ಕೊಪ್ಪಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣಗೆ ಇದು ಅದೃಷ್ಟದ ಮನೆ

ಲೋಕದರ್ಶನ ವರದಿ

ಕೊಪ್ಪಳ 30: ಅಂತೂ ಇಂತು ಎಲ್ಲ ಗೊಂದಲಗಳನ್ನು ಮೀರಿ ಕೊಪ್ಪಳ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೇಟ್ ತರುವಲ್ಲಿ ಕರಡಿ ಸಂಗಣ್ಣ ಯಶಸ್ವಿಯಾಗಿದ್ದಾರೆ. ಮಾಜಿ ಸಿಎಂ ಸಿದ್ಧರಾಮಯ್ಯ ಸ್ವರ್ಧೆ ಸುತ್ತಾರೆ ಎನ್ನುವ ಸಲುವಾಗಿ ಬಿಜೆಪಿ ಹೈಕಮಾಂಡ್ ಟಿಕೇಟ್ ಘೋಷಣೆಗೆ ಸ್ವಲ್ಪ ವಿಳಂಬಗೊಳಿಸಿತು ಇದರಿಂದ ಊಹಪೋಗಳು ಎದ್ದವು ನಂತರ  ಎಲ್ಲಾ ಊಹಾಪೋಗಳಿಗೆ ತೆರೆ ಎಳೆದ ಬಿಜೆಪಿ ಕೊನೆಗೂ ಹಾಲಿ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ಘೋಷಿಸಿ ನಂತರ ಬಿಎಸ್ವೈಯೇ ಬಿ-ಫಾರಂ ನೀಡಿದರು ಆ ಮೂಲಕ ಕೊಪ್ಪಳ ಕ್ಷೇತ್ರದ ಚುನಾವಣಾ ಕಣ ಈಗ ರಂಗೇರಿದೆ.

ಬಿಜೆಪಿ ಟಿಕೆಟ್ಗಾಗಿ ಅನೇಕ ಹುಸಿ ಮಾತುಗಳು ಸ್ವತಃ ಕೊಪ್ಪಳ ಬಿಜೆಪಿಯಲ್ಲಿ ಚಚರ್ೆಯಲ್ಲಿದ್ದವು. ಮಾಜಿ ಶಾಸಕ ಕೆ.ಶರಣಪ್ಪ ಪುತ್ರ ಡಾ.ಕೆ.ಬಸವರಾಜಗೆ ಫೈನಲ್ ಆಗಿದೆ, ಸಿ.ವಿ. ಚಂದ್ರಶೇಖರ್ಗೆ ಟಿಕೆಟ್ ಸಿಕ್ಕಿದೆ, ಮೋದಿ, ಶ್ರೀರಾಮುಲು,ರಾಯರಡ್ಡಿ ಬರುತ್ತಾರೆ ಎಂಬ ಅನೇಕ ವದಂತಿಗಳು ಕ್ಷೇತ್ರದಲ್ಲಿ ಅಲ್ಲದೆ ಮಾಧ್ಯಮಗಳಲ್ಲೂ ಹರಿದಾಡಿದ್ದವು. ಆದರೆ ಅಸಲಿಗೆ ದೆಹಲಿ ಮಟ್ಟದಲ್ಲಿ ನಡೆದಿದ್ದೇ ಬೇರೆಯಾಗಿತ್ತು. ಆ ಎಲ್ಲಾ ಅಡೆತಡೆಗಳನ್ನು ದಾಟಿಬಂದ ಹಾಲಿ ಸಂಸದ ಸಂಗಣ್ಣ ಕರಡಿಗೆ ಕೊನೆಗೂ ಬಿಜೆಪಿ ವರಿಷ್ಠರು ಮತ್ತೊಮ್ಮೆ ಸ್ಪಧರ್ೆಗೆ ಅವಕಾಶ ನೀಡಿದ್ದಾರೆ.  

ಈಗ ಕರಡಿ ಸಂಗಣ್ಣ ಬಿ-ಫಾರಂ ಸಹಿತ ಬೆಂಗಳೂರಿನಿಂದ ಕೊಪ್ಪಳಕ್ಕೆ ಬಂದಿದ್ದು ನಗರದ ಕಿನ್ನಾಳ ರಸ್ತೆಯ ಈ ಅದೃಷ್ಟ  ಮನೆಗೆ. ಅವರು ಹೊಸಪೇಟೆ ರಸ್ತೆಯ ತಮ್ಮ ಮನೆಗೆ ಹೋಗದೇ ಹಿರಿಯ ಅಳಿಯ ಮನೆಗೆ ಸಂಗಣ್ಣನವರು ಬಂದಿದ್ದೇಕೆ ? ಅದಕ್ಕೂ ಕಾರಣವಿದೆ. ಈ ಮನೆಗೆ ಸಂಗಣ್ಣ ಕರಡಿಯವರ ಲಕ್ಕಿ ಮನೆ ಎನ್ನಲಾಗುತ್ತಿದೆ. ಅವರು ಇಲ್ಲಿಯವರೆಗೆ ಎದುರಿಸಿರುವ ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದು ಈ ಅದೃಷ್ಟ ಮನೆಯಿಂದಲೇ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಟಿಕೇಟ್ ತರಲು ಬೆಂಗಳೂರಿಗೆ ಹೋಗುವ ದಿನ ಸಹ ಸಂಗಣ್ಣನವರು ಇದ್ದಿದ್ದು ಇದೇ ಮನೆಯಲ್ಲಿಯೇ. ಟಿಕೇಟ್ ತಂದ ಮೇಲೆ ನೇರವಾಗಿಯೇ ಈ ಮನೆಗೆ ಬಂದಿದ್ದಾರೆ ಈಗ ಎಲ್ಲ ಮುಖಂಡರು ಅಭಿಮಾನಿಗಳು ಆಗಮಿಸಿ ಶುಭಾ ಕೋರಿದರು.