ಕೊಪ್ಪಳ: ಡೆಂಗ್ಯೂ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್

ಕೊಪ್ಪಳ 26: ಕೊಪ್ಪಳ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರಕ್ಕೆ ಬಾರದಂತೆ ಡೆಂಗ್ಯೂ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ರವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ-2019ರ ಅಂಗವಾಗಿ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಶುಕ್ರವಾರದಂದು (ಜುಲೈ.26) ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಗ್ರಾಮ ಪಂಚಾಯತ್ಗಳಲ್ಲಿ, ಬಾಪೂಜಿ ಸೇವಾ ಕೇಂದ್ರಗಳಲ್ಲಿ, ಅಟಲ್ಜಿ ಸೇವಾ ಕೇಂದ್ರಗಳಲ್ಲಿ, ಅಂಗನವಾಡಿ, ಶಾಲಾ ಕಾಲೇಜುಗಳಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ ಡೆಂಗ್ಯೂ ಜ್ವರದ ಲಕ್ಷಣಗಳು, ಮುನ್ನೆಚ್ಚರಿಕೆ ಹಾಗೂ ನಿಯಂತ್ರಣ ಕ್ರಮಗಳ ಕುರಿತ ಪೋಸ್ಟರ್ಗಳನ್ನು ಅಂಟಿಸಬೇಕು. ಕಾಲೇಜು ವಿದ್ಯಾಥರ್ಿಗಳು ಸಾಮಾಜಿಕ ಜಾಲತಾಣಗಳನ್ನು ಹೆಚ್ಚಾಗಿ ಬಳಸುವುದರಿಂದ ಆ ಮಾಧ್ಯಮವನ್ನು ಜಾಗೃತಿ ಮೂಡಿಸಲು ಬಳಸಿಕೊಳ್ಳಿ. ಡೆಂಗ್ಯೂ ವಿರೋಧಿ ಮಾಸಾಚರಣೆ ಕುರಿತ ಜಾಥಾ ಮಾತ್ರವಲ್ಲದೇ ವಿವಿಧ ಇಲಾಖೆಗಳಿಂದ ಹಮ್ಮಿಕೊಳ್ಳುವ ವಿವಿಧ ಜಾಥಾಗಳಲ್ಲಿ ಡೆಂಗ್ಯೂ ಕುರಿತು ಜಾಗೃತಿ ಮೂಡಿಸುವ ಕ್ರಮಗಳು ಸೇರಿದಂತೆ ಇತರೆ ಜಾಗೃತಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.  ಕೊಪ್ಪಳ ಜಿಲ್ಲೆಯು ಈಗಾಗಲೇ ಮಲೇರಿಯಾ ಮುಕ್ತ ಜಿಲ್ಲೆಯಾಗುವತ್ತ ಸಾಗುತ್ತಿದ್ದು, ಅದರಂತೆ ಡೆಂಗ್ಯೂ ಜ್ವರ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯ ಎಲ್ಲ ಇಲಾಖೆಗಳು ತಮ್ಮ ಜವಾಬ್ದಾರಿಯನ್ನು ಅರಿತು ಪರಸ್ಪರ ಸಮನ್ವಯತೆಯಿಂದ ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡೆಂಗ್ಯೂ ವಿರೋಧಿ ಮಾಸಾಚರಣೆ ಜುಲೈ-2019ನ್ನು ಯಶಸ್ವಿಗೊಳಿಸಬೇಕು.  

ಡೆಂಗ್ಯೂ ಕುರಿತು ಗ್ರಾಫಿಕ್ಸ್ ಒಳಗೊಂಡ ಪೋಸ್ಟರ್ಗಳನ್ನು ಶಾಲೆಗಳಲ್ಲಿ ಅಂಟಿಸಬೇಕು.  ಆಯಾ ಶಾಲಾ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಚಚರ್ಾ ಸ್ಪಧರ್ೆ, ಪ್ರಾರ್ಥನೆ ಸಮಯದಲ್ಲಿ ಡೆಂಗ್ಯೂ ಕುರಿತು 5 ನಿಮಿಷಗಳ ಜಾಗೃತಿ ಭಾಷಣ ಏರ್ಪಡಿಸುವಂತೆ, ಶಾಲಾ ಸುತ್ತಲಿನ ಪ್ರದೇಶದಲ್ಲಿ ನೀರು ಸಂಗ್ರಹವಾಗದಂತೆ ಕ್ರಮಕೈಗೊಂಡು, ಸ್ವಚ್ಛತೆಯನ್ನು ನಿರ್ವಹಿಸಲು ಸೂಚನೆ ನೀಡಬೇಕು. ವಸತಿ ಶಾಲೆಗಳಲ್ಲಿ ಕಿಟಕಿಗಳಿಗೆ ಸೊಳ್ಳೆಗಳು ಪ್ರವೇಶವಾಗದಂತೆ ಜಾಲರಿಯನ್ನು ಅಳವಡಿಸಬೇಕು. ವಿದ್ಯಾಥರ್ಿಗಳಿಗೆ ಸೊಳ್ಳೆ ಪರದೆಗಳನ್ನು ವಿತರಿಸಬೇಕು. ಡೆಂಗ್ಯೂ ಬಾಧಿತ ಪ್ರದೇಶಗಳಲ್ಲಿ ಧೂಮೀಕರಣ(ಫಾಗಿಂಗ್) ಮಾಡಲು ಕ್ರಮ ತೆಗೆದುಕೊಳ್ಳಬೇಕು. ಕೃಷಿ ಇಲಾಖೆ ಅಧಿಕಾರಿಗಳಿಂದ ಜಿಲ್ಲೆಯ ಕೃಷಿ ಹೊಂಡಗಳ ಮಾಹಿತಿ ಪಡೆದು ಕೃಷಿಹೊಂಡಗಳಲ್ಲಿ ಲಾವರ್ಾಹಾರಿ ಮೀನುಗಳನ್ನು ಬಿಡಬೇಕು. ಜಿಲ್ಲೆಯಲ್ಲಿ ಸ್ಥಳಾವಕಾಶದ ಲಭ್ಯತೆ ಅನುಸಾರ ಲಾವರ್ಾಹಾರಿ ಮೀನುಗಳ ಉತ್ಪಾದನೆ ಹಾಗೂ ಅಭಿವೃದ್ಧಿಗೆ ಮೀನಿನ ಹೊಂಡಗಳನ್ನು (ಸಂಗ್ರಹಕಾರಗಳನ್ನು) ನಿಮರ್ಿಸಬೇಕು ಮತ್ತು ಲಾವರ್ಾಹಾರಿ ಮೀನುಗಳನ್ನು ಅವಶ್ಯಕತೆ ಇರುವೆಡೆ ಬಳಸಬೇಕು. ಅನುಪಯುಕ್ತ ಮತ್ತು ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ನಗರದ ಸ್ವಚ್ಛತೆ, ಸೂಕ್ತ ಒಳಚರಂಡಿ ವ್ಯವಸ್ಥೆ, ನೀರು ಸರಬರಾಜು ಪೈಪುಗಳನ್ನು ಪರೀಕ್ಷಿಸುವುದು, ಅಲ್ಲಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸೊಳ್ಳೆಗಳ ನಾಶಕ್ಕೆ ವಾರಕ್ಕೊಮ್ಮೆ ಸೂಕ್ತ ಕೀಟನಾಶಕಗಳನ್ನು ಸಿಂಪಡಿಸಬೇಕು. ರೋಗಗಳು ಉಲ್ಬಣವಾದ ಸಂದರ್ಭದಲ್ಲಿ ಒಳಾಂಗಣ ಧೂಮೀಕರಣ ಅಥವಾ ಒಳಾಂಗಣ ಕೀಟನಾಶಕಗಳನ್ನು ಸಿಂಪರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಕಾಶ ಮಾತನಾಡಿ, ಡೆಂಗ್ಯೂ ಜ್ವರವು ಈಡೀಸ್ ಸೊಳ್ಳೆಯಿಂದ ಹರಡುತ್ತದೆ.  ಇದು ಹಗಲು ಹೊತ್ತಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.  ಮಕ್ಕಳು, ಗಭರ್ಿಣಿಯರು ಹಾಗೂ ವಯಸ್ಸಾದವರಲ್ಲಿ ಈ ಜ್ವರದ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತದೆ. ಸಾರ್ವಜನಿಕರು ಮನೆಯಲ್ಲಿ ಹಾಗೂ ಮನೆಯ ಸುತ್ತಲಿನ ಪ್ರದೇಶದಲ್ಲಿ ನೀರನ್ನು ಹೆಚ್ಚು ದಿನ ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ನೀರಿನ ಸಂಗ್ರಹಕಾರಗಳನ್ನು ಆಗಾಗ ಸ್ವಚ್ಛಗೊಳಿಸಬೇಕು. ನೀರು ಸಂಗ್ರಹವಾಗುವ ಅನುಪಯುಕ್ತ ವಸ್ತುಗಳಾದ ತೆಂಗಿನ ಕಾಯಿ ಚಿಪ್ಪು, ಅನುಪಯುಕ್ತ ಟೈರುಗಳು, ಬಳಕೆ ಇಲ್ಲದ ನೀರಿನ ಟ್ಯಾಂಕ್ಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು. ತೀವ್ರ ತರವಾದ ಮೈ-ಕೈ ನೋವು, ತಲೆನೋವು, ಕಣ್ಣಿನ ನೋವು ಈ ಜ್ವರದ ಲಕ್ಷಣವಾಗಿದ್ದು, ಯಾವುದೇ ಜ್ವರ ಕಾಣಿಸಿದರೂ ಕೂಡಲೇ ರಕ್ತಪರೀಕ್ಷೆ ಮಾಡಿಸಬೇಕು.  ಈ ಜ್ವರಕ್ಕೆ ಯಾವುದೇ ನಿದರ್ಿಷ್ಟ ಚಿಕಿತ್ಸೆ ಇಲ್ಲ. ರೋಗದ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಕೃಷಿ ಹೊಂಡದಂತಹ ನೀರಿನ ಸಂಗ್ರಹದ ಅಗತ್ಯವಿರುವೆಡೆ ಗಪ್ಪಿ ಹಾಗೂ ಗ್ಯಾಂಬ್ಯೂಸಿಯಾ ಎಂಬ ಲಾವರ್ಾಹಾರಿ ಮೀನುಗಳನ್ನು ಬಿಡಲಾಗುತ್ತದೆ. ಈ ಮೀನುಗಳು ಸೊಳ್ಳೆಯು ಲಾವರ್ಾ ಹಂತದಲ್ಲಿರುವಾಗಲೇ ಅವನ್ನು ಭಕ್ಷಿಸುವುದರಿಂದ ಸೊಳ್ಳೆಗಳ ಉತ್ಪಾದನೆಯನ್ನು ನಿಯಂತ್ರಿಸಬಹುದು ಎಂದು ಡೆಂಗ್ಯೂ ಜ್ವರದ ಲಕ್ಷಣಗಳು, ನಿಯಂತ್ರಣ ಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡಿದರು.   

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಯರಗಲ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಲಿಂಗರಾಜ ಸೇರಿದಂತೆ ಆರೋಗ್ಯ ಇಲಾಖೆಯ ತಾಲ್ಲೂಕಾ ಮಟ್ಟದ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.