ ಮಾಡಿದವರು! ಏಮಧೂ ಶಮಶಧಶೂಋಎಸ ಅಂಗಡಿಯವರು ಈ ಸಂದರ್ಭದಲ್ಲಿ ವ್ಯಂಗ್ಯಮಾತನ್ನಾಡಿದರು. ನವ್ಹೆಂಬರ್ 20ರ ವರೆಗೆ ಯಾಕೆ ತಡ ಮಾಡಬೇಕು  ಈಗಾಗಲೇ ಜನರು ಸಾಕಷ್ಟು ತೊಂದರಯಾಗಿದೆ. ಅದಕ್ಕೆ ಅಕ್ಟೋಬರ್ 15ಕ್ಕೆ  ಹೊಸ ಬ್ರಿಡ್ಜ್ ಪೂಜೆ ಮಾಡಿಸೋಣ ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು. ಅಷ್ಟೇ ಅಲ್ಲದೆ ಹಗಲಿರುಳೆನ್ನದೆ  ಕೇಲಸ ಮಾಡಿ ಎಂದು ಸೂಚಿಸಿದರು. ಓವರ್ ಬ್ರಿಡ್ಜ್  ಮುಕ್ತಾಯದ ಎರಡು ಬದಿಯಲ್ಲಿ ಯಾವುದೇ ಕಾರಣಕ್ಕೂ  ರಸ್ತೆ 'ಬಾಟಲ್ ನೆಕ್ ಆಗಬಾರದು. ಬ್ರಿಡ್ಜ್ನ ಎರಡು ಬದಿಯ ಕೊನೆಯಲ್ಲಿ  ಸಾಕಷ್ಟು ವಿಶಾಲತೆ ಕಾಣಬೇಕು ಎಂದು ಸೂಚಿಸಿದರು. ಪಾದಾಚಾರಿ ಮಾರ್ಗ ಸೇರಿದಂತೆ ಬಹಳ ಅನಕೂಲಕರ ಬ್ರಿಡ್ಜ್ ನಿಮರ್ಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

  ಈ ಸಂದರ್ಭದಲ್ಲಿ ಪಾಲಿಕೆ ಕಮಿಷ್ನರ್ ಶಶಿಧರ್ ಕುರೇರ ಹಾಗೂ ರೈಲ್ವೇ ಉನ್ನತಾಧಿಕಾರಿ ಸೇರಿದಂತೆ ಮತ್ತಿತರರು  ಉಪಸ್ಥಿತರಿದ್ದರು.