ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ- ಕೊಪ್ಪಳ

Koppal District Bachao Andolan Committee- Koppal

ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ- ಕೊಪ್ಪಳ 

  ಕೊಪ್ಪಳ  20:  ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ದಿನಾಂಕ್ 22 /02 /2025 ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕೊಪ್ಪಳದ ಹಿರಿಯ ಬಂಡಾಯ ಸಾಹಿತಿಗಳಾದ ಅಲ್ಲಮಪ್ರಭು ಬೆಟದೂರ ರವರು ಹೇಳಿದರು. 

 ಈ ಕಾರ್ಯಕ್ರಮಕ್ಕೆ ಹೆಸರಾಂತ ಪರಿಸರವಾದಿಗಳು ವಿಜ್ಞಾನಿಗಳಾದ ನಾಗೇಶ್ ಹೆಗಡೆಯವರು ಮತ್ತು ಹೇಮಂತ್ ರಾಮಡಗಿ ಪರಿಸರ ತಜ್ಞರು, ಕೈಗಾರಿಕೆಯಿಂದ ಭಾದಿತ ಜನಗಳು, ಪರಿಸರ ಪ್ರೇಮಿಗಳು ಭಾಗವಹಿಸುವರು. 

 ಕೊಪ್ಪಳದ ಹತ್ತಿರದಲ್ಲಿರುವ ಬಿಎಸ್ ಪಿ ಎಲ್ ಕೈಗಾರಿಕಾ ವಿಸ್ತಿರಣೆ ಮತ್ತು ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಜಮಿನ ಸರ್ವೆ ಮಾಡಿರುವುದು ವಿರುದ್ಧ ಈಗಾಗಲೇ ಹೋರಾಟ ಪ್ರಾರಂಭಿಸಿದ್ದೀವೆ. 

 ಗಿಣಿಗೇರಿ ಸುತ್ತಮುತ್ತಲಿನ ಬೃಹತ್ ಕೈಗಾರಿಕೆಗಳಿಂದ ಈಗಾಗಲೇ ಪರಿಸರ ನಾಶ, ರೈತರ ಜಮೀನು, ಜನಗಳ ಆರೋಗ್ಯ, ಕೃಷಿ ಬೆಳೆ ಸರ್ವನಾಶ ವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಮತ್ತೊಂದು ಬೃಹತ್ ಕೈಗಾರಿಕೆಗೆ ಮಾಡುವುದರಿಂದ ಅಲ್ಪಸ್ವಲ್ಪ ಭೂಮಿ ಕಳೆದುಕೊಳ್ಳುವುದರ ಮೂಲಕ ಪರಿಸರ ಜೊತೆ ಜನರ ಆರೋಗ್ಯವು ಹಾಳಾಗುವುದು ನಾವು ಖಡ ಖಂಡಿತವಾಗಿ ಖಂಡಿಸುತ್ತೇವೆ. 

 ಜನ ವಸತಿ ಪ್ರದೇಶಗಳಲ್ಲಿ ಈ ಕೈಗಾರಿಕೆಗಳನ್ನು ಸ್ಥಾಪನೆ ಮಾಡಬಾರದು ಅಣು ವಿದ್ಯುತ್ ಸ್ಥಾವರ ಕೂಡ ಜನವಸತಿ ಪ್ರದೇಶಗಳಲ್ಲಿ ನಿರ್ಮಿಸಬಾರದು ಹಾಗಾಗಿ ಈ ಎಲ್ಲ ವಿಷಯಗಳ ಕುರಿತು ಜನಗಳಿಗೆ ತಜ್ಞರಿಂದ ಪರಿಸರವಾದಿಗಳಿಂದ ಹೋರಾಟಗಾರರಿಂದ ಬಾದಿತ ಜನಗಳ ಅಳಲು ತೋಡಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಒಂದು ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ.ಎಲ್ಲಾ ಕೊಪ್ಪಳದ ಜನತೆ ಪರಿಸರ ಪ್ರೇಮಿಗಳು ಪ್ರಜ್ಞಾವಂತ ನಾಗರಿಕರು ಭಾಗವಹಿಸಬೇಕೆಂದು ಮನವಿ ಮಾಡಿದರು. 

 ಸಾಮಾಜಿಕ ಹೋರಾಟಗಾರರಾದ ಬಸವರಾಜ್ ಸುಳಿಬಾವಿಯರು ಮಾತನಾಡಿ ನಾವು ಕೈಗಾರಿಕಾ ವಿರೋಧಿಗಳಲ್ಲ. ಒಂದೇ ಪ್ರದೇಶದಲ್ಲಿ ಬೃಹತ್ ಕೈಗಾರಿಕೆಗಳನ್ನು ನಿರ್ಮಿಸಿ ಜನರಿಗೆ ಮಾರಕವಾಗಿರುವ ವಿಷ ಅನಿಲ ಮತ್ತು ದೂಳು ಇನ್ನಿತರ ಹಾನಿಕಾರಕ ತೊಂದರೆ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿರುದ್ಧ ಅಧಿಕಾರಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಹೇಳಿದರು. 

 ಡಿ.ಎಚ್ ಪೂಜಾರ್ ಅವರು ಮಾತನಾಡಿ ಕೈಗಾರಿಕಾ ಕಾನೂನು ಉಲ್ಲಂಘನೆ ಮಾಡಿ ರೈತರ ಮತ್ತು ಕಾರ್ಮಿಕರ ಎಲ್ಲಾ ಹಕ್ಕುಗಳನ್ನು ಧಮನ ಮಾಡಿ ಕಾರ್ಖಾನೆಯಾ ಮಾಲೀಕರು ಮೆರೆಯುತ್ತಿದ್ದಾರೆ. 

 ರೈತರ ಜಮೀನು ಮತ್ತು ಸಾರ್ವಜನಿಕ ಕೆರೆಗಳನ್ನು ನುಂಗಿ ಕಾನೂನು ವಿರೋಧಿ ನಡೆಯನ್ನು ಬಿಎಸ್‌ಪಿಎಲ್ ಕಂಪನಿ ಮಾಡುತ್ತಿದೆ. 

 ಈ ಕಂಪನಿಯ ನಡೆಯ ವಿರುದ್ಧ ಹಲವಾರು ವರ್ಷಗಳಿಂದ ನಾವು ಹೋರಾಟವನ್ನು ಸಂಘಟಿಸಿದ್ದೇವೆ ಮತ್ತು ಕೋರ್ಟ್‌ ಮೆಟ್ಟಿಲನ್ನು ಏರಿದ್ದೇವೆ ನ್ಯಾಯಕ್ಕಾಗಿ ಮುಂದೆಯೂ ಹೋರಾಡುತ್ತೇವೆ ಎಂದು ಹೇಳುವ ಮೂಲಕ ಸಾಹಿತ್ಯ ಭವನದಲ್ಲಿ ನಡೆಯುವ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಎಲ್ಲ ಜನರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. 

 ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮುಖಂಡರಾದ ಕಾಶಪ್ಪ ಚಲವಾದಿ, ಎ??? ಗಫರ್, ಜ್ಯೋತಿ ಗೊಂಡಬಾಳ, ಬಸವರಾಜ್ ಶೀಲವಂತರ್, ಶರಣು ಗಡ್ಡಿ, ಮಹಾಂತೇಶ್ ಕೊತ್ತುಬಾಳ, ಶಿವಪ್ಪ ಹಡಪದ್, ಶರಣು ಶೆಟ್ಟರ್, ಈರಣ್ಣ ತಾಳ ಕನಕಪುರ, ಮಾರುತಿ,ಇತರರು ಉಪಸ್ಥಿತರಿದ್ದರು.