ಉಮಾ ತಂಬ್ರಳ್ಳಿ ನಿಯೋಗದ ತಂಡ ಸಂಗಣ್ಣ ಕರಡಿ ಅವರಿಗೆ ಸನ್ಮಾನ

Kudos to Uma Tambralli delegation team Sanganna Kardi

ಉಮಾ ತಂಬ್ರಳ್ಳಿ ನಿಯೋಗದ ತಂಡ ಸಂಗಣ್ಣ ಕರಡಿ ಅವರಿಗೆ ಸನ್ಮಾನ  

ಕೊಪ್ಪಳ 16: ಉತ್ತಮ ಸಮಾಜ ಸೇವಾ ಕಾರ್ಯಕ್ಕೆಕರ್ನಾಟಕ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕೋಡ ಮಾಡಿದ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ಪಡೆದ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ಯವರ ನೇತೃತ್ವದ ಕ್ಲಬ್ ನಿ ಯೋಗದ ತಂಡ ಕೊಪ್ಪಳದ ಮಾಜಿ ಸಂಸದ ಕರಡಿ ಸಂಗಣ್ಣ ನಿವಾಸಕ್ಕೆ ತೆರಳಿ ಕ್ಲಬ್ ಪರವಾಗಿ ವಿಶೇಷ ಸನ್ಮಾನ ಮಾಡಲಾಯಿತು. ಕೊಪ್ಪಳ ಇನ್ನರ್ವಿಲ್ ಕ್ಲಬ್‌ಗೆ ಪ್ರಶಸ್ತಿ ಲಭಿಸಿರುವುದಕ್ಕೆ ಮಾಜಿ ಸಂಸದ ಸಂಗಣ್ಣ ಕರಡಿ ಅವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ವಿಶೇಷ ಕಾರ್ಯಕ್ರಮಗಳಿಗೆ ಕ್ಲಬ್ಬಿನ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ನೇತೃತ್ವದ ತಂಡದ ಪದಾಧಿಕಾರಿಗಳಿಗೆ ಆಹ್ವಾನ ನೀಡಿದರು.  

ಇದೇ ರೀತಿ ಉತ್ತಮ ಸಾಮಾಜಿಕ ಕಾರ್ಯಾಚಟುಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನಸಾಮಾನ್ಯರಿಗೆ ಉತ್ತಮ ಸೇವೆ ದೋರಕಿಸಿ ಕೊಡುವಂತೆ ಅವರು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಕ್ಲಬ್ ಪರವಾಗಿ ಪ್ರಶಸ್ತಿ ಪುರಸ್ಕೃತೆ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ, ಮಹೇಶ್ ತಂಬ್ರಳ್ಳಿ,  ಹಿರಿಯ ವೈದ್ಯ ರಾಧ ಡಾ, ರಾಧಾ ಕುಲಕರ್ಣಿ, ಸುದೆಶ್ ಪಟ್ಟಣಶೆಟ್ಟಿ ಚಂದ್ರು ಬೆಟಗೇರಿ ಮಹಿಳಾ ಮುಖಂಡರಾದ ಮಂಜುಳಾ ಕರಡಿ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳಾದ ಸುಜಾತಾ ಪಟ್ಟಣಶೆಟ್ಟಿ,  ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ, ಸಂಪಾದಕಿ ನಾಗವೇಣಿ ವಿದ್ಯಾ ಬೆಟಿಗೇರಿ ಪದ್ಮ ಜೈನ್ ಸೇರಿದಂತೆ ಸದಸ್ಯರು ಮಹಿಳಾ ಸಂಘಟನೆ ಗಳ ಪದಾಧಿಕಾರಿಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು.