ಲಂಡನ್, ಮೇ 2ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕರ, ಪ್ರತಿಷ್ಠಿತ ಮೆಲ್ಬೋನರ್್ ಕ್ರಿಕೆಟ್ ಕ್ಲಬ್ (ಎಂಸಿಸಿ)ಗೆ ಬ್ರಿಟಿಷೇತರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಮುಂಬರುವ ಅಕ್ಟೋಬರ್ 1 ರಿಂದ ಅಧಿಕೃತವಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.
2015ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿರುವ ಸಂಗಕ್ಕರ ಈ ಕ್ಲಬ್ಗೆ ಪ್ರಥಮ ಬ್ರಿಟಿಷೇತರ ಅಧ್ಯಕ್ಷರಾಗಿದ್ದಾರೆ. ಈ ವರ್ಷದ ಅಕ್ಟೋಬರ್ ಒಂದರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಅವರ ಅಧಿಕಾರಾವಧಿ ಒಂದು ವರ್ಷ ಆಗಿರಲಿದೆ. 2020ರ ಸೆಪ್ಟಂಬರ್ 20 ಕ್ಕೆ ಅಧಿಕಾರಾವಧಿ ಮುಕ್ತಾಯವಾಗಲಿದೆ.
41 ವರ್ಷದ ಸಂಗಕ್ಕರ ಹಲವು ವರ್ಷಗಳಿಂದ ಈ ಕ್ಲಬ್ನೊಂದಿಗೆ ಸಂಪರ್ಕ ಹೊಂದಿದ್ದಾರೆ. 2011ರಲ್ಲಿ 'ಸ್ಪಿರಿಟ್ ಆಫ್ ಕ್ರಿಕೆಟ್ ಕೌಡ್ರೆ ಲೆಕ್ಚರ್ ಉಪನ್ಯಾಸ ನೀಡಿದ್ದರು. 2012ರಲ್ಲಿ ಅವರಿಗೆ ಕ್ಲಬ್ನ ಆಜೀವ ಸದಸ್ಯತ್ವ ನೀಡಿ ಗೌರವಿಸಲಾಗಿತ್ತು. ಅದೇ ವರ್ಷ ಅವರು ಎಂಸಿಸಿಯ ವಿಶ್ವ ಕ್ರಿಕೆಟ್ ಸಮಿತಿಗೆ ಸೇರ್ಪಡೆಯಾಗಿದ್ದು, ಈಗಲೂ ಅದರ ಸದಸ್ಯರಾಗಿದ್ದಾರೆ.
ಎಂಸಿಸಿಯ ಮುಂದಿನ ಅಧ್ಯಕ್ಷರನ್ನಾಗಿ ತಮ್ಮನ್ನು ಆಯ್ಕೆ ಮಾಡಿರುವುದು ಬಹುದೊಡ್ಡ ಗೌರವವಾಗಿದೆ. ಕ್ಲಬ್ ನೀಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಜಾಗತಿಕ ಕ್ರಿಕೆಟ್ನಲ್ಲಿ ಎಂಸಿಸಿ ವಿಶ್ವದ ಅತ್ಯುತ್ತಮ ಕ್ರಿಕೆಟ್ ಕ್ಲಬ್ ಆಗಿದೆ ಎಂದು ಸಂಗಕ್ಕರ ಹೇಳಿರುವುದನ್ನು 'ಲಾಡ್ರ್ಸ ವೆಬ್ಸೈಟ್' ಪ್ರಕಟಿಸಿದೆ.
2020ನೇ ವರ್ಷ ಕ್ರಿಕೆಟ್ ಜಗತ್ತಿನಲ್ಲಿ ವಿಶೇಷವಾಗಿ, ಲಾಡ್ಸರ್್ ನಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆಯಲಿದೆ. ಎಂಸಿಸಿ ಅಧ್ಯಕ್ಷರಾಗಿ ಭವಿಷ್ಯದಲ್ಲಿ ಅದರ ಪಾತ್ರ ನಿರ್ವಹಿಸಲಿದ್ದು, ಇದರಿಂದ ನಾನು ರೋಮಾಂಚನಗೊಂಡಿದ್ದೇನೆ ಎಂದು ಮಾಜಿ ಎಡಗೈ ಬ್ಯಾಟ್ಸ್ ಮನ್ ಉತ್ಸುಕರಾಗಿ ನುಡಿದಿದ್ದಾರೆ