ಲೋಕದರ್ಶನ ವರದಿ
ಕೊಪ್ಪಳ 17: ಜೈನ ಧರ್ಮದ ಇತಿಹಾಸ ಮಹಾಭಾರತದ ಕಾಲದಿಂದಲೂ ತಳಕು ಹಾಕಿಕೊಂಡಿದೆ. ಮೊದಲನೆ ತೀಥಂಕರರಾದ ಆಧಿನಾಥ ಆಥವಾ ವೃಷಭನಾಥನನ್ನು ಮಹಾಬಾರತದಲ್ಲಿ ಉಲ್ಲೀಖಿಸಲಾಗಿದೆ. ಇದರಿಂದಾಗಿ ಜೈನ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇರುವದಾಗಿ ತಿಳಿದುಬರುತ್ತದೆ ಎಂದು ಶ್ರೀಗವಿಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಹಾಗೂ ಸಂಶೋಧಕ ಡಾ. ಸಿದ್ದಲಿಂಗಪ್ಪ ಕೊಟ್ನೇಕಲ್ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಜೈನ್ ಸಮುದಾಯವು ಮಹಾವೀರ್ ಜೈನ್ ಸಮುದಾಯ ಭವನದಲ್ಲಿ ಆಯೋಜಿಸಿದ ಮಹಾವೀರ್ ಜಯಂತಿಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮುಂದುವರೆದು ಜೈನ ಧರ್ಮದ ಪ್ರವರ್ತಕರಲ್ಲಿ 24 ಜೈನ ತೀರ್ಥಂಕರರು ಬರುತ್ತಾರೆ. ಅದರಲ್ಲಿ ಮಹಾವೀರನು 24 ನೇ ಜೈನ ತೀರ್ಥಂಕರ. ಈಗೀನ ಬಿಹಾರದ ಬಸಾಢ ಎಂಬ ನಗರದಲ್ಲಿ (ಇದಕ್ಕೆ ವೈಶಾಲಿ ಎಂತಲೂ ಹೆಸರಿತ್ತು.)ದೊರೆ ಸಿದ್ಧಾರ್ಥ ಮತ್ತು ತ್ರೀಶಲಾ ದೇವಿಯವರ ಮಗುವಾಗಿ ಮಹಾವೀರನು ಕ್ರಿ.ಪೂ 599 ರ ಮಾರ್ಚ30 ರಂದು ಜನಿಸಿದರು. ಈತನ ಜನನದಿಂದ ವೈಶಾಲಿಯಲ್ಲಿ ಜನರಿಗೆ ಸುಖ, ಶಾಂತಿ, ಐಶ್ವರ್ಯ, ಸಂತಸ,, ಉತ್ಸಹಾ ಹೆಚ್ಚಾದವಂತೆ. ಆದ್ದರಿಂದ ಜನರು ಈ ಬಾಲಕನಿಗೆ ವರ್ಧಮಾನ ಎಂದು ಕರೆದರು. ಈ ಬಾಲಕ ಮುಂದೆ ನಗರವನ್ನು ಹೊಕ್ಕ ಮದ್ದಾನೆಯ ಸದ್ದನ್ನು ಅಡಗಿಸಿ ಅದರ ಮೇಲೆ ಸವಾರಿ ಮಾಡುತ್ತಾನೆ. ಹೆಬ್ಬಾವನ್ನು ಕೈಯಲ್ಲಿಡಿದು ಎಸೆಯುತ್ತಾನೆ. ಹೆದರದೇ ಮಾಯಾವಿಯನ್ನು ಹೊತ್ತು ನೆಡೆಯುತ್ತಾನೆ. ಮಹಾವೀರನಿಗೆ ಒಮ್ಮೆ ತಾಯಿ ತ್ರಿಶಲಾದೇವಿ ಮದುವೆ ವಿಷಯ ಪ್ರಸ್ಥಾಪಿಸಿದಾಗ ಮಹಾವೀರನು "ದೀನ ದಲಿತರು, ಸಾಮಾನ್ಯರು ದು:ಖದಲ್ಲಿರುವಾಗ ನಾನು ಸು:ಖ ಭೋಗದಲ್ಲಿ ಮೆರೆಯುವದಿಲ್ಲ. ಭೋಗ ಜೀವನಕ್ಕಿಂತ ತ್ಯಾಗ ಜೀವನ ಲೇಸು. ವೈಯುಕ್ತಿಕ ಹಿತಕ್ಕಿಂತ ಲೋಕ ಕಲ್ಯಾಣದಲ್ಲಿ ಹಿತವಿದೆ "ಎಂದು ತಾಯಿಯ ಮಾತನ್ನು ನಿರಾಕರಿಸುತ್ತಾನೆ. ತನ್ನ 30 ನೇ ವಯಸ್ಸಿನಲ್ಲಿ ಸನ್ಯಾಸದ ಕಡೆಗೆ ಮುಖ ಮಾಡಿದನು. ಮಹಾ ತಪಸ್ವಿಯಾಗಿ ಜೈನ ಧರ್ಮದ ಪ್ರಚಾರ ಮಾಡುತ್ತಾ ಸಾಗಿದನು. ಇಂದು ಜೈನ ಧರ್ಮ ಅಹಿಂಸಾತ್ಮಕ ಧರ್ಮವಾಗಿ ಬೆಳೆದು ಮಹಾವೀರನು ಬೋಧಿಸಿದ ತತ್ವ ಸಿದ್ದಾಂತಗಳನ್ನು ರೂಡಿಸಿಕೊಂಡು ಬಲಾಡ್ಯಾವಾಗಿದೆ. ಮಹಾವೀರನ ವಿಚಾರಗಳು, ತತ್ವಗಳು, ನೀತಿ-ಬೋಧನೆಗಳು ಸಾರ್ವಕಾಲಿಕ ಸತ್ಯವಾಗಿವೆ ಎಂದರು. ವೇದಿಕೆಯಲ್ಲಿ ಉದ್ದಿಮೆದಾರರಾದ ಅಭಯ ಕುಮಾರ ಮೆಹತಾ, ಜೀತುಲಾಲ್ ಜೈನ್, ಮಾಜಿ ನಗರ ಸಭಾ ಅಧ್ಯಕ್ಷ ಮಹೇಂದ್ರ ಚೋಪ್ರಾ,, ಸುರೇಂದ್ರಗೌಡ ಪಾಟೀಲ ಹಾಗೂ ಉಪನ್ಯಾಸಕ ಡಾ.ಪ್ರಕಾಶ ಬಳ್ಳಾರಿ ಇದ್ದರು.ಇದೇ ಸಂದರ್ಭದಲ್ಲಿ ಜೈನ್ ಸಮಾಜದ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ಸನ್ಮಾನ ಮಾಡಲಾಯಿತು. ಸ್ವಾಗತ ದೀನೇಶ ಸಂಚಯತಿ, ನಿರೂಪಣೆ ವರ್ತಕ ಪದಮ್ ಚಂದ್ ಮೆಹತಾ ನೆರವೇರಿಸಿದರು. ಜೈನ್ ಸಮಾಜದ ಗುರು ಹಿರಿಯರು, ಯುವಕು, ಮಕ್ಕಳು ಭಾಗವಹಿಸಿದ್ದರು.