ಕುರಣಿ: ವಿಧಿವಿತ್ತಾಗಿ ಬಸವಜಯಂತಿ ಆಚರಣೆ

ಲೋಕದರ್ಶನವರದಿ

ಉಳ್ಳಾಗಡ್ಡಿ-ಖಾನಾಪೂರ08: ಕುರಣಿ ಗ್ರಾಮದಲ್ಲಿ 886 ನೇಯ ಬಸವ ಜಯಂತಿಯನ್ನು ಮಂಗಳವಾರ ರಂದು ವಿಧಿವಿತ್ತಾಗಿ ಆಚರಿಸಲಾಯಿತು.

  ಮುಂಜಾನೆ ಕಲ್ಮೇಶ್ವರ ದೇವಸ್ಥಾನದಲ್ಲಿ ಬಸವೇಶ್ವರರ ನಾಮಕರಣ ಶಾಸ್ತ್ರ, ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು, ನಂತರ ನಡೆದ ಬಸವೇಶ್ವರ ಜಯಂತಿಯಂಗವಾಗಿ ವಿಶ್ವಗುರು ಬಸವೇಶ್ವರರ ಭಾವ ಚಿತ್ರದ ಮೆರವಣಿಗೆಗೆ ಕುರಣಿಯ ಅಡವಿಸಿದ್ದೇಶ್ವರ ಮಠದ ಶ್ರೀಮಲ್ಲಿಕಾಜರ್ುನ ದೇವರು ಪೂಜೆ ನೆರವೆರಿಸಿ ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಿದರು,

        ಭವ್ಯ ಮೆರವಣಿಗೆ:-ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಬಸವೇಶ್ವರ ಭಾವ ಚಿತ್ರದ ಮೆರವಣಿಗೆಯಲ್ಲಿ ಗ್ರಾಮದ ರೈತರು ಉರಿಬಿಸಿಲನ್ನು ಲೆಕ್ಕಿಸದೆ ಜೋಡೆತ್ತುಗಳನ್ನು ಶೃಂಗರಿಸಿಕೊಂಡು ವಿವಿಧ ವಾದ್ಯ ಮೇಳಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ಉತ್ಸಹದಿಂದ ಪಾಲ್ಗೊಂಡರು.  

 ಈ ಮೆರವಣಿಗೆ ಕಲ್ಮೇಶ್ವರ ದೇವಸ್ಥಾನಕ್ಕೆ ಕೋನೆಗೊಂಡಿತ್ತು, ಈ ಸಂದಭ್ದಲ್ಲಿ ಗ್ರಾಮದ ಭಕ್ತಾಧೀಗಳು ಹಾಗೂ ಗಣ್ಯರು ಮತ್ತು ಬಸವ ಬಳಗದ ವರು ಉಪಸ್ಥಿತರಿದ್ದರು,