ಗೋಕಾಕ 07: ತಾಲೂಕಿನ ಕೌಜಲಗಿ ಪಟ್ಟಣದ ಪ್ರಸಿದ್ಧ ಬಸವೇಶ್ವರ ದೇವರ ಜಾತ್ರೆಯು ಭಕ್ತರ ಹಷರ್ೋದ್ಘಾರದ ಮಧ್ಯೆ ಶನಿವಾರ ಏ.6 ರಂದು ಅದ್ದೂರಿಯಿಂದ ಜರುಗಿತು.
ಮುಂಜಾನೆ 7 ಗಂಟೆಗೆ ಬಸವೇಶ್ವರ ದೇವರ ಕತರ್ೃ ಗದ್ದುಗೆಗೆ ಮಹಾಭಿಷೇಕ, ಮಹಾಪೂಜೆ ಕಾರ್ಯಕ್ರಮ ನೆರವೇರಿದ ಬಳಿಕ 9 ಗಂಟೆಗೆ ಗೋವು ಪೂಜೆ ಹಾಗೂ ಚಂದ್ರಯ್ಯ ನೀಲಕಂಠಯ್ಯ ಹಿರೇಮಠ ಅವರ ಮನೆಯಿಂದ ರಥದ ಕಳಸವನ್ನು ಭವ್ಯ ಮೆರವಣಿಗೆಯ ಮೂಲಕ ಪಲ್ಲಕ್ಕಿಯಲ್ಲಿ ತರಲಾಯಿತು. ಪೂಜೆಯೊಂದಿಗೆ ಕಳಸವನ್ನು ಕುಶಲಕಮರ್ಿಗಳು ರಥದ ತುದಿಯಲ್ಲಿ ಜೋಡಿಸಿದರು. ಮಾಲೆ, ಬಾಳೆಗಡ, ಬಣ್ಣ ಬಣ್ಣದ ಬಟ್ಟೆ, ಛತ್ರ ಚಾಮರಗಳಿಂದ ಐದು ಅಂಕದ ಕಂಬದ ತೇರನ್ನು ಅಲಂಕರಿಸಿ ಸಾಯಂಕಾಲ 5 ಗಂಟೆಗೆ ಹರಹರ ಮಹಾದೇವ ಎಂಬ ಜನರ ಹಷರ್ೋದ್ಘಾರದೊಂದಿಗೆ ರಥೊತ್ಸವ ಕಾಯ್ಕ್ರಮ ನಡೆಯಿತು.
ಬಸವೇಶ್ವರ ದೇವರ ದೇವಸ್ಥಾನದಿಂದ ಪೇಟೆಯ ಪ್ರಮುಖ ರಸ್ತೆ, ಶಿವನಮಾರಿ ಹೊಟೇಲ್, ಜಂಗ್ಲಿಸಾಬ ದಗರ್ಾ, ಶಿವಪ್ಪ ಯಲಿಗಾರ ಮನೆಗಳ ರಸ್ತೆಯ ಮೂಲಕ ಜಾಂಬೋಟಿ-ರಬಕವಿ ರಾಜ್ಯ ಹೆದ್ದಾರಿ 54 ರ ಹತ್ತಿರವಿರುವ ಪಾದಗಟ್ಟೆಯವರೆಗೆ ರಥ ನಿರಾತಂಕ ಚಲಿಸಿತು. ಇದರ ಮದ್ಯೆ ಭಕ್ತರು ಹುರುಪಿನಿಂದ ಬಾಳೆಹಣ್ಣು, ಕಾರಿಕು, ಬೆಂಡು-ಬೆತ್ತಾಸ, ನಾಣ್ಯಗಳನ್ನು ರಥಕ್ಕೆ ಭಕ್ತಿಯಿಂದ ಹಾರಿಸಿದರು.
ರಥದ ಕಳಸಕ್ಕೆ ಯಾವುದೇ ದಕ್ಕೆಯಾಗದಂತೆ ಮುಂಚಿತವಾಗಿ ವಿದ್ಯುತ್ ತಂತಿಗಳನ್ನು ತುಂಡರಿಸಲಾಗಿದ್ದು, ಕುಶಲಕಮರ್ಿಗಳು ತಮ್ಮ ಪ್ರಾಣದ ಹಂಗು ತೊರೆದು ರಥದ ಕಳಸದ ರಕ್ಷೆಗೆ ಟೊಂಕಕಟ್ಟಿ ನಿಂತ ದೃಶ್ಯಗಳು ಕಂಡು ಬಂದವು. ನಂದಿಕೋಲು ಉತ್ಸವ ಮೂತರ್ಿಯನ್ನು ವಾದ್ಯಮೇಳಗಳೊಂದಿಗೆ ಮತ್ತೆ ಗೊಡಚನಮಲ್ಕಿ-ಬದಾಮಿ ರಾಜ್ಯ ಹೆದ್ದಾರಿ 134 ರಸ್ತೆಯ ಹತ್ತಿರವಿರುವ ಹಳೆಯ ಬಸವೇಶ್ವರ ಪಾದಗಟ್ಟೆಗೆ ತೆರಳಿ ಪೂಜೆ ಸಲ್ಲಿಸಿ ಮತ್ತೆ ರಥವನ್ನು ಸ್ವಸ್ಥಾನಕ್ಕೆ ತಂದು ನಿಲ್ಲಿಸಲಾಯಿತು. ಭಕ್ತರು ರಥ ಯಶಸ್ವಿಯಾಗಿ ಚಲಿಸಿದಕ್ಕೆ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ರಾತ್ರಿ ಭಜನಾ ಕಾರ್ಯಕ್ರಮಗಳು ನಡೆದವು.
ಪ್ರತಿ ವರ್ಷ ಯುಗಾದಿ ಪ್ರತಿಪದ ಪಾಡ್ಯದಂದು ಜರುಗುವ ರಥೋತ್ಸವಕ್ಕೆ ಕೌಜಲಗಿ, ಗೋಸಬಾಳ, ಮನ್ನಿಕೇರಿ, ಕಳ್ಳಿಗುದ್ದಿ, ಬಿಲಕುಂದಿ ಹೊನಕುಪ್ಪಿ, ಕುಲಗೋಡ, ರಡ್ಡೇರಹಟ್ಟಿ ಮುಂತಾದ ಸುತ್ತಲಿನ ಗ್ರಾಮಸ್ಥರು, ಭಕ್ತರು ಸಾಗರೋಪಾದಿಯಲ್ಲಿ ಅಸಂಖ್ಯಾತ ಭಕ್ತರು ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.