ಲೋಕದರ್ಶನ ವರದಿ
ಭಾಗ್ಯನಗರ 23: ಪಟ್ಟಣದ ಜ್ಞಾನ ಬಂಧು ಹಿರಿಯ ಪ್ರಾಥಮಿಕ & ಪ್ರೌಢ ಶಾಲೆಯಲ್ಲಿ ಶುಕ್ರವಾರದಂದು ಕೃಷ್ಣ ಜನ್ಮಾಷ್ಟಮಿ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಮಾಲಾ ಡಿ ಬಡಿಗೇರ ನಿವೃತ್ತ ಮುಖ್ಯೋಪಾಧ್ಯಾಯನಿ ಮಾತನಾಡಿ "ಕೃಷ್ಣನ ಜನನ, ಕಂಸನ ಸೆರೆಮನೆಯಲ್ಲಿ ಆಯ್ತು ಆದರೆ ಬೆಳದಿದ್ದು ನಂದನವನದ ಯಶೋಧೆಯ ಪಾಲನೆಯಲ್ಲಿ ನಂದ ಮಹಾರಾಜನ ಪಿತೃತ್ವದಲ್ಲಿ ಬೃಂದಾವನದ ಸರ್ವರ ಪ್ರೀತಿ ಪಾತ್ರನಾಗಿ ಬೆಳೆದು ಹಲವಾರು ರಾಕ್ಷಸರನ್ನು ಸಂಹರಿಸಿದ ವಿಶ್ವ ವಿರಾಟ ರೂಪಿ ಶ್ರೀಕೃಷ್ಣ. ಕೃಷ್ಣನ ಆಗರ್ಭ ಶ್ರೀಮಂತಿಕೆ, ಕುಚೇಲನ ಕಡು ಬಡತನ ಇವೆರಡು ಅವರ ಸ್ನೇಹಕ್ಕೆ ಎಂದೂ ಅಡ್ಡಿಯಾಗಲಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ನಾಗರಾಜ "ಶ್ರೀಕೃಷ್ಣನ ಜನ್ಮ ವೃತಾಂತ್ತ ಒಂದು ಕಾರ್ಯ ನಿಮಿತ್ತವಾದದ್ದು ಹೊರತು ಸಾಮಾನ್ಯವಾದುದ್ದಲ್ಲ ಎಂದರು.ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ದಾನಪ್ಪ ಕವಲೂರು ಮಾತನಾಡಿ "ಕೃಷ್ಣ ಜನ್ಮಾಷ್ಟಮಿ ಆಚರಣೆ ನಮ್ಮೆಲ್ಲರಿಗೂ ಒಂದು ಸದವಾಕಾಶ ಕಾರಣ ನಮ್ಮ ಮಕ್ಕಳನ್ನ ರಾಧೆ-ಕೃಷ್ಣರ ವೇಷಭೂಷಣಗಳನ್ನ ಮಾಡಿ ಪ್ರೀತಿ ಸ್ವರೂಪಿ ಭಗವಂತನನ್ನ ಕಾಣುತ್ತೇವೆ. ಅಷ್ಟೇ ಅಲ್ಲದೆ ದೇಶ ಕಂಡ ಮಾಹಾನ್ ನಾಯಕರುಗಳಾದ ಗಾಂಧೀ,ಚೆನ್ನಮ್ಮ, ರಾಯಣ್ಣ, ಸ್ವಾಮೀ ವಿವೇಕಾನಂದ ಮುಂತಾದ ಮಹನೀಯರ ಬಗ್ಗೆ ಪರಿಚಯಿಸಿ ಅವರ ವೇಷಭೂಷಣಗಳನ್ನು ಮಾಡಿ ಇಂತಹ ಮಹಾನ ವ್ಯಕ್ತಿಗಳ ಆದರ್ಶ, ಜೀವನ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು" ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೃಷ್ಣ-ರಾಧೆಯರ ವೇಷಭೂಷಣ ಧರಿಸಿ ಭಾಗವಹಿಸಿದ ಮಕ್ಕಳಿಗೆ ಬಹುಮಾನಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಕೆ. ರೋಸ್ ಮೇರಿ, ಮುಖ್ಯೋಪಾಧ್ಯಾಯಿನಿರಾದ ಜೋತಿ ಎಸ್.ಎಸ್., ಶಾಲಾ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗ, ಪಾಲಕರು ಹಾಗೂ ಮುದ್ದು ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಶಿವರಾಜ ನಿರೂಪಿಸಿದರು ಹಾಗೂ ಶಿಕ್ಷಕಿಯರಾದ ನಿಂಗಮ್ಮ ಸ್ವಾಗತಿಸಿ ಮಂಜುಳಾ ಎಮ್ ವಂದಿಸಿದರು.