ಶಿಕ್ಷಕ ಕುಲಕಣರ್ಿಗೆ 'ಕನರ್ಾಟಕ ಶಿಕ್ಷಣ ರತ್ನ' ಪ್ರಶಸ್ತಿ

ಲೋಕದರ್ಶನ ವರದಿ

ವಿಜಯಪುರ 01: ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರದಲ್ಲಿ ಇತ್ತೀಚಿಗೆ ಭಾರತ ರತ್ನ ಸರ್.ಎಮ್.ವಿಶ್ವೇಶರಯ್ಯ ಇಂಜನಿಯರಿಂಗ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿಜಯಪುರದ ಶ್ರೀ ರುಕ್ಮಾಂಗದ ಹೈಸ್ಕೂಲ್ನ ವಿಜ್ಞಾನ ಶಿಕ್ಷಕ ಎಲ್.ಎಚ್.ಕುಲಕಣರ್ಿ ಅವರಿಗೆ ಕನರ್ಾಟಕ ಶಿಕ್ಷಣ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕ ಕುಲಕಣರ್ಿ ಅವರಿಗೆ ಶ್ರೀ ರುಕ್ಮಾಂಗದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅರುಣ ಸೋಲಾಪುರಕರ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಆನಂದ ಕುಕಲಕಣರ್ಿ ಹಾಗೂ  ಸಂಸ್ಥೆಯ ಎಲ್ಲ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.