ಲೋಕದರ್ಶನ ವರದಿ
ಕೊಪ್ಪಳ 02: ಕೊಪ್ಪಳ ನಗರವನ್ನು ಧೂಳು ಮುಕ್ತವನ್ನಾಗಿ ಮಾಡಲು ಮತ್ತು ನಾಗರಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಾದರಿ ನಗರವನ್ನಾಗಿ ನಿಮರ್ಿಸುವದಕ್ಕಾಗಿ ಕಾಲಮಿತಿಯೊಳಗಾಗಿ ಯೋಜನೆಯನ್ನು ರೂಪಿಸುತ್ತಿದ್ದು, ಇದಕ್ಕೆ ಪ್ರತಿಯೊಬ್ಬರ ಸಹಕಾರಬೇಕೆಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್. ಶಂಕರ್ ಹೇಳಿದರು.
ಬುಧವಾರ ನಗರಸಭೆ ಕಾಯರ್ಾಲಯದಲ್ಲಿ ನಗರದ ಧೂಳು ಮತ್ತು ಪ್ರಮುಖ ರಸ್ತೆಯ ಕಾಮಗಾರಿ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳ ಸಭೆಯನ್ನು ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಪ್ರಮುಖವಾಗಿ ನಗರದ ಪ್ರಮುಖ ರಸ್ತೆಯಲ್ಲಿ ಧೂಳಿನ ಸಮಸ್ಯೆ ಹಾಗೂ ರಸ್ತೆ ನಿಮರ್ಾಣದ ಕಾಮಗಾರಿ ಬಗ್ಗೆ ಸಾರ್ವಜನಿಕರಿಂದ ದೂರುಗಳು ಇದ್ದು, ಇದು ನನಗೂ ಸಹ ಸ್ವತಃ ಅನುಭವಕ್ಕೆ ಬಂದಿದ್ದು, ಒಂದು ತಿಂಗಳ ಒಳಗಾಗಿ ಸಿ.ಸಿ.ರಸ್ತೆ ನಿಮರ್ಾಣ ಕಾಮಗಾರಿ ಮುಕ್ತಾಯಗೊಳಿಸಲು ಹಾಗೂ ತಕ್ಷಣದಿಂದ ದೂಳು ಸಮಸ್ಯೆಯ ನಿವಾರಣೆಗೆ ಅಧಿಕಾರಿಗಳಿಗೆ ಸೂಚಿಸಿದೆ ಎಂದರು.
ನಗರದ ಜನತೆಗೆ ಬೇಕಾದ ಅಗತ್ಯ ನಾಗರಿಕ ಸೌಲಭ್ಯಗಳನ್ನು ಕಲ್ಪಿಸಲು ಬದ್ಧವಾಗಿದ್ದು, ಪ್ರಮುಖವಾಗಿ ಸ್ವಚ್ಛತೆಗೆ ಹೆಚ್ಚು ಆದ್ಯತೆಯನ್ನು ನೀಡಿದ್ದು, ಜಿಲ್ಲಾಧಿಕಾರಿಗಳ ಕಛೇರಿಯಿಂದ ಜಿಲ್ಲಾ ಕ್ರೀಡಾಂಗಣದವರೆಗಿನ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯ ರಸ್ತೆ ಕಾಮಗಾರಿಯನ್ನು ಕಾಲಮಿತಿಯೊಳಗೆ ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದು, ರಸ್ತೆಯಲ್ಲಿ ಧೂಳು ತೆಗೆಸಲು ನಗರಸಭೆ ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ವಹಿಸಿಕೊಡಲಾಗಿದೆ ಎಂದು ತಿಳಿಸಿದರು.
ಪೌರ ಸಿಬ್ಬಂದಿಗಳಿಗೆ ನಿಯಮಿತವಾಗಿ ಸಂಬಳ ಪಾವತಿ ಮಾಡುವದು ಮತ್ತು ನಗರದ ಸ್ವಚ್ಚತೆ ಕಾರ್ಯಕ್ಕೆ ವಾರ್ಡವಾರು ಕೆಲಸಗಳನ್ನು ಹಂಚಿಕೊಡಲಾಗಿದ್ದು, ನಗರಸಭೆಗೆ ಸ್ವಚ್ಚತಾ ಕೆಲಸಗಳಿಗೆ ಬೇಕಾದ ವಾಹನ, ಸಾಮಾಗ್ರಿ ಇತ್ಯಾದಿಗಳ ಖರೀದಿಗೆ ಅನುಮೋದನೆ ನೀಡಲಾಗುವುದು , ಸದಸ್ಯರು, ಸಾರ್ವಜನಿಕರಿಂದ ಯಾವುದೇ ದೂರುಗಳು ಬರದಂತೆ ಕೆಲಸ ಮಾಡಲು ಅಧಿಕಾರಿಗಳಿಗೆ ಸೂಚನೆಯನ್ನು ಕೊಟ್ಟಿದ್ದು, ಸರಿಯಾಗಿ ಕರ್ತವ್ಯ ನಿರ್ವಹಿಸದವರ ವಿರುದ್ಧ ಕ್ರಮಕೈಗೊಳ್ಳುವದಾಗಿ ಹೇಳಿದ ಅವರು ನಗರದಲ್ಲಿನ ಧೂಳು ಸಮಸ್ಯೆ ತಿಳಿದುಕೊಳ್ಳಲು ಸ್ವತಃ ನಾನು ಬೈಕ್ ಮೂಲಕ ಸಂಚರಿಸಿದ್ದು, ಇನ್ನೂ ಮುಂದೆ ಪ್ರತಿ ವಾರ್ಡಗಳಲ್ಲಿಯೂ ಸಂಚರಿಸುವದಾಗಿ ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರ ಮುಕ್ತಾಯ: ನಗರದ ಮೂಲಕ ಹಾದು ಹೋಗಿರುವ ರಾ.ಹೆ.ಯ ಪ್ರಮುಖ ರಸ್ತೆಯ ಸಿ.ಸಿ.ರಸ್ತೆಯನ್ನು ಒಂದು ತಿಂಗಳೊಳಗಾಗಿ ಹಾಗೂ ಉಳಿದ ಕಾಮಗಾರಿಯನ್ನು ಮೂರು ತಿಂಗಳಲ್ಲಿ ಮುಕ್ತಾಯಗೊಳಿಸುವದಾಗಿ ಎನ್.ಹೆಚ್.ಅಧಿಕಾರಿಗಳು ಭರವಸೆಯನ್ನು ನೀಡಿದ್ದಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದರು.ಈಗಾಗಲೇ ನಗರದ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಪಡಿಸಿದ್ದು, ಕುಡಿಯುವ ನೀರು, ಸ್ವಚ್ಛತೆಯ ಕ್ರಮಗಳನ್ನು ಕೈಗೊಂಡಿದೆ, ನಗರದ ಅಭಿವೃದ್ಧಿಗಾಗಿ ಬೇಕಾಗುವ ಅನುದಾನವನ್ನು ಒದಗಿಸುವ ಭರವಸೆಯನ್ನು ನೀಡಿದರು. ಶಾಸಕ ರಾಘವೇಂದ್ರ ಹಿಟ್ನಾಳ, ಜಿಲ್ಲಾಧೀಕಾರಿ ಪಿ.ಸುನೀಲ್ ಕುಮಾರ್, ತಾಲೂಕು ಪಂಚಾಯತ ಅಧ್ಯಕ್ಷ ಬಾಲಚಂದ್ರನ್, ನಗರಸಭೆಯ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.