ಲೋಕದರ್ಶನ ವರದಿ
ಕುರುಗೋಡು 16: ಪಟ್ಟಣದ ಮುಷ್ಟಗಟ್ಟೆ ರಸ್ತೆಯಲ್ಲಿನ ಐತಿಹಾಸಿಕ ಸುಪ್ರಸಿದ್ದ ಪಂಚಮುಖಿ ವೀರಭದ್ರೇಶ್ವರ ದೇವಸ್ಥಾನ ನಿದಿಗಳ್ಳರ ದಾಳಿಗೆ ತುತ್ತಾಗಿ ದೇವರ ಮೂತರ್ಿ ಮುಕ್ಕಾಗಿತ್ತು ಮತ್ತು ದೇವಸ್ಥಾನದ ಕಟ್ಟಡ ಸಂಪೂರ್ಣ ಶಿಥಿಲಾವ್ಯಸ್ಥೆಗೊಂಡಿದ್ದರಿಂದ ಮರುನಿಮರ್ಾಣ ಪ್ರಕ್ರಿಯೆ ಪ್ರಾರಂಭಗೊಂಡು ಮಂಗಳವಾರ ಗುರು ಪೂರ್ಣಮೆಯ ದಿನದಂದು ಗರ್ಭಗುಡಿಯ ಬಾಗಿಲು ಸ್ಥಾಪಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದಶರ್ಿಗಳಾದ ಕೆಎಂ.ರುದ್ರಮುನಿಸ್ವಾಮಿ ಮಾತನಾಡಿ, ಈ ದೇವಸ್ಥಾನವು ಕುರುಗೋಡಿನ ರಾಜರ ಆಡಳಿತ ಕಾಲದಲ್ಲಿ ನಿರ್ಮಾಣವಾಗಿತ್ತು. ದೇಶದಲ್ಲಿ ಎಲ್ಲಿಯೂ ಇಲ್ಲದ ಪಂಚಮುಖ ವೀರಭದ್ರ ದೇವರ ಮೂರ್ತಿ ಇಲ್ಲಿ ನಿರ್ಮಾಣಗೊಂಡಿರುವುದು ವಿಶೇಷವಾಗಿದೆ. ಇಂದಿಗೂ ಕುರುಗೋಡಿನ ಸಾರ್ವಜನಿಕರು ಶ್ರಾವಣಮಾಸದಲ್ಲಿ ಐದೂ ಸೋಮವಾರಗಳು ಬಂದರೆ ಮೊದಲನೆಯ ಸೋಮವಾರ ಈ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ದಾರ್ಮಾಕ ದತ್ತಿ ಇಲಾಕೆಯ ಸಹಾಯದಲ್ಲಿ ದೇವಸ್ಥಾನ ಮರು ನಿರ್ಮಾಣಗೊಳ್ಳುತ್ತದೆ ಎಂದರು.
ನಿವೃತ್ತ ಆರೋಗ್ಯ ಇಲಾಖೆ ಅಧಿಕಾರಿ ಎನ್.ಮರೇಗೌಡ ಮಾತನಾಡಿ, ಕುರುಗೋಡು ಐತಿಹಾಸಿಕ ಸುಪ್ರಸಿದ್ದ ಸ್ಥಳವಾಗಿದ್ದು, ಇಲ್ಲಿ ಅನೇಕ ವೀರಗಲ್ಲು, ಶಾಸನಗಳು, ಪುರಾತನ ಕಾಲದ ದೇವಸ್ಥಾನಗಳಿವೆ. ಈ ಪ್ರದೇಶವನ್ನು ಸಂಶೋಧನೆಗೆ ಒಳಪಡಿಸಿ ನಂತರ ಪ್ರವಾಸೋದ್ಯಮ ಇಲಾಖೆ ಸೇರಿಸಬೇಕು ಹಾಗೂ ಇಲ್ಲಿನ ಐತಿಹಾಸಿಕ ಸ್ಮಾರಕಗಳಿಗೆ ಸೂಕ್ತ ರಕ್ಷಣೆ ಒದಗಿಸುವ ಅವಶ್ಯಕತೆವಿದೆ. ಪಂಚಮುಖಿ ದೇವಸ್ಥಾನ ಮರು ನಿರ್ಮಾಣಗೊಳ್ಳುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬಾಸ್ಕರ್ ರಾವ್, ದಾನಯ್ಯಸ್ವಾಮಿ, ಹೂಗಾರ ಯೋಗೀಶ್, ಕೆಎಂ.ಲೋಕೇಶ್ಸ್ವಾಮಿ, ಹೊನ್ನುರಸ್ವಾಮಿ, ಕಗ್ಗಲ್ ಸಿದ್ದಪ್ಪ, ಎರ್ರಿಸ್ವಾಮಿ ಹಾಗೂ ಇನ್ನಿತರರು ಇದ್ದರು.