ಲೋಕದರ್ಶನ ವರದಿ
ಕೊಪ್ಪಳ 28: ಇಂದಿನ ದಿನಗಳಲ್ಲಿ ಕ್ರೀಡಾ ಕ್ಷೇತ್ರ ಶಾಲಾ ಮಟ್ಟದಲ್ಲಿ ಮಾತ್ರ ನಡೆಯುತ್ತಿದೆ ಆದರೂ ಅದು ಅಲ್ಲಿಗೆ ಸೀಮಿತವಾಗಿದೆ, ಇದುವರೆಗೂ ಕೊಪ್ಪಳ ನಗರದಿಂದ ಯಾವುದೇ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಒಬ್ಬ ಪ್ರತಿಭೆಯು ಆಯ್ಕೆಯಾಗಿಲ್ಲ ಅದರ ಪ್ರಯುಕ್ತವಾಗಿ ಜಿಲ್ಲಾ ಬ್ಯಾಡ್ಮಿಂಟನ್ ಅಕ್ಯಾಡೆಮಿಯು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಉನ್ನತ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಬೇಸಿಗೆ ತರಬೇತಿ ಶಿಬಿರ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಬ್ಯಾಡ್ಮಿಂಟನ್ ಅಕ್ಯಾಡೆಮಿಯ ಅಧ್ಯಕ್ಷ ಆರ್. ರಜನಿಕಾಂತ್ ಇಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾ ಗೋಷ್ಠೀಯಲ್ಲಿ ತಿಳಿಸಿದರು.
ಯಾವುದೇ ಕ್ರೀಡೆಯ ತರಬೇತಿ ಪಡೆಯಲು ದೂರದ ಬೆಂಗಳೂರು ಇಲ್ಲ ಅಂದರೆ ತರಬೇತಿ ಅಕಾಡೆಮಿಗಳು ಇರುವ ಊರುಗಳಿಗೆ ಹೋಗಿ ತರಬೇತಿ ಪಡೆಯಬೇಕಾಗಿದೆ ಇದನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಸುಲಭವಾಗಿ ನಮ್ಮ ಮಕ್ಕಳಿಗೆ ಅಲ್ಲಿ ಸಿಗುವ ತರಬೇತಿ ನಮ್ಮ ಕೊಪ್ಪಳ ನಗರದಲ್ಲಿಯೇ ಕೊಡುವ ಉದ್ದೇಶದಿಂದ ಜಿಲ್ಲಾ ಶಟಲ್ ಬ್ಯಾಡ್ಮಿಂಟನ್ ಅಕ್ಯಾಡೆಮಿಯು ಶಟಲ್ ಬ್ಯಾಡ್ಮಿಂಟನ್ ಬೇಸಿಗೆ ತರಬೇತಿ ಶಿಬಿರ ಏರ್ಪಡಿಸಿದ್ದೇವೆ, ನಮ್ಮ ಭಾಗದ ಮಕ್ಕಳಲ್ಲಿ ಪ್ರತೀಭೆ ಇದೆ ಆದರೆ ರಾಷ್ಟ್ರಮಟ್ಟಕ್ಕೆ ಸ್ಪಧರ್ೆಸುವಷ್ಟು ತರಬೇತಿ ನಮ್ಮ ಮಕ್ಕಳಿಗೆ ಸಿಗುತ್ತಿಲ್ಲ, ಬ್ಯಾಡ್ಮಿಂಟನ್ ಪ್ರಪಂಚದಲ್ಲಿಯೆ ವೇಗವಾದ ಆಟ, ಈ ಆಟಕ್ಕೆ ಮುಖ್ಯವಾಗಿ ಸದೃಢತೆಗೆ ಮೂದಲ ಆದ್ಯತೆ, ಅತ್ಯಾಧುನಿಕ ಮತ್ತು ಪರಿಣಾಮಕಾರಿ ಫಿಟನೆಸ್ ಉಪಕರಣಗಳೊಂದಿಗೆ ದೈಹಿಕ ಸದೃಢತೆ, ಪೌಷ್ಠಿಕಾಂಶ ಯುಕ್ತ ಡಯಟ್ ಕುರಿತು ನ್ಯೂಟ್ರೀಶಿಯನ್ ಎಕ್ಸ್ಪರ್ಟರಿಂದ ಮಾರ್ಗದರ್ಶನ, ವ್ಯಕ್ತಿ ವಿಕಸನ ಮತ್ತು ಯೋಗ ಕುರಿತು ಮಾರ್ಗದರ್ಶನ ಅನುಭವವಿರುವ ಹಾಗೂ ರಾಜ್ಯದ ನೂರಾರು ಉತ್ತಮ ಆಟಗಾರರನ್ನು ತರಬೇತಿಗೊಳಿಸಿದ ಪ್ರತಿಭಾವಂತ ತರಬೇತುದಾರರಿಂದ ತರಬೇತಿ ಕೊಡಿಸುವುದು ನಮ್ಮ ಉದ್ದೇಶವಾಗಿದೆ. ಏಪ್ರೀಲ್ 1 ರಿಂದ ಪ್ರಾರಂಭವಾಗಿ ಮೇ 1ರವರೆಗೆ ನಡೆಯುತ್ತದೆ, ಪ್ರವೇಶ ಶುಲ್ಕ ರೂ.300ಗಳು ಮಾತ್ರ ಇರುತ್ತದೆ. ಮಾಹಿತಿ ಮತ್ತು ಪ್ರವೇಶಕ್ಕಾಗಿ ಮೊ: 7411022006, 9900610212, 7899881516 ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದು ಎಂದು ಹೇಳಿದರು ಈ ಸಂದರ್ಭದಲ್ಲಿ ಈಶಣ್ಣ ಕೊರ್ಲಹಳ್ಳಿ, ವಿನೋದ್ಕುಮಾರ್ ವಸ್ತ್ರದ್, ಮಲ್ಲಿಕಾರ್ಜುನ್ ಹಿರೇಮಠ, ಕೊಟ್ರೇಶ ವಕೀಲರು ಇನ್ನು ಮುಂತಾದವರು ಉಪಸ್ಥಿತರಿದ್ದರು.