87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಕೊಪ್ಪಳ ನಾಗರಿಕರ ವೇದಿಕೆ ಆಯ್ಕೆ

Koppal Citizens Forum Selection for 87th All India Literary Conference

87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಕೊಪ್ಪಳ ನಾಗರಿಕರ ವೇದಿಕೆ ಆಯ್ಕೆ

ಕೊಪ್ಪಳ 17: ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯಿಂದ 2024 ಡಿಸೆಂಬರ್‌. 22 ರಂದು ರವಿವಾರ  ಸಂಜೆ 7. ರಿಂದ 7.10 ವರೆಗೆ ಜಾನಪದ ನೃತ್ಯವೈಭವದ ಸಮೂಹ ನೃತ್ಯ ರೂಪಕವನ್ನು ಪ್ರಸುತ್ತ ಪಡಿಸಲು ಆಯ್ಕೆಯಾಗಿದೆ. ಈ ಜನಪದ ವೈಭವದ  ನೃತ್ಯ ರೂಪಕದಲ್ಲಿ ಒಟ್ಟು 45ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ವೈವಿದ್ಯಮಯ ಜಾನಪದ ಶೈಲಿಯ ನೃತ್ಯವನ್ನ ಪ್ರದರ್ಶಿಸಲಿದ್ದಾರೆ.  

ಕೊಪ್ಪಳ ನಾಗರಿಕರ ವೇದಿಕೆಯಿಂದ ಈಗಾಗಲೇ ವಿಜಯಪುರ, ಬೆಂಗಳೂರು, ಹಾಸನ, ರಾಯಚೂರು, ಮೈಸೂರು ಹಾಗೂ ಧಾರವಾಡಗಳಲ್ಲಿ ಜರುಗಿದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಸಮೂಹ ನೃತ್ಯ ಪ್ರದರ್ಶನವನ್ನು ನೀಡಿದೆ. ಅಲ್ಲದೇ ಗೋವಾದಲ್ಲಿ ನಡೆದ ಹೊರನಾಡ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ, ಮಂತ್ರಾಲಯದಲ್ಲಿ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ, ಕಾಶಿಯಲ್ಲಿ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ, ಪಾಂಡಿಚೇರಿಯಲ್ಲಿ  ಕನ್ನಡ ರಾಜ್ಯೋತ್ಸವ, ವಿಜಯನಗರ ಸಾಂಸ್ಕೃತಿಕ ವೈಭವ, ಆನೆಗೊಂದಿ ಉತ್ಸವ, ಕನಕಗಿರಿ ಉತ್ಸವ, ಹಂಪಿ ಉತ್ಸವ, ಉತ್ತರ ಕರ್ನಾಟಕ ಉತ್ಸವ, ಕೊಪ್ಪಳ ಜಿಲ್ಲಾ ಉತ್ಸವ, ಹೈಕ ಉತ್ಸವ,ಕಿತ್ತೂರು ಉತ್ಸವ ಇಟಗಿ ಉತ್ಸವ. ಕಲ್ಯಾಣ ಕರ್ನಾಟಕ ಉತ್ಸವಮೈಸೂರು ದಸರಾಮಂಡ್ಯದಲ್ಲಿ ಮಕ್ಕಳ ಸಾಂಸ್ಕೃತಿಕ ಸಮ್ಮೇಳನ, ಕೊಪ್ಪಳ ಜಿಲ್ಲೆಯ ರಜತ ಮಹೋತ್ಸವಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುಗ್ಗಿ-ಹುಗ್ಗಿ, ಜನಪದ ಜಾತ್ರೆ, ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ, ಪತ್ರಿಕಾ ದಿನಾಚರಣೆ, ಶಿಕ್ಷಕರ ದಿನಾಚರಣೆ ಹಾಗೂ ಇತರ ಕಾರ್ಯಕ್ರಮಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಸಮೂಹ ನೃತ್ಯ ಪ್ರದರ್ಶಿಸಿ ಜನ ಮೆಚ್ಚುಗೆ ಪಡೆದಿದೆ.ಈ ಬಾರಿ ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಡಾ. ಬಿ ಆರ್ ಅಂಬೇಡ್ಕರ್ ವೇದಿಕೆಯಲ್ಲಿ. ಕೊಪ್ಪಳ ಜಿಲ್ಲಾ ನಾಗರಿಕತೆ ವೇದಿಕೆಯ ಕಲಾವಿದರಾದ. ರುಕ್ಮಿಣಿ ಸುರುವೆ .ವಿದ್ಯಾ ಮಂಗಳೂರು ಅವನಿ ಗಂಗಾವತಿ. ಶಿಲ್ಪ ಮಂಗಳೂರು. ಸುಶೀಲಾ ಸುವೆ9. ಅನುಷಾ ಆರ್, ಶೀಲಾ ಜೀ.ವಿ ಅನ್ನಪೂರ್ಣ ಮನ್ನಾಪುರ ವೈ ಬಿ ಜೂಡಿ, ಜೈ ವಿಹಾನ್ ಮಲ್ಲಿಕಾರ್ಜುನ ಮಠ. ಸಂಜೀವ್ ಕುಮಾರ್ ನಿರಂಜನ್ ಸ್ವಾಮಿ. ಬಸವ ರೆಡ್ಡಿ ಅಬ್ಬಿಗೇರಿ. ಬಸವರಾಜ್ ಸಿನ್ನೂರ್‌. ಎಸ್‌.ಎಸ್ ಮಠದ. ರೋಹಿಣಿ ಎಂಎಸ್‌. ರಾಹುಲ್ ಕಲಾಲ್‌. ಅಭಯ್ ಸುರ್ವೆ.ವಿಜಯ್ ಗವಿಮಠ, ಶರಣಪ್ಪ ಹಾದಿ. ಇತರ 35ಕ್ಕೂ ಹೆಚ್ಚು  ಕಲಾವಿದರೂ  ಸೇರಿ ವೈವಿಧ್ಯಮಯ ಕಲ್ಯಾಣ ಕರ್ನಾಟಕದ ಜಾನಪದ ವೈಭವವನ್ನು ಸಾರುವ ಸಮೂಹ ನೃತ್ಯವನ್ನು ಮಾಡಲಿದೆ ಎಂದು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಬಾಬು ಸುರ್ವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.