ಕುರುಬ ಸಮಾಜ ವತಿಯಿಂದ ದಾಸ ಶೇಷ್ಠ ಕನಕದಾಸರ ಜಯಂತ್ಯೋತ್ಸವ

ಕುರುಬ ಸಮಾಜ ವತಿಯಿಂದ ದಾಸ ಶೇಷ್ಠ ಕನಕದಾಸರ ಜಯಂತ್ಯೋತ್ಸವ Kuruba Samaj celebrates the birth anniversary of Dasa Sheshtha Kanakadasa

ಹೊಸಪೇಟೆ 30: ಇಂದು ಹೊಸಪೇಟೆ ವಿಜಯನಗರ ವಿಧಾನಸಭಾ ಕ್ಷೇತ್ರದ ಕಮಾಲಪುರ ಪುರಸಭೆಯ 17ನೇ ವಾರ್ಡ ನಲ್ಲಿ ನಡೆದ ಹಾಲುಮತ ಕುರುಬ ಸಮಾಜ ವತಿಯಿಂದ ದಾಸ ಶೇಷ್ಠ ಕನಕದಾಸರ ಜಯಂತ್ಯೋತ್ಸವವನ್ನು ಹಮ್ಮಿಕೊಳ್ಳಲಾಯಿತು. 

 ಹೊಸಪೇಟೆ ಸಮಾಜ ಸೇವರು ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಹೆಚ್‌. ಎನ್‌. ಮೊಹಮ್ಮದ್ ಇಮಾಮ್ ನಿಯಾಜಿ ಅವರು ಭಾಗವಹಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಕವಿ, ತತ್ವಜ್ಞಾನಿ ಮತ್ತು ಹರಿದಾಸರು ಹಾಗು ದಾಸ ಶೇಷ್ಠ ಕನಕದಾಸರ ಜಯಂತಿಯ ಹಾರ್ಧಿಕ ಶುಭಾಶಯಗಳನ್ನು ತಿಳಿಸಿದರು.  

ಕತ್ತಿ ಗುರಾಣಿ ಹಿಡಿದು ರಣರಂಗದಲ್ಲಿ ಹೋರಾಡಿದ ದಂಡನಾಯಕನು ಶಸ್ತ್ರಗಳನ್ನು ತ್ಯಜಿಸಿ ಕೈಯಲ್ಲಿ ತಂಬೂರಿ ಹಿಡಿದು ಕೀರ್ತನಕಾರನಾಗಿ, ಲೇಖನಿ ಹಿಡಿದು ಕವಿಯಾಗಿ, ಅಧ್ಯಾತ್ಮ ತತ್ವ ಹೇಳಿದ ದಾರ್ಶನಿಕನಾಗಿ ಬದಲಾದ ಸೋಜಿಗವೇ ಕನಕದಾಸರ ಜೀವನ ವೃತ್ತಾಂತವಾಗಿದೆ.  

ಕನಕದಾಸರು ಕರ್ನಾಟಕದ ಒಬ್ಬ ಪ್ರಮುಖ ಕವಿ, ತತ್ವಜ್ಞಾನಿ, ಸಂಗೀತಗಾರ ಮತ್ತು ಸಂತರಾಗಿದ್ದರು, 1509 ರಲ್ಲಿ ಇಂದಿನ ಹಾವೇರಿ ಜಿಲ್ಲೆಯ ಬಂಕಾಪುರ ಬಳಿಯ ಬಾಡ ಗ್ರಾಮದಲ್ಲಿ ಜನಿಸಿದರು. ಮೂಲತಃ ತಿಮ್ಮಪ್ಪ ನಾಯಕ ಎಂದು ಹೆಸರಿಸಲ್ಪಟ್ಟ ಅವರು ಕುರುಬ ಸಮುದಾಯಕ್ಕೆ ಸೇರಿದ. ಬಚ್ಚಮ್ಮ ಮತ್ತು ಬೀರ​‍್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರು ಬರಿ ಒಂದು ಜಾತಿಗೇ ಸೀಮಿತವಾದ ದಾರ್ಶನಿಕರಲ್ಲ, ಎಲ್ಲಾ ಜಾತಿಗಳಿಗೆ ಬೇಕಾದವರು. 15 - 16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾಸರು ಎಂದರೆ ತಪ್ಪಾಗಲಾರದು. 

ಮತ್ತು ಆಧ್ಯಾತ್ಮಿಕತೆಗೆ ತಿರುಗುವ ಮೊದಲು ಯೋಧರಾಗಿದ್ದರು. ಯುದ್ಧದಲ್ಲಿ ಮರಣದಂಡನೆಯ ಅನುಭವದ ನಂತರ, ಅವರು ಲೌಕಿಕ ಜೀವನವನ್ನು ತ್ಯಜಿಸಿ ಶ್ರೀಕೃಷ್ಣನ ಆರಾಧನೆಗೆ ತಮ್ಮನ್ನು ಅರ​‍್ಿಸಿಕೊಂಡರು. ಕನಕದಾಸ ಜಯಂತಿಯಂದು ಇಂತಹ ಮಹಾನ್ ಕೀರ್ತನ ಕಾರರಾದ ಕನಕದಾಸರಿಗೆ ಗೌರವವನ್ನು ಸೂಚಿಸಲಾಗುತ್ತದೆ ಎಂದರು. 

ಕನಕದಾಸರನ್ನು ನಾವು ಪೂಜ್ಯ ಸಂತ ಮತ್ತು ತತ್ವಜ್ಞಾನಿಯಾಗಿ ನೋಡುತ್ತೇವೆ. ಕನಕದಾಸರ ಜೀವನ ಬೋಧನೆಗಳು, ಕೀರ್ತನೆಗಳು ಇಂದಿಗೂ ಲಕ್ಷಾಂತರ ಜನರಿಗೆ ಮಾರ್ಗದರ್ಶನ ಹಾಗೂ ಸ್ಪೂರ್ತಿಯಾಗಿದೆ.  

ಇದೇ ಸಂಧರ್ಭದಲ್ಲಿ ಕಮಾಲಪುರ ಹಾಲುಮತ ಸಮಾಜದ ಹಿರಿಯ ಮುಖಂಡರಾದ ಕರಿ ಬಸಪ್ಪ, ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ಡಿ.ಬಿ ಈರಣ್ಣ,  ಯರಂಗಳಿಗಿ ಹನುಮಂತಪ್ಪ, ಮಾಳಗಿರಾಮಸ್ವಾಮಿ, ವೆಂಕಟೇಶ್ ಬಡಿಗೇರ್, ರಶ್ಮಿ ರವರು ಹಾಗು ಕನ್ನಡ ವಿಶ್ವವಿದ್ಯಾಲಯ ಉಪನ್ಯಾಸಕರು ಹಾಗೂ ಕಮಾಲಪುರ ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಯುವಕರು ಮಹಿಳೆಯರು ಮಕ್ಕಳು ಭಾಗವಹಿಸಿದ್ದರು.