ಲೋಕದರ್ಶನ ವರದಿ
ಕೊಪ್ಪಳ 10: ಸಕಾಲಕ್ಕೆ ಮುಂಗಾರು ಮಳೆಯಾಗಿ, ಸರಿಯಾದ ಸಮಯಕ್ಕೆ ರೈತರು ಬಿತ್ತನೆ ಮಾಡಿ, ಸರಿಯಾದ ಬೆಳೆ ಬರಬೇಕು ನಚಿತರ ರೈತರಿಗೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕು ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುವುದಾಗಿ ಲೇಬಗೇರಿ ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ ಹೇಳಿದರು.
ಅವರು ಕೊಪ್ಪಳದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಈ ವರ್ಷದ ಮುಂಗಾರು ಬಿತ್ತನೆ ಬೀಜವನ್ನು ರೈತರಿಗೆ ವಿತರಣೆ ಮಾಡಿ ನಂತರ ಮಾತನಾಡಿ ಜೈ ಜವಾನ ಜೈ ಕಿಸಾನ್, ರೈತ ನಕ್ಕರೆ ಜಗವೆಲ್ಲ ಸಕ್ಕರೆ ಎಂಬಂತೆ ರೈತರಿಗೆ ಈ ಬಾರಿ ಸರಿಯಾದ ಮುಂಗಾರು ಮಳೆಯಾಗಲಿ, ಕೃಷಿ ಇಲಾಖೆಯು ರೈತರಿಗೆ ಸರಿಯಾದ ಮಾಹಿತಿ, ಏನಾದರೂ ಸಮಸ್ಯೆಗಳು ಇದ್ದರೆ ಸ್ಪಂದಿಸಲಿ ಎಂದರು.
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತಿ ಮಾಜಿ ಸದಸ್ಯ ರಮೇಶ ಚೌಡ್ಕಿ, ದ್ಯಾಮಣ್ಣ ಮ್ಯಾದನೇರಿ, ಕೃಷಿ ಇಲಾಖೆಯ ಅಧಿಕಾರಿಗಳು, ರೈತ ಸಂಪರ್ಕ ಕೇಂದ್ರದ ಗೊಬ್ಬರಗುಂಪಿ,ಅನೇಕ ರೈತರು ಉಪಸ್ಥಿತರಿದ್ದರು.