ಕೊಪ್ಪಳ: ವಿದ್ಯಾರ್ಥಿಗಳಿಗೆ "ವೋಟರ್ ಗೈಡ್ ಕರಪತ್ರವನ್ನು ವಿತರಿಸುವ ಮೂಲಕ ಮತದಾನ ಜಾಗೃತಿ

ಕೊಪ್ಪಳ 16: ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ "ವೋಟರ್ ಗೈಡ್ ಕರಪತ್ರವನ್ನು ವಿತರಿಸುವುದರ ಮೂಲಕ ವಿದ್ಯಾರ್ಥಿಗಳಿಗೆ  ಮತದಾನ ಜಾಗೃತಿಮೂಡಿಸಲಾಯಿತು. 

ಕೊಪ್ಪಳ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪೋಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಕಾಲೇಜಿನ ವಿದ್ಯಾಥರ್ಿಗಳು ಮತ್ತು ಕಲಾಜಾಥ ತಂಡಗಳಿಂದ ಬೃಹತ್ ಮತದಾನ ಜಾಗೃತಿ ಅಭಿಯಾನವನ್ನು ಮಂಗಳವಾರದಂದು ಹಮ್ಮಿಕೊಳ್ಳಲಾಗಿತ್ತು.

ಕೊಪ್ಪಳ ನಗರದ ಅಶೋಕ ಸರ್ಕಲ್ ವೃತ್ತದಲ್ಲಿ  ಮಾನವ ಸರಪಳಿ ನಿಮರ್ಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾರಿಂದಲೂ ಕಡ್ಡಾಯ ಮತದಾನದ ಪ್ರತಿಜ್ಞಾವಿದಿಯನ್ನು ಭೋದಿಸಲಾಯಿತು.  ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮತದಾನ ಕುರಿತು ಮಾಹಿತಿಯಿರುವ "ವೋಟರ್ ಗೈಡ್ ಕರಪತ್ರವನ್ನು ವಿತರಿಸುವುದರ ಮೂಲಕ ಮತ ಜಾಗೃತಿ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.