ಬಾಗಲಕೋಟೆ: ಕಾರ್ಮಿಕರ ದಿನಾಚರಣೆ ನಿಮಿತ್ಯವಾಗಿ ಎಚ್ ಶಿವರಾಮೇಗೌಡರ ಕನರ್ಾಟಕ ರಕ್ಷಣಾ ವೇದಿಕೆ ಕಾರ್ಮಿಕ ಘಟಕದಿಂದ ನಗರದ 50 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಾಗೂ ನೀರಲಕೇರಿಯ ಆಶ್ರಯಧಾಮ ದಲ್ಲಿರುವ ಮಕ್ಕಳಿಗೆ ಹಾಲು, ಹಣ್ಣು ವಿತರಿಸಿ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು.
ಕಾರ್ಮಿಕ ದಿನಾಚರಣೆ ಉದ್ದೆಶಿಸಿ ಕರವೇ ಜಿಲ್ಲಾ ಅಧ್ಯಕ್ಷ ಬಿ.ಎಮ್.ಪಾಟೀಲ ಮಾತನಾಡಿ ಕಾರ್ಮಿಕರು ದೇಶದ ಬೆನ್ನೆಲಬು ಆಗಿದ್ದು ಪ್ರತಿಯೋಬ್ಬ ಕಾಮರ್ಿಕನಿಗೆ ಮೂಲಭೂತ ಸೌಲಭ್ಯ ಕಲ್ಪಿಸುವದರೊಂದಿಗೆ ಪ್ರತಿಯೋಬ್ಬ ಕಾರ್ಮಿಕರನ್ನು ಗೌರವದಿಂದ ಕಾಣಬೇಕು. ಹಾಗೂ ಸರಕಾರ ಹಾಗೂ ಬೃಹತ್ ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುವಂತಹ ಕಾಮರ್ಿಕ ಕುಟುಂಬಗಳಿಗೆ ಹೆಚ್ಚಿನ ಸೌಕರ್ಯ ಒದಗಿಸಲು ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ಕಾರ್ಮಿಕ ಘಟಕದ ಅಧ್ಯಕ್ಷರಾದ ಪರಶುರಾಮ ಬುಳ್ಳಾಪುರ, ಪ್ರಧಾನ ಕಾರ್ಯದಶರ್ಿ ರವಿ ಅಂಬಿಗೇರ, ಹಾಗೂ ಕರವೇ ಪದಾಧಿಕಾರಿಗಳಾದ ಈರಣ್ಣ ಅತನೂರ, ಮಹಾದೇವ ಹೆಳವರ, ಪರಶುರಾಮ ಶಿಕ್ಕಲಗಾರ, ಬಾಷಾಸಾಬ ಮುಲ್ಲಾ, ಬಸವರಾಜ ಕುರಬರ, ಶೇಖರ ಶೆಟ್ಟರ, ಸಂಗಮೇಶ ದುಬಲಗುಂಡಿ, ಶಂಕರ ಮುತ್ತಲಗೇರಿ, ಸಂತೋಷ ಚಿನಿವಾಲ ಸೇರಿದಂತೆ ಇತರರು ಬಾಗವಹಿಸಿದ್ದರು.