ಕೊಪ್ಪಳ : ಇಸ್ಲಾಂ ಧರ್ಮದಲ್ಲಿ ರಮ್ಜಾನ್ ಉಪವಾಸವು ಪ್ರತಿಯೊಬ್ಬ ಮುಸ್ಲಿಂರಿಗೆ ಕಡ್ಡಾಯ: ಸಂಸದೀಯ ಕಾರ್ಯದರ್ಶಿ ಹಿಟ್ನಾಳ

ಲೋಕದರ್ಶನ ವರದಿ

ಕೊಪ್ಪಳ 01:  ನಗರದ  ವಿವಿಧ ಜಾಮೀಯಾ ಮಸೀದಿಗಳಿಗೆ ಪವಿತ್ರ ರಮ್ಜಾನ್ ಮಾಸದ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಸಂಸದೀಯ ಕಾರ್ಯದರ್ಶಿ  ಕೆ.ರಾಘವೇಂದ್ರ ಹಿಟ್ನಾಳರವರು, ಇಸ್ಲಾಂ ಧರ್ಮದಲ್ಲಿ ರಮ್ಜಾನ್ ಉಪವಾಸವು ಪ್ರತಿಯೊಬ್ಬ ಮುಸ್ಲಿಂಮರಿಗೆ ಕಡ್ಡಾಯವಾದ ಆಚರಣೆಯಾಗಿದೆ. ಸೃಷ್ಟಿಕರ್ತನ ನೇಮಾನುಸಾರವಾಗಿ ರಮ್ಜಾನ್ ತಿಂಗಳದ ಉಪವಾಸ ಆಚರಣೆಯಿಂದ ಮನಸ್ಸಿನ ಮೇಲೆ ಹತೋಟಿಯನ್ನು ತಂದು ದುರಾಲೋಚನೆಗಳಿಂದ ಮನಸ್ಸನ್ನು ಶುದ್ಧಗೊಳಿಸಿ ಸೃಷ್ಟಿಕರ್ತನಿಗೆ ತಲೆಬಾಗಿ ಜಗತ್ತಿನ ವ್ಯಾಮೋಹಗಳನ್ನು ತೇಜಿಸಿ ಹಸಿವಿನ ಅರಿವು ಉಂಟುಮಾಡುವದೆ ರಮ್ಜಾನ್ ಉಪವಾಸ. ಈ ಮಾಸವು ಸಮಾನತೆ ಸಾರಿ ದಿನದಲಿತ ಬಡವರಿಗೆ "ಜಕಾತ್ ಮತ್ತು ಪಿತ್ರಾ ಮಾಡುವುದು ಇಸ್ಲಾಂ ಧರ್ಮದ ಕಡ್ಡಾಯ ಕಾನೂನು ಆಗಿದೆ. ರಮ್ಜಾನ್ ಉಪವಾಸ ಆಚರಣೆಯಿಂದ ಮನುಷ್ಯ ಮನುಷ್ಯರಲ್ಲಿ ಪ್ರೀತಿ ಹಾಗೂ ಸೌಹಾರ್ಧತೆ ಉಂಟಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಅಧ್ಯಕ್ಷರುಗಳಾದ ಎಸ್.ಬಿ.ನಾಗರಳ್ಳಿ, ಕೆ.ರಾಜಶೇಖರ ಹಿಟ್ನಾಳ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷಾ, ಎ.ಪಿ.ಎಮ್.ಸಿ.ಅಧ್ಯಕ್ಷರಾದ ಜಡಿಯಪ್ಪ ಬಂಗಾಳಿ, ಹನುಮರೆಡ್ಡಿ ಹಂಗನಕಟ್ಟಿ, ನಗರಸಭೆ ಸದಸ್ಯರಾದ ಅಕ್ಬರಪಾಷಾ ಪಲ್ಟನ, ಅಂಜುಮಾನ್ ಸಂಸ್ಥೆಯ ಅಧ್ಯಕ್ಷರಾದ ಚಿಕನ್ ಪೀರಾ, ಮುಖಂಡರುಗಳಾದ ಮಾನ್ವಿಪಾಷಾ, ಇಬ್ರಾಹಿಂ, ಮಾಜೀದ್ ಖಾನ್, ಗುರುಬಸವರಾಜ ಹಳ್ಳಿಕೇರಿ, ಸಲಿಂ ಅಳವಂಡಿ, ಅಜ್ಜು ಖಾದ್ರಿ, ಇಕ್ಬಾಲ್ ಸಿದ್ದಿಕಿ, ಧರ್ಮ ಗುರುಗಳು ಹಾಗೂ ಮುಸ್ಲಿಂ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.