ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಸೌಕರ್ಯದ ಕೊರತೆ ಜನರ ಪರದಾಟ
ಕೊಪ್ಪಳ 27: ತಜ್ಞ ವೈದ್ಯರು, ಅಗತ್ಯ ವಿರುವ ಓಷಧಿಗಳನ್ನು ಹೊರಗಡೆ ಬರೆದು ಕೊಡಲಾಗುತ್ತದೆ.ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ದಿನ ನಿತ್ಯ ಎಕ್ಸರೆ ಮಾಡಿಸಲು ತಮ್ಮ ಕುಟುಂಬದ ಸದಸ್ಯರ ಎಕ್ಷರೇ ರಿಪೋರ್ಟ್ ಗೋಸ್ಕರ ಜನಸಾಮಾನ್ಯರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಗಿದೆ. ಕುಟುಂಬ ಸದಸ್ಯರ ನೋವು ಒಂದು ಕಡೆಯಾದರೆ ಇನ್ನೊಂದು ಕಡೆ ರಿಪೋರ್ಟ್ ಬರುವಷ್ಟರಲ್ಲಿ ವೈದ್ಯರು ಎಲ್ಲಿ ಹೋಗಿಬಿಡುತ್ತಾರೋ ಎಂಬ ಆತಂಕ ಇನ್ನೊಂದು ಕಡೆ.ಚರ್ಮ ರೋಗಕ್ಕೆ ಸಂಬಂದಿಸಿದ ಕೆಲವು ಗುಪ್ತ ಜಾಗದಲ್ಲಿ ಮಹಿಳೆಯರು ಚಿಕಿತ್ಸೆ ಪಡೆಯಲು ಹೋದರೆ ಮಹಿಳಾ ವೈದ್ಯರು ಸರಿಯಾದ ಸಮಯದಲ್ಲಿ ಇರುವುದೇ ಇಲ್ಲಾ.ಮಹಿಳಾ ವೈದ್ಯರು ಇಲ್ಲದೆ ಇದ್ದಾಗ ಹೆಣ್ಣುಮಕ್ಕಳು ಪುರುಷ ವೈದ್ಯರ ಹತ್ತಿರ ಚಿಕಿತ್ಸೆ ಪಡೆಯಲು ಮುಜುಗರಕ್ಕೆ ಒಳಗಾಗುವ ಸ್ಥಿತಿ ನಿರ್ಮಾಣವಾಗಿದೆ. ಚರ್ಮ ರೋಗಕ್ಕೆ ಸಂಬಂದಿಸಿದ ವೈದ್ಯರು ಖಾಸಗಿ ಆಸ್ಪತ್ರೆ ಹೊಂದಿದ್ದು ಅಲ್ಲಿಗೆ ಹೋಗಲು ಉತ್ಸಾಹಕರಾಗಿದ್ದಾರೆ.ಬುದುವಾರದಂದು ಎಕ್ಷರಗೆ ಸಂಬಂದಿಸಿದ ರೋಗಿಗಳ ಸಂಬಂದಿಕರು ಜಗಳ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಕ್ಷರೇ ಗೆ ಸಂಬಂದಿಸಿದ ಸಿಬ್ಬಂದಿಗಳು,ತಜ್ಞರನ್ನು ಕೇಳಿದರೆ ದಿನ ಇದೆ ಗೋಳು ನಾವೇನು ಮಾಡುವುದು ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ.ಇದು ನಮ್ಮ ಜಿಲ್ಲಾ ಆಸ್ಪತ್ರೆಯ ಚೀಟಿ ಮಾಡಿಸುವುದರಿಂದ ಹಿಡಿದು ಕೊನೆಗೆ ರಿಪೋರ್ಟ್ ಬರುವವರೆಗೂ ನಿತ್ಯ ನಿರಂತರ ಸಮಸ್ಯೆ ಎಂದು ಜನರು ತಮ್ಮನ್ನೇ ತಾವು ಬೈದುಕೊಂಡು ಇದು ನಮ್ಮ ಹಣೆಬರಹವೆಂದು ಮರಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್ ಜನರ ನಿಯಂತ್ರಣ ಮಾಡದೇ ಬೇಸತ್ತು ಹೋಗಿದ್ದಾರೆ.ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯಲ್ಲಿ ಶೌಚಾಲಯ, ಸ್ವಚ್ಛತೆ, ತಜ್ಞ ವೈದ್ಯರ ತುರ್ತು ಅಗತ್ಯವಿದೆ.ಮುಖ್ಯವಾದ ವೈದ್ಯರ ಬರೆದ ಕನಿಷ್ಠ ಬೆಲೆ ಬಾಳುವ ಓಷಧಿ ಜಿಲ್ಲಾ ಆಸ್ಪತ್ರೆಯ ಓಷಧಿ ಕೇಂದ್ರದಲ್ಲಿ ಸಿಕ್ಕುವುದೇ ಇಲ್ಲಾ.ಉದಾಹರಣೆ ಚರ್ಮ ರೋಗಕ್ಕೆ ಸಂಬಂದಿಸಿದ ಓಷಧಿಗಳು ಇನ್ನಿತರ ಸಣ್ಣ ಪುಟ್ಟ ಕಾಯಿಲೆಗಳಿಗೆ ಖಾಸಗಿ ಓಷಧಿ ಕೇಂದ್ರಗಳಿಗೆ ಓಷಧಿಗಳನ್ನು ಬರೆಯುತ್ತಿರುವುದರಿಂದ ದುಬಾರಿ ಬೆಲೆಯಲ್ಲಿ ಜನ ಕೊಂಡುಕೊಳ್ಳುವ ಅನಿವಾರ್ಯತೆ ಎದುರಾಗಿದೆ.ಕೆಲವು ರಾಜಕೀಯ ಪ್ರಭಾವಿ ವ್ಯಕ್ತಿಗಳಿಗೆ ಎಲ್ಲಾ ರೀತಿಯ ಚಿಕಿತ್ಸೆ ಓಷಧಿಗಳು ಸರಳ ರೀತಿಯಲ್ಲಿ ಸಿಕ್ಕುತ್ತದೆ.ಆದರೆ ಬಡವರು ತಮ್ಮ ಕುಟುಂಬದವರ ಅರೋಗ್ಯಕೋಸ್ಕರ ದಿನನಿತ್ಯ ಇಂತ ಚಳಿಗಾಲದಲ್ಲಿ ಜಿಲ್ಲಾ ಆಸ್ಪತ್ರೆ ಮೇಲೆ ನಂಬಿಕೆ ಇಟ್ಟು ಬರುತ್ತಾರೆ ಇಲ್ಲಿಯ ಅವ್ಯವಸ್ಥೆಯಿಂದ ಅವರೇ ಸುಸ್ತಾಗಿ ಹೋಗುತ್ತಾರೆ.ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಈ ಪರಿಸ್ಥಿತಿ ಗೊತ್ತಿದ್ದರೂ ಜಾಣ ಮೌನವಾಗಿದ್ದರೆ.
ಜನ ತಮ್ಮ ಕುಟುಂಬದ ಸದಸ್ಯರಿಗೆ ಇಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಇರುವುದರಿಂದ ಮನೆ ಮಠ, ಆಸ್ತಿ ಪಾಸ್ತಿ, ಮಾರಿ ದೂರದ ಬೆಂಗಳೂರು, ಮಂಗಳೂರು,ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೋ ಹೋಗುವಂತದ್ದು ಅತ್ಯಂತ ಶೋಚನಿಯ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬಂಧಪಟ್ಟ ಜಿಲ್ಲಾ ಆರೋಗ್ಯ ಅಧಿಕಾರಿಗಳು, ಹಾಗೂ ಜನಪ್ರತಿನಿಧಿಗಳು,ಆರೋಗ್ಯ ಸಚಿವರು, ಸಮಸ್ಯೆ ಬಗ್ಗೆ ಪರೀಶೀಲಿಸಿ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಸಮಾಜಿಕ ಹೋರಾಟಗಾರ ಶರಣು ಗಡ್ಡಿ ಯವರ ಅಗ್ರಹಾವಾಗಿದೆ