ಕುವೆಂಪು ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳ ಆಶಾಕಿರಣ: ಬಾಗೇವಾಡಿ
Kuvempu Educational Institute is a ray of hope for students: Bagevadi
ತಾಳಿಕೋಟಿ 09: ಕಳೆದ 28 ವರ್ಷಗಳಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಕುವೆಂಪು ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ಮಕ್ಕಳ ಭವಿಷ್ಯದ ಆಶಾಕಿರಣವಾಗಿದೆ ಎಂದು ಕಮತಗಿ ಶ್ರೀ ಹುಚ್ಚೇಶ್ವರ ಪ.ಪೂ.ಕಾಲೇಜ ಉಪನ್ಯಾಸಕ ಎಚ್.ವಿ.ಬಾಗೇವಾಡಿ ಹೇಳಿದರು. ತಾಲೂಕಿನ ಬಳಗಾನೂರ ಕ್ರಾಸ್ ನಲ್ಲಿರುವ ಕುವೆಂಪು ಗ್ರಾಮೀಣ ಅಭಿವೃದ್ಧಿ ಸಂಸ್ಥೆ( ರಿ) ಇದರ ಪೂರ್ವ/ ಪ್ರಾಥಮಿಕ, ಪ್ರೌಢ, ಪ.ಪೂ. ಹಾಗೂ ಪದವಿ ಮಹಾ ವಿದ್ಯಾಲಯದ 2025- 2026 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಒಂದು ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುವುದು ಅತಿ ಕಷ್ಟದ ಕೆಲಸವಾಗಿದೆ ಇಂಥಹದರಲ್ಲಿ ಪ್ರಾಥಮಿಕ ದಿಂದ ಹಿಡಿದು ಪದವಿಯವರಿಗೆ ಈ ಸಂಸ್ಥೆಯನ್ನು ಬೆಳೆಸಿರುವುದು ಅಧ್ಯಕ್ಷ ಬಸವರಾಜ ನಾಯ್ಕೋಡಿ ಅವರ ತ್ಯಾಗ ಮತ್ತು ಪರಿಶ್ರಮವನ್ನು ಎತ್ತಿ ತೋರಿಸುತ್ತದೆ ನಾನು ಅವರನ್ನು ಅಭಿನಂದಿಸುತ್ತೇನೆ ಎಂದರು.
ಪ್ರಾಚಾರ್ಯ ಸವಿತಾ ಎಂ.ಕಾಗಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಮಯ ಪಾಲನೆಯನ್ನು ಬೆಳೆಸಿಕೊಂಡು ನಿರಂತರ ಪ್ರಯತ್ನವನ್ನು ಮಾಡುವುದರ ಮೂಲಕ ಶ್ರೇಷ್ಠ ಸಾಧನೆಯನ್ನು ಮಾಡಿ ಕಲಿತ ಸಂಸ್ಥೆ ಹಾಗೂ ಹೆತ್ತವರಿಗೆ ಕೀರ್ತಿ ತರುವಂತವ ರಾಗಬೇಕು ಎಂದರು. ಇದೇ ಸಂದರ್ಭದಲ್ಲಿ 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶಿವಶರಣೆ ಮಂಜುಳಾ ಅಮ್ಮನವರು ಸಾನಿಧ್ಯ ವಹಿಸಿದ್ದರು. ಕಕ್ಕೇರ ಭಾವೈಕ್ಯತಾ ಶಿಶುನಾಳ ಶರೀಫ ಮಠದ ಸಂತ ಶ್ರೀ ಶರೀಫ ಶಿವಯೋಗಿಗಳು ಪಾವನ ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಬಸವರಾಜ ಎನ್.ನಾಯ್ಕೋಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಡಿ.ಬಿ.ಪೂಜಾರಿ ವಾರ್ಷಿಕ ವರದಿ ವಾಚಿಸಿದರು. ವೇದಿಕೆಯಲ್ಲಿ ಗಣ್ಯರಾದ ನಿಂಗನಗೌಡ ಪಾಟೀಲ(ಬಳಗಾನೂರ),ಮಾತೋಶ್ರೀ ಮಂದಾಕಿನಿ ಷಣ್ಮುಖಪ್ಪ ಅಮ್ಮನವರು,
ಮುಖ್ಯ ಗುರುಮಾತೆ ಶಾರದಾ ಬಿ.ನಾಯ್ಕೋಡಿ, ನಿವೃತ್ತ ಶಿಕ್ಷಕ ಎಂ.ಎಸ್. ಹುಲ್ಲೂರ, ಉಪಾಧ್ಯಕ್ಷ ಮಧು ಬಿ.ನಾಯ್ಕೋಡಿ, ಪ್ರಧಾನ ಕಾರ್ಯದರ್ಶಿ ಮನು ಬಿ. ನಾಯ್ಕೋಡಿ,ಪ್ರಾಚಾರ್ಯ ಸವಿತಾ ಎಂ.ಕಾಗಿ, ಜಯಶ್ರೀ ಎಂ.ಕಾಗಿ ಉಪಸ್ಥಿತರಿದ್ದರು. ಸ್ಪಂದನಾ ಹಿರೇಮಠ ಪ್ರಾರ್ಥಿಸಿದರು. ಜ್ಯೋತಿ ವಿಜಾಪುರ ಭರತನಾಟ್ಯ ಪ್ರದರ್ಶಿಸಿದರು. ಶಿಕ್ಷಕಿ ಮ್ಯಾಗೇರಿ ನಿರೂಪಿಸಿದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 