ಕೃಷ್ಣಾಕಿತ್ತೂರ ಅಮೃತ ಮಹೋತ್ಸವ ಜ್ಞಾನಗೋಷ್ಠಿ

Krishnakittoor Amrita Mahotsava Knowledge Conference

ಕೃಷ್ಣಾಕಿತ್ತೂರ ಅಮೃತ ಮಹೋತ್ಸವ ಜ್ಞಾನಗೋಷ್ಠಿ  

ಕಾಗವಾಡ, 03; ಪಪೂ ಸಿದ್ದೇಶ್ವರ ಶ್ರೀಗಳ ಗುರುಗಳಾದ ಪಪೂ ಮಲ್ಲಿಕಾರ್ಜುನ ಶಿವಯೋಗಿಗಳು 1939 ರಿಂದ ನಾಡಿನೆಲ್ಲಡೆ ಸಂಚರಿಸುತ್ತ ತಮ್ಮ ಜ್ಞಾನ ಸುಧೆಯನ್ನು ಭಕ್ತರಿಗೆ ಉಣಬಡಿಸಿ ಜ್ಞಾನ ಯೋಗಾಶ್ರಮ ಸ್ಥಾಪಿಸಿದರು. ವೇದಾಂತ ಕೇಸರಿ ಎಂಬ ಬಿರುದನ್ನು ಪಡೆದ ಅವರು, ಜಪಯಜ್ಞ, ತಪಸ್ಸು ಅನುಷ್ಠಾನಗಳನ್ನು ಮಾಡಿ, ಸಾವಿರಾರು ಗುರುಗಳನ್ನು ನಿರ್ಮಾಣ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆಂದು ಗದಗ ಶಿವಾನಂದ ಮಠದ ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು ತಿಳಿಸಿದ್ದಾರೆ. ಅವರು ದಿ. 02 ರಂದು ತಾಲೂಕಿನ ಕೃಷ್ಣಾಕಿತ್ತೂರ ಗುರುದೇವ ಆಶ್ರಮದಲ್ಲಿ ಶ್ರೀ ಮಲ್ಲಿಕಾರ್ಜುನ ಶ್ರೀಗಳ ಪಾವನ ಆಗಮನದ ಅಮೃತ ಮಹೋತ್ಸವ ಹಾಗೂ ಶ್ರೀ ಬಸವೇಶ್ವರ ಶ್ರೀಗಳ ಗುರುದೀಕ್ಷಾ ಸ್ವೀಕಾರ ರಜತ ವರ್ಷದ ಸಮಾರಂಭದಲ್ಲಿ ಜ್ಞಾನ ಗೋಷ್ಠಿಯನ್ನು ಉದ್ದೇಶಿಸಿ ಆಶೀರ್ವಚನ ನೀಡುತ್ತಿದ್ದರು. ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳು 1948 ರಲ್ಲಿ ಕೃಷ್ಣಾಕಿತ್ತೂರ ಗ್ರಾಮಕ್ಕೆ ಪಾದಾರೆ​‍್ಣ ಮಾಡಿ, ಆಧ್ಯಾತ್ಮದ ಸಿಂಚನವನ್ನು ನೀಡಿ, ಗ್ರಾಮವನ್ನು ಉದ್ದರಿಸಿದರು. ಮತ್ತು 40 ವರ್ಷಗಳ ಹಿಂದೆ ಶ್ರೀ ಸಿದ್ದೇಶ್ವರ ಶ್ರೀಗಳು ಕೂಡ ಇಲ್ಲಿ ಸಾಕಷ್ಟು ಪ್ರವಚನಗಳನ್ನು ನೀಡಿ ಹಠಯೋಗ, ಜಪಯೋಗಯಂತಹ ಅನೇಕ ಧಾರ್ಮಿಕ ಸಂಸ್ಕಾರಗಳನ್ನು ನೀಡಿ, ಪಾವನಗೊಳಿಸಿದ್ದಾರೆ. ಜೊತೆಗೆ ಈ ಗುರುದೇವ ಆಶ್ರಮಕ್ಕೆ ಒಬ್ಬ ಶ್ರೇಷ್ಠ ಆಧ್ಯಾತ್ಮಿಕ ಗುರುಗಳಾದ ಶ್ರೀ ಬಸವೇಶ್ವರ ಶ್ರೀಗಳನ್ನು ನೀಡಿದ್ದಾರೆ. ಅವರು ಕಳೆದ 25 ವರ್ಷಗಳಿಂದ ಮಕ್ಕಳಿಗೆ ಬಾಲ ಸಂಸ್ಕಾರ, ಜಪಯೋಗ, ಮಾಸಿಕ ಸತ್ಸಂಗ, ಭಜನೆ, ಲಲಿತ ಸಹಸ್ರ ನಾಮಾವಳಿ, ಪೂಜಾ ಪದ್ಧತಿ ಸೇರಿದಂತೆ ಅನೇಕ ಧಾರ್ಮಿಕ ಸಂಸ್ಕಾರಗಳನ್ನು ಕಲಿಸುತ್ತಾ ಈ ಪರಿಸರವನ್ನೇ ಪಾವನಗೊಳಿಸಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ ಸತೀಶ ಜಾಧವ ಮಾತನಾಡಿ, ಪ್ರತಿಯೊಬ್ಬರಿಗೆ ಉನ್ನತ ಜ್ಞಾನವನ್ನು ಪಡೆಯಬೇಕಾದರೇ ಗುರುವಿನ ಸನ್ನಿಧಾನವನ್ನು ಪಡೆದು ಗುರುವಿನ ಗುಲಾಮನಾದರೆ ಮಾತ್ರ ನಿಜವಾದ ಜ್ಞಾನವನ್ನು ಪಡೆಯಲು ಸಾಧ್ಯವಾಗುತ್ತದೆ. ಗುರು-ಶಿಷ್ಯರ ಸಂಬಂಧ ಅತ್ಯಂತ ಪವಿತ್ರವಾದದ್ದು, ತಾಯಿ ಮಗುವಿನ ಸಂಬಂಧ ಇದ್ದಂತೆ. ಗುರು ತನ್ನ ಎಲ್ಲ ಜ್ಞಾನವನ್ನು ಶಿಷ್ಯರಿಗೆ ಧಾರೆ ಎರೆಯುತ್ತಾರೆ. ಎಂದರು.  ದಿವ್ಯ ಸಾನಿಧ್ಯವನ್ನು ವಹಿಸಿದ್ದ ಶಿವಾನಂದ ಮಠದ ಮಲ್ಲಯ್ಯ ಮಹಾಸ್ವಾಮಿಗಳು ಮಾತನಾಡಿ, ಭಕ್ತಿ, ಜ್ಞಾನ ಮತ್ತು ವೈರಾಗ್ಯ ಇವು ತ್ರಿವೇಣಿ ಸಂಗಮಗಳಿದ್ದಂತೆ ಎಂದು ಹೇಳಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಸವೇಶ್ವರ ಶ್ರೀಗಳು ವಹಿಸಿ ಆಶೀರ್ವಚನ ನೀಡಿದರು. ಸಹಕಾರಿ ಅಧಿಕಾರಿ ಶಂಕರ ಕರಬಸಪ್ಪನವರ, ಅಶ್ವಿನಿ ಚೌಗಲಾ, ಗುರುದೇವ ಆಶ್ರಮದ ಪರಂಪರೆಯ ಬಗ್ಗೆ ಮಾತನಾಡಿದರು. ಇದೇ ವೇಳೆ ಸಾಧನೆ ಮಾಡಿದ ಗ್ರಾಮದ ಅನೇಕರನ್ನು ಸನ್ಮಾನಿಸಲಾಯಿತು. ಶಿವಗೌಡ ಚೌಗಲಾ ಕಾರ್ಯಕ್ರಮ ನಡೆಸಿಕೊಟ್ಟರು.