ಕೊಪ್ಪಳ: ಸಂಘದ ಸರ್ವತೋಮುಖ ಅಭಿವೃದ್ಧಿಗೆ ಬೆಂಬಲಿಸಿ: ಕಂಪ್ಲಿ ಹೇಳಿಕೆ

ಲೋಕದರ್ಶನ ವರದಿ

ಕೊಪ್ಪಳ 30: ಬರುವ ಏಪ್ರೀಲ್ 3ರಂದು ಜರುಗಲಿರುವ ಕೊಪ್ಪಳ ಜಿಲ್ಲಾ ನ್ಯಾಯವಾದಿಗಳ ಸಂಘದ ಚುನಾವಣೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪಧರ್ಿಸಿರುವ ಹನುಮೇಶ ಮುರಡಿ ನೇತೃತ್ವದ  ಪದಾಧಿಕಾರಿಗಳು ವಿವಿಧ ಸ್ಥಾನಕ್ಕೆ ತಮ್ಮ ಉಮೇದುವಾರಿಕೆಯ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ ಬಳಿಕ ಸದರಿ ತಂಡಕ್ಕೆ ಬೆಂಬಲಿಸಿ ಆಯ್ಕೆಗೊಳಿಸುವಂತೆ ಮತದಾರ ನ್ಯಾಯವಾದಿಗಳಿಗೆ ಸಂಘದ ಹಂಗಾಮಿ ಜಿಲ್ಲಾಧ್ಯಕ್ಷ ನ್ಯಾಯವಾದಿ ದೊಡ್ಡಬಸಪ್ಪ ಕಂಪ್ಲಿ ಮನವಿ ಮಾಡಿಕೊಂಡಿದ್ದಾರೆ. 

ತಂಡದ ಪರವಾಗಿ ಬಿರುಸಿನ ಪ್ರಚಾರ ಕೈಗೊಂಡ ಅವರು ಮಾತನಾಡಿ ಉಪಾಧ್ಯಕ್ಷ ಸ್ಥಾನಕ್ಕೆ ಹಮ್ಮಿಗಿ ಗವಿಸಿದ್ದಪ್ಪ ಚನ್ನಪ್ಪ, ಕಾರ್ಯದಶರ್ಿ ಸ್ಥಾನಕ್ಕೆ ಬಿ.ವಿ.ಸಜ್ಜನ್, ಜಂಟಿ ಕಾರ್ಯದಶರ್ಿ ಸ್ಥಾನಕ್ಕೆ ಎಸ್.ಬಿ.ಪಾಟೀಲ್ ಹಾಗೂ ಖಜಾಂಚಿ ಸ್ಥಾನಕ್ಕೆ ಸುಭಾಷ್ ಬಂಡಿ ಸ್ಪಧರ್ೆ ಮಾಡಿದ್ದು ಇವರೆಲ್ಲನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಪ್ರಾಮಾಣಿಕ ಮತ್ತು ಪಾರದರ್ಶಕ ಆಡಳಿತ, ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಸೇರಿದಂತೆ ಕೌಟಂಬಿಕ, ವಾಣಿಜ್ಯ, ಕಾಮರ್ಿಕ, ಜಿಲ್ಲಾ ನ್ಯಾಯಾಲಯಗಳ ನಿಮರ್ಾಣ, ಸಂಘದ ಸದಸ್ಯರಿಗೆ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನ, ಡ್ರೈವಿಂಗ್ ಲೈಸೆನ್ಸ್ ಕೊಡಿಸುವುದು, ಭವಿಷ್ಯತ್ತಿನ ಯೋಜನೆ ರೂಪಿಸಿ ಕೋ-ಆಪರೇಟಿವ್ ಸೊಸೈಟಿ ಪ್ರಾರಂಭಿಸುವುದು,ವಕೀಲರ ಭವನ, ಕಾಲೋನಿ, ಸಮುದಾಯ ಭವನ, ಸ್ವತಂತ್ರ ಕಟ್ಟಡ, ಸೇರಿದಂತೆ ಯುವ ವಕೀಲರಿಗೆ ತರಬೇತಿ ಶಿಭಿರ, ಅಪತ್ಕಾಲದಲ್ಲಿ ತುತರ್ು ನಿಧಿ ಸ್ಥಾಪನೆ, ಜಿಲ್ಲೆಯಲ್ಲಿ ವಕೀಲರ ರಾಜ್ಯ ಸಮ್ಮೇಳನ, ಕ್ರೀಡೆ-ಸಾಂಸ್ಕೃತಿಕ ಚಟುವಟಿಕೆ ಅಲ್ಲದೇ ಮಹಿಳಾ ವಕೀಲರಿಗೆ ಸೌಕರ್ಯ, ಸಂಘದ ಶ್ರೇಯೋಭಿವೃದ್ಧಿಗೆ ಠೇವಣಿ ಸಂಗ್ರಹಣೆ ಸರಕಾರ ನೀಡುವ ಗೌರವ ಧನ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲು ಸದರಿ ತಂಡ ಚುನಾವಣಾ ಪ್ರಣಾಳಿಕೆ ತಂಡ ಘೋಷಿಸಿದ್ದು ಸದರಿ ಯೋಜನೆಗಳನ್ನು ಸಹಕಾರಗೊಳಿಸಲು

   ಮಾಜಿ ಅಧ್ಯಕ್ಷ ಎ.ವ್ಹಿ.ಕಣವಿ ಸೇರಿದಂತೆ ಹಿರಿಯ ನ್ಯಾಯವಾದಿಗಳಾದ ಅಸೀಫ್ಅಲಿ, ಆರ್.ಬಿ.ಪಾನಗಂಟಿ,ವ್ಹಿ.ಎಂ.ಭೂಸನೂರಮಠ, ಸಂಧ್ಯಾ ಮಾದಿನೂರು, ಪಿ.ಎಲ್.ಇನಾಮತಿ, ಪಿ.ಆರ್.ಹೊಸಳ್ಳಿ, ಎಸ್.ಎನ್.ಮುತ್ತಿಗಿ,ಆರ್.ಬಿ.ಅಳವಂಡಿ, ಆರ್.ವಿ.ಗಣಾವರಿ, ಲೋಹಿತ್ ದೇಸಾಯಿ, ಎಸ್.ಎಚ್.ಇಂಗಳದಾಳ, ಎ.ಎಸ್.ಮಾಲೀಪಾಟೀಲ್, ವಿರೂಪಾಕ್ಷಪ್ಪ ಬಾಳಗೊಂಡರು,ಡಿ.ಎಂ.ಪೂಜಾರ್, ವೆಂಕಟೇಶ ಮಾಲಗಿತ್ತಿ, ಎಸ್.ಎಚ್.ಶಿವಪೂರು, ಜಿ.ಎಫ್.ಹಮ್ಮಿಗಿ, ಆರ್.ಎಂ.ಕಿಲ್ಲೆದಾರ, ಇಸ್ಮಾಯಿಲ್ ಗೇಟಿನ್, ಪ್ರಕಾಶ ಆನಂದಹಳ್ಳಿ, ರವಿ ಶೀಗನಹಳ್ಳಿ, ಕೊಟ್ರೇಶ ಪೊಚಗುಂಡಿ, ಶಶಿಕಾಂತ ಕಲಾಲ್,ವಿ.ಎ.ಮಾಳೆಕೊಪ್ಪ, ಎನ್.ಎಂ,ಸಿದ್ದಾಂತಿ,ಎಸ್.ಎಂ.ದೇಸಾಯಿ, ಸೇರಿದಂತೆ ಅನೇಕ ಹಿರಿಯ-ಕಿರಿಯ ಮತ್ತು ಮಹಿಳಾ ನ್ಯಾಯವಾದಿಗಳು ಉಪಸ್ಥಿತರಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.