ಲೋಕದರ್ಶನ ವರದಿ
ಕೊಪ್ಪಳ 16: ಪ್ರವಚನ ಸೇವ ಸಮಿತಿ ವತಿಯಿಂದ ಬಸವ ಜಯಂತಿ ಉತ್ಸವ ನಿಮಿತ್ಯ ದಿ. 19ರಿಂದ ಬರುವ ಮೆ ದಿ. 07ರ ವರೆಗೆ ಪ್ರತಿದಿನ ಸಂಜೆ 06:30 ರಿಂದ 08:00 ಗಂಟೆಯ ವರೆಗೆ ವಚನ ದರ್ಶನ ಆಧ್ಯಾತ್ಮಿಕ ಪ್ರವಚನ ಹಾಗೂ ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ದಿ. 19ರ ಶುಕ್ರವಾರ ಸಂಜೆ 06:30 ನಗರದ ಸಾರ್ವಜನಿಕ ಮೈದಾನದಲ್ಲಿ ಜರುಗಲಿದೆ. ಎಂದು ಟ್ರಸ್ಟ ಅಧ್ಯಕ್ಷ ಎಂ. ಬಸವರಾಜಪ್ಪ ತಿಳಿಸಿದರು.
ಅವರು ಮಂಗಳವಾರ ಬೆಳಿಗ್ಗೆ ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಪತ್ರಕಾಗೊಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸಮಾರಂಭದ ದಿವ್ಯಾ ಸಾನಿಧ್ಯವನ್ನು ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಜಮಖಂಡಿ ತಾಲೂಕಿನ ಹುನ್ನೂರ ಮದುರಬಂಡಿಯ ಬಸವಙ್ಞನ ಗುರುಕುಲದ ಪ್ರವಚನಕಾರ ಶರಣಶ್ರೀ ಡಾ. ಈಶ್ವರ ಮಂಟೂರ, ಆಗಮಸಿ ಪ್ರವಚನ ಮಾಡಲಿದ್ದಾರೆ. ಕ.ಸಾ.ಪ. ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಉದ್ಘಾಟನೆ ನೇರೆವೆರಿಸಲಿದ್ದು, ವಿವಧ ಗಣ್ಯರು ಉದ್ಯಮಿಗಳು ಸಂಘಟನೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ಅವರು ತಿಳಿಸಿದರು.
ದಿ. 19ರಂದು ಸಂಜೆಗೆ ನಡೆಯುವ ಕಾರ್ಯಕ್ರಮದಲ್ಲಿ ನಗರದ ಸಾವರ್ಾಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಮತ್ತು ದಿ. 19ರಿಂದ ಮೆ 07ರ ವರೆಗೆ ಪ್ರತಿದಿನ ಸಂಜೆ ಜರುಗುವ ಕಾರ್ಯಕ್ರಮದಲ್ಲಿ ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶರಣ ಡಾ. ಈಶ್ವರ ಮಂಟೂರ ಅವರ ಪ್ರವಚನ ಕಾರ್ಯಕ್ರಮ ಯಶಸ್ವಿಗೊಳಿಸಿ ಶ್ರೀಗಳ ಆಶಿವರ್ಾದ ಪಡೆಯಬೇಕೆಂದು ಎಂದು ಟ್ರಸ್ಟ ಅಧ್ಯಕ್ಷ ಎಂ. ಬಸವರಾಜಪ್ಪರವರು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಅವರೊಂದಿಗೆ ಪ್ರವಚನ ಸೇವಾ ಸಮಿತಿಯ ರಾಜೇಶ ಮತ್ತು ಶಿವಕುಮಾರ ಕುಕನೂರ ಉಪಸ್ಥಿತರಿದ್ದರು