ಕುಸನಾಳ ಅಂಗನವಾಡಿ ಕೇಂದ್ರ ಉದ್ಘಾಟನೆ

ಶೇಡಬಾಳ 12: ಸಕರ್ಾರ ಅನೇಕ ಯೋಜನೆಗಳ ಮೂಲಕ ಅಂಗನವಾಡಿ ಮಕ್ಕಳಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಿದ್ದು, ಅದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

ಅವರು ಶುಕ್ರವಾರ ದಿ. 11 ರಂದು ಕಾಗವಾಡ ತಾಲೂಕಿನ ಕುಸನಾಳ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಹಾಗೂ ನರೆಗಾ ಯೋಜನೆಯಡಿಯಲ್ಲಿ ನೂತನವಾಗಿ ನಿಮರ್ಿಸಲಾಗಿದ್ದ  2 ಸುಸಜ್ಜಿತ ಅಂಗನವಾಡಿ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಕುಸನಾಳ ಗ್ರಾಪಂ ಅಧ್ಯಕ್ಷರು ಹಾಗೂ ಸಿಡಿಪಿಓ ಡಾ. ಸುರೇಶ ಕದ್ದು ಅವರ ಮಾರ್ಗದರ್ಶನದಂತೆ ಕಟ್ಟಡದ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಯನ್ನು ಕೈಗೊಂಡಿದ್ದು ವಿಶೇಷವಾಗಿದೆ. ಪ್ರತಿ ಗ್ರಾಮಗಳಲ್ಲಿ ಇಂತಹ ಕಟ್ಟಡಗಳ ಅವಶ್ಯಕತೆ ಇದೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ, ಕೆಪಿಸಿಸಿ ಸದಸ್ಯ ಕಿರಣಕುಮಾರ ಪಾಟೀಲ, ಚಂದ್ರಕಾಂತ ಇಮ್ಮಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ. ಸುರೇಶ ಕದ್ದು, ಎಸ್ಡಿಸಿ ಡಿ.ಎನ್.ನಂದೇಶ್ವರ, ಮೇಲ್ವಿಚಾರಕಿ ಸಿ.ವಾಯ್.ಗೊಲ್ಲರ, ಕುಸನಾಳ-ಮೋಳವಾಡ ಗ್ರಾಪಂ ಅಧ್ಯಕ್ಷ ಜಯಪಾಲ ಯರಂಡೋಲಿ, ಉಪಾಧ್ಯಕ್ಷೆ ಶಾಂತವ್ವ ಕಾಂಬಳೆ, ಪಿಡಿಓ ಗುರವ, ಸದಸ್ಯರಾದ ರತ್ನಬಾಯಿ ತುಪಳೆ, ವಿನೋದ ಪಾಟೀಲ, ನೇತಾ ಮಾಂಜರೆ, ಉಷಾರಾಣಿ ಗುರವ, ಅಮೀತ ಪಾಟೀಲ, ರಾಜು ಕಾಗವಾಡೆ, ಸಹದೇವ ಮಠಪತಿ, ಭೀಮವ್ವ ಬೇರಡ, ಪಿಕೆಪಿಎಸ್ ಅಧ್ಯಕ್ಷ ಸಂದೀಪ ಮಗದುಮ ಸೇರಿದಂತೆ ಗ್ರಾಮದ ಮುಖಂಡರು, ಅಂಗನವಾಡಿ ಕಾರ್ಯಕತರ್ೆಯರು, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಇದ್ದರು.