ಲೋಕದರ್ಶನ ವರದಿ
ಬೆಳಗಾವಿ,5: ದೀಪಾವಳಿ ಪ್ರಯುಕ್ತ ಬೆಳಗಾವಿ ತಾಲೂಕಿನ ಕುದ್ರೇಮನಿ ಗ್ರಾಮದ ಡಾ||ಬಾಬಾಸಾಹೇಬ ಅಂಬೇಡಕರ ಯುವಕ ಮಂಡಳ ಇವರ ವತಿಯಿಂದ ಮುಕ್ತ ಕಬ್ಬಡಿ ಸ್ಪಧರ್ೆಯನ್ನು ಗ್ರಾಮದ ಮರಾಠಿ ಮತ್ತು ಪ್ರಾಥಮಿಕ ಶಾಲೆಯ ಪ್ರಾಂಗಣದಲ್ಲಿ ಏರ್ಪಡಿಸಲಾಯಿತು, ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಮಾಜಿ ಶಾಸಕರಾದ ಸಂಜಯ ಪಾಟೀಲ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕ್ರೀಡಾಪಟುಗಳನ್ನು ಉದ್ಧೇಶಿಸಿ ಮಾತನಾಡುತ್ತ ಇಂದಿನ ದಿನಗಳಲ್ಲಿ ಯುವ ಜನಾಂಗವು ಬರೀ ಮೊಬೈಲ್ನಲ್ಲಿ ಫೇಸಬುಕ್, ವ್ಹಾಟ್ಸಪ್ ಮುಂತಾದವುಗಳಲ್ಲಿ ಹೆಚ್ಚು ಕಾಲಕಳೆಯುತ್ತಿದ್ದು ಇಂತಹ ಕ್ರೀಡೆಗಳು ನಶಿಸಿ ಹೋಗುವ ಹಂತ ತಲುಪುತ್ತಿವೆ, ಆದ್ದರಿಂದ ಇಂದಿನ ಯುವಜನಾಂಗವು ಕಬ್ಬಡಿ, ಕುಸ್ತಿ ಮುಂತಾದ ಭಾರತೀಯ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಆರೋಗ್ಯವನ್ನು ಸದೃಡಗೊಳಿಸುವದರ ಜೊತೆಗೆ ಉತ್ತಮ ಕ್ರೀಡಾಪಟುಗಳಾಗಿ ತಮ್ಮ ಗ್ರಾಮಕ್ಕೆ ಹಾಗೂ ದೇಶಕ್ಕೆ ಕೀತರ್ಿ ತರುವತ್ತ ಹೆಚ್ಚು ಗಮನಹರಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜನ ಕಲ್ಯಾಣ ಕಟ್ಟಡ ಮತ್ತು ಇತರೆ ನಿಮರ್ಾಣ ಕಾಮರ್ಿಕರ ಸಂಘ, ಗೋಮಟೇಶ ವಿದ್ಯಾಪೀಠ, ಬೆಳಗಾವಿ ವತಿಯಿಂದ ಕಟ್ಟಡ ಕಾಮರ್ಿಕರಿಗೆ ನೋಂದಣಿ ಕಾಡರ್ುಗಳನ್ನು ವಿತರಿಸಿದರು. ಸದರಿ ಸಂಘದ ವತಿಯಿಂದ ಉಳಿದ ಕಾಮರ್ಿಕರೂ ಸಹಿತ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರವೀಣ ಪಾಟೀಲ, ಸಾಗರ ಶೇರೆಕರ, ಉಮೇಶ ಚೌಗುಲೆ, ಸಂಜಯ ವೈ ಪಾಟೀಲ, ವಿನಯ ಕದಮ, ಡಾ||ಯಲ್ಲಪ್ಪಾ ಪಾಟೀಲ, ಪರಶುರಾಮ ತುಪ್ಪಟ, ಭೈರು ಆನಂದಾಚೆ, ತಾನಾಜಿ ಪಾಟೀಲ, ಸಂದೀಪ ಪಾಟೀಲ, ಲಕ್ಷ್ಮಣ ಪನ್ಹಾಳಕರ, ಉಮಾಜಿ ಪಾಟೀಲ, ರಾಜೇಂದ್ರ ಪಾಟೀಲ, ಡಾ||ವ್ಹಿ.ಜಿ.ಬಡಸ್ಕರ, ಅಶೋಕ ಪನ್ಹಾಳಕರ, ನಿಂಗಪ್ಪಾ ಯಳ್ಳೂರಕರ, ರವಳು ಪನ್ಹಾಳಕರ, ಗೋಪಾಲ ಪಾಟೀಲ ಮುಂತಾದ ಅನೇಕ ಪ್ರಮುಖರು ಹಾಗೂ ಗ್ರಾಮಸ್ತರು ಉಪಸ್ಥಿತರಿದ್ದರು.