ಕೊಪ್ಪಳ : ಹಡಪದ ಸಮಾಜದ ಹಿತ ಕಾಯೋರಿಗೆ ಬೆಂಬಲ: ಹಡಪದ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ

ಲೋಕದರ್ಶನ ವರದಿ

ಕೊಪ್ಪಳ 12: ಲೋಕಸಭಾ ಚುನಾವಣೆಯಲ್ಲಿ ಹಡಪದ ಸಮಾಜದ ಹಿತ ಕಾಯೋರಿಗೆ ಬೆಂಬಲಿಸುವುದಾಗಿ ಹಡಪದ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಹಂದ್ರಾಳ ತಿಳಿಸಿದ್ದಾರೆ.

ಹಡಪದ ಸಮಾಜವನ್ನು ಪರಿಶಿಷ್ಠ ಜಾತಿಗೆ ಸೇರ್ಪಡೆಗೊಳಿಸಲು ಕಳೆದ ಮೂರು ದಶಕಗಳಿಂದ ಹೋರಾಟ ನಡೆಸಲಾಗುತ್ತಿದೆ,ಆದರೆ ಇದುವರೆಗೂ ಯಾವ ಸರಕಾರಗಳು ಸೇರ್ಪಡೆಗೆ ಆಸಕ್ತಿ ವಹಿಸುತ್ತಿಲ್ಲ, ಹಡಪದ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ, ಹಜಾಮಾ ಎಂಬ ಪದವನ್ನು ನಿಷೇದಿಸಿ ಜಾತಿನಿಂದನೆ ಕಾನೂನು ರಚಿಸುವುದು, ಗ್ರಾಮೀಣ ಪ್ರದೇಶದಲ್ಲಿ ಕ್ಷೌರಿಕರಿಗಾಗಿ ಕುಟೀರಗಳನ್ನು ನಿಮರ್ಿಸಬೇಕು, ರಾಜಕೀಯವಾಗಿ ವಂಚಿತರಾದ ಹಡಪದ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು, ಕಾರ್ಮಿಕ  ಇಲಾಖೆಯಲ್ಲಿ ಬರುವ ಎಲ್ಲಾ ಸೌಲಭ್ಯಗಳನ್ನು ಕ್ಷೌರಿಕ ವೃತ್ತಿ ಮಾಡುವರಿಗೆ ಹೆಚ್ಚಿನ ಆದ್ಯತೆ ಸೇರಿದಂತೆ ಇತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವರಿಗೆ ಈ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಹಾಗೂ ಸಮಾಜದವರು ಕಡ್ಡಾಯವಾಗಿ ತಪ್ಪದೇ ಮತದಾನ ಮಾಡುವಂತೆ ಜಿಲ್ಲಾ ಹಡಪದ ಸಮಾಜದ ಪದಾಧಿಕಾರಿಗಳಾದ ದ್ಯಾಮಣ್ಣ ಮಾದನೂರು, ಚಂದ್ರು ಗಣೇಶನಗರ,ಪ್ರಕಾಶ ದದೇಗಲ್, ನಿಂಗಪ್ಪ ಹಂದ್ರಾಳ, ರಮೇಶ ಚಟ್ನೆನಾಳ ಸೇರಿದಂತೆ ಇತರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ