ಕೊಪ್ಪಳ ವಿಶ್ವವಿದ್ಯಾಲಯ ಉಳಿಯಬೇಕು : ಪವನ ಕುಮಾರ
ಕೊಪ್ಪಳ 20: ಕೊಪ್ಪಳ ವಿಶ್ವವಿದ್ಯಾಲಯ ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಅದು ಜಿಲ್ಲೆಯಲ್ಲಿ ಉಳಿಯಬೇಕು ಎಂದು ಕೊಪ್ಪಳ ವಿಶ್ವವಿದ್ಯಾಲಯ ರಕ್ಷಣಾ ಸಮಿತಿ (ವಿದ್ಯಾರ್ಥಿ ಒಕ್ಕೂಟ) ದ ಪವನ್ ಕುಮಾರ್ ಬಿಸರಹಳ್ಳಿ ಹೇಳಿದರು.ಬುಧವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸ್ಥಾಪಿತವಾದ ಬೀದರ್ ಮತ್ತು ಕೊಪ್ಪಳ ವಿಶ್ವವಿದ್ಯಾಲಯಗಳ ಪೈಕಿ ಬೀದರ್ ಹೊರತುಪಡಿಸಿ ಕೊಪ್ಪಳ ವಿಶ್ವವಿದ್ಯಾಲಯವನ್ನು ಮುಚ್ಚುವ ನಿರ್ಧಾರ ಉಪಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿಯಲ್ಲಿ ತೆಗೆದುಕೊಳ್ಳಲಾಗಿದೆ. ಕೊಪ್ಪಳ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಏಳು ಬಿ. ಎಡ್ ಮಹಾ ವಿದ್ಯಾಲಯವನ್ನು ಒಳಗೊಂಡು ಒಟ್ಟು 40 ಕಾಲೇಜುಗಳು, 13,000ಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ, ಕೊಪ್ಪಳ ವಿಶ್ವವಿದ್ಯಾಲಯ ಜಿಲ್ಲೆಯ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲಕರವಾಗಿದೆ, ವಿಶ್ವವಿದ್ಯಾಲಯವನ್ನು ಸರ್ಕಾರ ಯಾವುದೇ ಕಾರಣಕ್ಕೂ ಮುಚ್ಚಬಾರದು ಈಗಾಗಲೇ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಭೇಟಿಯಾಗಿ ಮುಚ್ಚಲು ಯಾವುದೇ ಕಾರಣಕ್ಕೂ ಬಿಡಬಾರದು ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದು ಒತ್ತಾಯಿಸಲು ತಿಳಿಸಿ ಆಶೀರ್ವಾದ ಪಡೆದು ಮುಂದೆ ಹಂತ ಹಂತವಾಗಿ ವಿಶ್ವವಿದ್ಯಾಲಯದ ಉಳಿವಿಗಾಗಿ ಪತ್ರ ಚಳುವಳಿ, ಸಹಿ ಸಂಗ್ರಹ, ಸೇರಿದಂತೆ ಹೋರಾಟಗಳನ್ನು ಹಮ್ಮಿಕೊಂಡು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು, ವಿಶ್ವವಿದ್ಯಾಲಯ ಉಳಿಯುವುದಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಲಾಗುವುದು ಇಲ್ಲದಿದ್ದರೆ ವಿಶ್ವವಿದ್ಯಾಲಯ ಉಳಿವಿಗಾಗಿ ಹೋರಾಟ ಮಾಡುವುದಾಗಿ ತಿಳಿಸಿದರು.ಸುದ್ದಿಗೋಷ್ಠಿ ಕೊಪ್ಪಳ ವಿಶ್ವವಿದ್ಯಾಲಯ ರಕ್ಷಣಾ ಸಮಿತಿ (ವಿದ್ಯಾರ್ಥಿ ಒಕ್ಕೂಟ) ದ ತಿರುಪತಿ ಕಾರಬಾರಿ, ಪದ್ಮಜಾ ನಾಗಲಾಪುರ ಮಠ, ಜುನಾಸಾಬ್, ಶೈನಜಾ ಬೇಗಂ ಉಪಸ್ಥಿತರಿದ್ದರು.