ಕೊಪ್ಪಳ: ಸಚಿವ ತುಕಾರಾಂ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ಬೃಹತ್ ಸಂಘಟನೆ

ಲೋಕದರ್ಶನ ವರದಿ

ಕೊಪ್ಪಳ 31:ಕರ್ನಾಟಕದಲ್ಲಿ ವಾಲ್ಮೀಕಿ ನಾಯಕ ಸಮುದಾಯ ದೊಡ್ಡ ಸಂಖ್ಯೆಯ ಸಮುದಾಯವಾಗಿದ್ದು, ಜಿಲ್ಲಾ ಉಸ್ತುವಾರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಅವರ ನೇತೃತ್ವದಲ್ಲಿ ಬೃಹತ್ ಸಂಘಟನೆ ಮಾಡಲಾಗುತ್ತದೆ ಎಂದು ಕರ್ನಾಟಕ ವಾಲ್ಮೀಕಿ ಯುವ ಸೇನೆ ರಾಜ್ಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ 2.30 ಲಕ್ಷ ಮತದಾರರಿದ್ದಾರೆ, ರಾಜ್ಯದಲ್ಲಿ 45 ಲಕ್ಷಕ್ಕೂ ಅಧಿಕ ಮತದಾರರಿರುವ ವಾಲ್ಮೀಕಿ ನಾಯಕ ಸಮುದಾಯ ಉತ್ತರ ಕರ್ನಾಟಕದವರೇ ಆದ ಸಜ್ಜನ ರಾಜಕಾರಣಿ, ಜನಾನುರಾಗಿ ಈ. ತುಕಾರಾಂ ಮತ್ತು ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ಬರುವ ದಿನಗಳಲ್ಲಿ ದೊಡ್ಡ ಸಂಘಟನಾತ್ಮಕ ಶಕ್ತಿಯಾಗಲಿದೆ, ಪ್ರತಿ ಗ್ರಾಮ ಮಟ್ಟದಲ್ಲಿಯೂ ಕರ್ನಾಟಕ ವಾಲ್ಮೀಕಿ ಯುವ ಸೇನೆಯನ್ನು ಕಟ್ಟಲಾಗುವದು.

ಪ್ರಸ್ತುತ ವಾಲ್ಮೀಕಿ ಸಮಾಜಕ್ಕೆ ಇಬ್ಬರು ಸಚಿವರನ್ನು ನೀಡಿರುವ ಕಾಂಗ್ರೆಸ್ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮ ಹೊಂದಿರುವ ಜೆಡಿಎಸ್ ಶಾಸಕರಿದ್ದು, ಮೈತ್ರಿ ಸರಕಾರದಲ್ಲಿ ಅತೀ ಹೆಚ್ಚಿನ ಸೌಲಭ್ಯಗಳನ್ನು ಪಡೆದುಕೊಂಡು, ಸಮಾಜ ಸಾಮಾಜಿಕ, ಆಥರ್ಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿ ಮುಂದೆ ಬರಬೇಕಿದೆ. ಕೇಂದ್ರದಲ್ಲಿ ಮಂತ್ರಿ ಮಾಡದ, ಯಾವುದೇ ಅಭಿವೃದ್ಧಿಗೆ ಅನುದಾನ ನೀಡದ ಬಿಜೆಪಿ ವಿರುದ್ಧ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಬೇಕು, ಕನರ್ಾಟಕದಲ್ಲಿ ವಾಲ್ಮೀಕಿ ನಾಯಕ ಸಮುದಾಯವನ್ನು ಕೇವಲ ಮತ ಬ್ಯಾಂಕ್ ಎಂದುಕೊಂಡಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಬಿಜೆಪಿಗೆ ನಿಜವಾಗಲೂ ವಾಲ್ಮೀಕಿ ಸಮುದಾಯದ ಬಗ್ಗೆ ಕಾಳಜಿ ಇದ್ದರೆ, ಚುನಾವಣೆಗೂ ಮುನ್ನ ವಿಧಾನಸಭೆ ವಿರೋಧ ಪಕ್ಷದ ಉಪನಾಯಕನನ್ನಾಗಿ ಶಾಸಕ ಬಿ. ಶ್ರೀರಾಮುಲುರನ್ನು ನೇಮಿಸಿ ತೋರಿಸಲಿ, ಮೊಸಳೆ ಕಣ್ಣೀರು ಬೇಕಾಗಿಲ್ಲ ಎಂದಿದ್ದಾರೆ.

ಮೈತ್ರಿ ಸರಕಾರದಲ್ಲಿ ಸಚಿವರಾಗಿರುವ ತುಕಾರಾಂ ಅವರಿಗೆ ಕೊಪ್ಪಳ ಲೋಕಸಭೆ ಉಸ್ತುವಾರಿ ನೀಡಲಾಗಿದೆ, ಅದೇ ರೀತಿ ರಾಯಚೂರ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟರಾವ್ ನಾಡಗೌಡ ಮತ್ತು ಡಿ.ಕೆ. ಶಿವಕುಮಾರ್ ಅವರು ಸಹ ಕೆಲಸ ಮಾಡಲಿದ್ದಾರೆ.

ಮೋದಿ ಹೆಸರಲ್ಲಿ ಕೇವಲ ಸುಳ್ಳನ್ನು ಮಾತ್ರ ಜನರ ಮುಂದೆ ತಂದಿರುವ ಬಿಜೆಪಿಯಿಂದ ವಾಲ್ಮೀಕಿ ಸಮುದಾಯ ಉದ್ಧಾರವಾಗದು, ಮೀಸಲಾತಿ ವಿರೋಧಿ ಆಗಿರುವ ಬಿಜೆಪಿ ಬರುವ ದಿನಗಳಲ್ಲಿ ಶೋಷಿತರ ಪೂರ್ಣ ಹಕ್ಕನ್ನು ಕಿತ್ತುಕೊಳ್ಳಲು ಸಂಚು ರೂಪಿಸಿದೆ, ಸಂವಿಧಾನ ವಿರೋಧಿ ಹೇಳಿಕೆಗಳಿಂದಲೇ ಫೇಮಸ್ಸಾಗಿರುವ ಅನಂತಕುಮಾರಗೆ ಎಂಪಿ ಟಿಕೆಟ್ ನೀಡಿದ್ದಾರೆ, ಆತನ ವಿರುದ್ಧ ಒಂದೇ ಬಾರಿ ಶಿಸ್ತು ಕ್ರಮದ ಎಚ್ಚರಿಕೆ ನೀಡದ ಬಿಜೆಪಿ ಆತನ ಮಾತುಗಳಿಗೆ ಬೆಂಬಲವಾಗಿ ನಿಂತಿದೆ, ತೇಜಸ್ವಿ ಸೂರ್ಯ ಎಂಬ ಸಂವಿಧಾನ ಮತ್ತು ಜಾತೀಯತೆಯ ಕುರುಹುವಾಗಿರುವ ಆರ್ಆರ್ಎಸ್ ಸಿದ್ಧಾಂತ ಬಿತ್ತುವ ಆತನಿಗೆ, ಐದು ವರ್ಷ ಹಲವಾರು ಹೆಣ್ಣಿನ ಅತ್ಯಾಚಾರ ಮಾಡಿರುವ ಕೀಚಕ ತೇಜಸ್ವಿ ಸೂರ್ಯನಿಗೆ ಮಣೆ ಹಾಕುವ ಮೂಲಕ ರಾಜ್ಯದಲ್ಲಿ ಗಲಭೆ ಎಬ್ಬಿಸಿ ಮತ್ತೊಂದು ಬಿಹಾರ ಮಾಡುವ ಸಂಚು ರೂಪಿಸಿದ ಬಿಜೆಪಿ ವಿರುದ್ಧ ಜನರು ಬಂಡೇಳಬೇಕಿದೆ, ಮಾಡದ ಕೆಲಸದ ಲಾಭ ತೆಗೆದುಕೊಳ್ಳುವ ಕುಲಗೇಡಿ ಬಿಜೆಪಿಗೆ, ಬೇರೆಯವರ ಕೆಲಸಕ್ಕೆ ತಾನು ಕ್ರೆಡಿಟ್ ತೆಗೆದುಕೊಳ್ಳುವ ಶೋಕಿಲಾಲನಿಗೆ ತಕ್ಕ ಪಾಠ ಕಲಿಸಲು ಕಾಂಗ್ರೆಸ್ ಜೆಡಿಎಸ್ ಮೈತ್ರಿ ಬೆಂಬಲಿಸಿ ಎಂದು ಗೊಂಡಬಾಳ ಪ್ರಕಟಣೆ ನೀಡಿದ್ದಾರೆ.