ಕೊಪ್ಪಳ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು..?

ಲೋಕದರ್ಶನ ವರದಿ

ಕೊಪ್ಪಳ 10: ಲೋಕಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಪ್ರಚಾರದ ಭರಾಟೆಯಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆಗೆ ಸಭೆ, ಸಮಾವೇಶ, ರ್ಯಾಲಿಗಳು ಭರದಿಂದ ನಡೆದಿವೆ. ಈ ಮಧ್ಯೆ ಮಾಜಿ ಸಚಿವ, ಕಾಂಗ್ರೆಸ್ನ ಬಸವರಾಜ ರಾಯರಡ್ಡಿ ನೀಡಿದ ಜಾಹಿರಾತು ಇದೀಗ ಹಲವು ಗೊಂದಲ, ಚಚರ್ೆಗೆ ಕಾರಣವಾಗಿದೆ.

ಬುಧವಾರ ಜಾಹಿರಾತು ನೀಡಿರುವ ರಾಯರಡ್ಡಿ ನಡೆಯಿಂದಾಗಿ ಕ್ಷೇತ್ರದಲ್ಲಿ ಹತ್ತು ಹಲವು ಅನುಮಾನ, ಸಂಶಗಳಿಗೆ ಎಡೆಮಾಟಿಕೊಟ್ಟಿದೆ. ಚುನಾವಣೆ ಸಂದರ್ಭದಲ್ಲಿ ಇಂತಹ ವ್ಯಯಕ್ತಿಕ ಪ್ರಚಾರದ ಅವಶ್ಯಕತೆ ಇದೆಯೇ? ಅದರ ಪ್ರಸ್ತುತೆಯು ಇಲ್ಲದಿದ್ದರೂ ಪುಟಗಟ್ಟಲೆ ಜಾಹಿರಾತು ನೀಡಿರುವುದು ಯಾಕೆ..? ಇದರಿಂದ ಕಾಂಗ್ರೆಸ್ ಅಭ್ಯರ್ಥಿ  ರಾಯರಡ್ಡಿಯೋ ಅಥವಾ ಕೆ.ರಾಜಶೇಖರ್ ಹಿಟ್ನಾಳೋ ಎಂಬ ಗೊಂದಲಕ್ಕೆ ಕಾರ್ಯಕರ್ತರು ಒಳಗಾಗಿದ್ದಾರೆ.

ರಾಯರಡ್ಡಿ ನೀಡಿದ ಜಾಹೀರಾತಿನಲ್ಲಿ ಎಲ್ಲೂ ಸಹ ಕಾಂಗ್ರೆಸ್ನ ಅಧಿಕೃತ ಅಭ್ಯಥರ್ಿ ರಾಜಶೇಖರ್ ಹಿಟ್ನಾಳ ಅವರ ಫೋಟೋ ಅಥವಾ ಹೆಸರು ಇಲ್ಲ, ಅಭಿವೃದ್ಧಿಯೇ ನನ್ನ ಮಂತ್ರ, ಅದುವೇ ನಿಜವಾದ ಜನತಂತ್ರ ಎಂದು ಸ್ವಯಂ ಘೋಷಿಸಿಕೊಂಡ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ತಮ್ಮ ಮೂವತ್ತು ವರ್ಷದ ರಾಜಕೀಯ ಪರಿಚಯ ಮಾಡಿಕೊಂಡಿದ್ದಾರೆ. ಆ ಮೂಲಕ ಕಾಂಗ್ರೆಸ್ ಕಾರ್ಯಕರ್ತರಲ್ಲೇ ಗೊಂದಲ ಮೂಡಿಸಿದ್ದಾರೆ ಎನ್ನುವ ಮಾತು ಕೈ ಪಾಳೆಯದಲ್ಲಿ ಕೇಳಿಬಂದಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ರಾಯರೆಡ್ಡಿ ಪಕ್ಷದ ವರಿಷ್ಠರನ್ನು ಒಲೈಸಿಕೊಳ್ಳಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಪರಮೇಶ್ವರ ಫೋಟೋ ಇರುವ ಮತ್ತು ತಮ್ಮ ಬಗ್ಗೆ ಪರಿಚಯದ ಮಾಹಿತಿಯನ್ನೊಳಗೊಂಡ ಜಾಹಿರಾತು ಹಲವು ಚಚರ್ೆಗಳಿಗೆ, ರಾಜಕೀಯ ವಲಯದಲ್ಲಿ ಹಾಸ್ಯಸ್ಪದಕ್ಕೂ ಕಾರಣವಾಗಿದೆ. ಈ ಕುರಿತು ಅಭ್ಯಥರ್ಿ ರಾಜಶೇಖರ್ ಹಿಟ್ನಾಳ ಅವರ ಅಭಿಪ್ರಾಯ ಕೇಳಲು ಸಂಪರ್ಕ್ಸಿದರೂ ಅವರು ಲಭ್ಯವಾಗಿಲ್ಲ, ಆದರೂ ಅವರ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಪ್ರಕಟಗೊಂಡ ಜಾಹಿರಾತಿಗೆ ದಿಗಿಲುಕೊಂಡ ಕಾಂಗ್ರೆಸ್ ಕಾರ್ಯಕರ್ತರು ಲೋಕಸಭಾ ಅಭ್ಯಥರ್ಿ ಯಾರು ಎಂಬ ಗೊಂದಲದಲ್ಲಿದ್ದು, ಇದೀಗ ಯಾರ ಪರ ಮತಯಾಚನೆ ಮಾಡಬೇಕು? ಇದೊಂದು ರಾಜಕೀಯ ತಂತ್ರಗಾರಿಕೆ, ಹಾಗೂ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಠಿಸುವ ಮತ್ತು ತಮ್ಮ ಆಸ್ತತ್ವದ ಉಳಿವಿಗಾಗಿ ಪಕ್ಷದ ಹೆಸರಲ್ಲಿ ಹಾಕಿಸಿಕೊಂಡ ಪ್ರಚಾರದ ವಸ್ತುವಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಕ್ರ್ರಿಯಿಸಿದ್ದಾರೆ.

ಮತದಾರರ ಮೇಲೆ ಪರಿಣಾಮ..?: ಮಾಜಿ ಸಚಿವ ರಾಯರೆಡ್ಡಿ ನೀಡಿದ ಈ ಜಾಹಿರಾತು ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆಗೆ ಒಳಪಡುತ್ತಿದೆಯೋ ಇಲ್ಲವೋ ಆದರೆ ಇದು ನೇರವಾಗಿ ಮತದಾರರ ಮೇಲೆ ಪರಿಣಾಮ ಬೀರುವ ಜಾಹಿರಾತಾಗಿದೆ. ಚುನಾವಣಾ ಆಯೋಗದ ನಿಯಾಮಾನುಸಾರ ಅಧಿಕೃತ ಅಭ್ಯಥರ್ಿ ಅಥವಾ ಅವರು ಪ್ರತಿನಿಧಿಸುವ ಪಕ್ಷದಿಂದ ಪ್ರಕಟಣೆಗೆ ಕೊಟ್ಟಿರಬೇಕು. ಆದರೆ ಇಲ್ಲಿ ಅದು ಯಾವುದು ಇಲ್ಲ, ಇದರಿಂದ ಸ್ಪಧರ್ಿಸಿರುವ ಅಭ್ಯಥರ್ಿಗೂ ಲಾಭ ಇಲ್ಲ, ಕಾರ್ಯಕರ್ತರರಲ್ಲೂ ಸಂಶಯ, ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ದೂರಲಾಗಿದೆ.

ಈಗಾಗಲೆ ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗೆ ದೂರುಗಳು ಹೋಗಿದ್ದು, ಇದನ್ನು ಗಮನಿಸಿರುವ ಚುನಾವಣಾ ಆಯೋಗ ಇದು ಅಭ್ಯಥರ್ಿಯ ಅಥವಾ ಆ ಪಕ್ಷದ ವೆಚ್ಚದ ಲೆಕ್ಕಕ್ಕೆ ಬರುತ್ತಿದಯೇ ಹೇಗೆ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಪ್ರಕಟಣೆಯ ಕೊನೆಗೆ  ಕಾಂಗ್ರೆಸ್-ಮೈತ್ರಿಕೂಟ ಬೆಂಬಲಿಸಿ ಹಸ್ತದ ಗುರುತಿಗೆ ಮತ ನೀಡಿ, ಆಶೀರ್ವದಿಸಿ ಎಂದು ಹಸ್ತದ ಗುರುತಿನ ಚಿಹ್ನೆಯೊಂದಿಗೆ ಒಂದು ಪುಟದ ಈ ಜಾಹಿರಾತು ನೀಡಲಾಗಿದೆ.