ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ವಾತ್ಸಲ್ಯ ಮನೆ ಹಸ್ತಾಂತರ

Kshetra Dharmasthala Rural Development Project: Handover of Vatsalya House

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ವಾತ್ಸಲ್ಯ  ಮನೆ ಹಸ್ತಾಂತರ 

 ರಾಣೇಬೆನ್ನೂರು 26: ಸಮಾಜದಲ್ಲಿ ಇದ್ದವರು ಇಲ್ಲದವರಿಗೆ, ಅವರ ಸಮಾನತೆಯ ಬದುಕಿಗಾಗಿ, ಸಂಘ, ಸಂಸ್ಥೆಗಳು, ಮಠ, ಪೀಠಗಳು ತಮ್ಮ ಮಾನವೀಯ ನೆಲೆಗಟ್ಟಿನಲ್ಲಿ ಸಹಾಯ ಹಸ್ತವನ್ನು ನೀಡಲು ಮುಂದೆ ಬರಬೇಕಾದ ಇಂದಿನ ಅಗತ್ಯವಿದೆ ಎಂದು ಎಸ್ ಕೆ ಡಿ ಆರ್ ಡಿ ಪಿ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು  ಕರೆ ನೀಡಿದರು. ಅವರು ತಾಲೂಕಿನ ಇಟಗಿ  ವಲಯದ ನಾಗೇನಹಳ್ಳಿ ಕಾರ್ಯಕ್ಷೇತ್ರದ ವಾತ್ಸಲ್ಯ ಪಲಾನುಭವಿ ಲಲಿತವ್ವ ಪೂಜಾರಿ ಅವರಿಗೆ ಯೋಜನೆಯ ಅಡಿಯಲ್ಲಿ ನಿರ್ಮಿತ  ವಾತ್ಸಲ್ಯ  ಮನೆ ಹಸ್ತಾಂತರಿಸಿ ಮಾತನಾಡಿದರು. ನಾಗೇನಹಳ್ಳಿ ವ್ಯಾಪ್ತಿಯಲ್ಲಿ, ಲಲಿತವ್ವ ಪೂಜಾರಿ ಅವರನ್ನು, ಪರಿಗಣಿಸಲಾಗಿದ್ದು, ಕ್ಷೇತ್ರದ ಬಹುನೀರೀಕ್ಷಿತ ಯೋಜನೆಯಲ್ಲಿ ಆಯ್ಕೆಯಾಗಿದ್ದು, ಮನೆ ನಿರ್ಮಿಸಿ ಅವರಿಗೆ ಇಂದು ಹಸ್ತಾಂತರಿಸಲಾಗಿದೆ. ಪ್ರತಿಯೊಬ್ಬರು ಗೌರವಯುತ ಜೀವನ ನಡೆಸಬೇಕು ಅದು ಭಾರತೀಯ ಸಂಸ್ಕೃತಿ. ಸರಕಾರಗಳು ಅದಕ್ಕಾಗಿ ಅನೇಕ ಯೋಜನೆಗಳು ಜಾರಿಗೆ ತಂದಿವೆಯಾದರೂ, ಅನೇಕಾನೇಕ ಕಾರಣಗಳಿಂದ ವಸತಿ ಸಿಗದೇ ನೀರ್ಗತಿಕ ಜೀವನ ಸಲ್ಲಿಸಬೇಕಾಗುತ್ತದೆ ಇಂತಹ ಸಂದರ್ಭದಲ್ಲಿ ಎಸ್ ಕೆ ಡಿ ಆರ್ ಡಿ ಪಿ ಯೋಜನೆ ಅಂಥವರಿಗೆ ಆಸರೆಯಾಗಿದೆ ಎಂದರು. ತಾಲೂಕಾ ಯೋಜನಾಧಿಕಾರಿ  ಮಂಜುನಾಥಗೌಡ ಅವರು ಮಾತನಾಡಿ, ನೊಂದು ಬೆಂದ ಜೀವಗಳಿಗೆ, ಮೂಲ ಸೌಕರ್ಯಗಳಿಂದ ವಂಚಿತರಾದವರಿಗೆ ಮಾತೃಶ್ರೀ ಅಮ್ಮನವರ ಆಶಯದಂತೆ ಈ ಯೋಜನೆ  ಜಾರಿಯಲ್ಲಿದೆ ಅರ್ಹತೆ ಹೊಂದಿದವರು ಅದರ ಪ್ರಯೋಜನ ಪಡೆಯಲು ಮುಂದಾಗಬೇಕು ಎಂದರು. ಈ ಸಂದರ್ಭದಲ್ಲಿ ಪ್ರಾದೇಶಿಕ  ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಲ್ಲಿಕಾ, ಗ್ರಾಮ ಪಂಚಾಯತ ಅಧ್ಯಕ್ಷ ರೇಖಾ ಪುಟ್ಟಕ್ಕನವರ, ತಾಲೂಕಾ ಯೋಜನಾಧಿಕಾರಿ ಮಂಜುನಾಥ ಗೌಡ, ಜಿಲ್ಲಾ ಜನಜಾಗೃತಿ ಸದಸ್ಯಮಾರ್ಕಂಡೆಪ್ಪ ನೇಕಾರ, ಮತ್ತಿತರರು ಮಾತನಾಡಿದರು ವೇದಿಕೆಯಲ್ಲಿ ಗ್ರಾಮದ ಮುಖಂಡರಾದ ಮಲ್ಲಿಕಾರ್ಜುನ್ ಹಲಗೇರಿ, ತಿಪ್ಪನಗೌಡ ಮುದುಕನಗೌಡರ ,ಒಕ್ಕೂಟದ ಅಧ್ಯಕ್ಷ ಶ್ರೀಮತಿ ಇಂದ್ರಮ್ಮ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶೋಭಾ, ಸೇವಾ ಪ್ರತಿನಿಧಿ ಕೌಶಲ್ಯ, ಒಕ್ಕೂಟದ ಪದಾಧಿಕಾರಿಗಳು, ಸೇವಾ ಪ್ರತಿನಿಧಿ, ಸದಸ್ಯರು ಉಪಸ್ಥಿತರಿದ್ದರು.