ಕೊಪ್ಪಳ 25: ಶಾಲಾ ವಿದ್ಯಾರ್ಥಿಗಳು ಸ್ವಚ್ಛತೆ ಕಡೆ ಹೆಚ್ಚಿನ ಗಮನ ಹರಿಸಿ ಪರಿಸರವನ್ನು ಸಂರಕ್ಷಿಸಬೇಕು ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿ ಅವರು ಕರೆ ನೀಡಿದರು.
ಸ್ವಚ್ಛ ಮೇವ ಜಯತೆ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಯಾದ್ಯಂತ ಶಾಲಾ ಮತ್ತು ಕಾಲೇಜು ವಿಧ್ಯಾಥರ್ಿ, ವಿದ್ಯಾಥರ್ಿಯನಿರಿಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಮಂಗಳವಾರದಂದು (ಜುಲೈ.23) ಹಮ್ಮಿಕೊಳ್ಳಲಾದ ಸ್ವಚ್ಛತಾ ರಸಪ್ರಶ್ನೆ-2019 ಕಾರ್ಯಕ್ರಮದಲ್ಲಿ ಸಸಿಗಳಿಗೆ ನೀರನ್ನು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಲಾ ವಿದ್ಯಾರ್ಥಿ ಗಳು ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಿ ಪರಿಸರವನ್ನು ಸಂರಕ್ಷಿಸಬೇಕು. ``ವೈಯಕ್ತಿಕ ಸುಚಿತ್ವದಿಂದ ದೂರವಾಗುವುದು ದವಾಖಾನೆ'' ಎಂಬ ನಾಡನುಡಿಯನ್ನು ಗಮನದಲ್ಲಿಟ್ಟುಕೊಂಡು ಶಾಲಾ ಮಕ್ಕಳ ನಿಮ್ಮ ಮನೆಯ ಹಾಗೂ ನಿಮ್ಮ ಶಾಲೆಯ ವಾತಾವರಣವನ್ನು ಸ್ವಚ್ಛವಾಗಿಡಿ. ಗಿಡ-ಮರಗಳನ್ನು ಬೆಳೆಸಿ ನಿಮ್ಮ ಅಕ್ಕ-ಪಕ್ಕದ ಪರಿಸರವನ್ನು ಹಸಿರಿಕರಣಗೊಳಿಸಿ ಇದರಿಂದ ಆರೋಗ್ಯವಂತಹ ವಾತಾವರಣ ಕಲ್ಪಿಸಿದಂತಾಗುತ್ತದೆ. ಅಲ್ಲದೇ ಈ ಬಗ್ಗೆ ನಿಮ್ಮ ನೆರೆ-ಹೊರೆಯವರಿಗೂ ಸಹ ಸ್ವಚ್ಛತೆಯ ಕುರಿತು ಅರಿವು ಮೂಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಹೆಚ್. ವಿಶ್ವನಾಥರೆಡ್ಡಿ ಅವರು ಶಾಲಾ ಮಕ್ಕಳಿಗೆ ಕಿವಿ ಮಾತು ಹೇಳಿದರು.
ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಘುನಂದನ್ ಮೂರ್ತಿರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ನಮ್ಮ ದೇಶವು ಈಗಾಗಲೇ ಸ್ವಚ್ಛತೆ ಬಗ್ಗೆ ಅತೀ ಮಹತ್ವ ನೀಡುತ್ತಿದ್ದು, ನಾವೆಲ್ಲರೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಾಳಜಿವಹಿಸಿದಲ್ಲಿ ಸ್ವಚ್ಛತೆಗೆ ಹೆಸರಾದ ಮಲೆಶಿಯಾ ದೇಶವನ್ನು ನಾವು ಹಿಂದಿಕ್ಕಬಹುದು. ಈ ನಿಟ್ಟಿನಲ್ಲಿ ವಿದ್ಯಾಥರ್ಿಗಳು ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರೋಬೆಷನರಿ ಐಎಎಸ್ ಅಧಿಕಾರಿ ನೇಹಾ ಜೈನ್, ಜಿ.ಪಂ. ಉಪಕಾರ್ಯದಶರ್ಿ ಎನ್.ಕೆ. ತೊರವಿ, ಯೋಜನಾ ನಿದರ್ೇಶಕ ರವಿ ಬಸರಿಹಳ್ಳಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಮಾದೇವಿ ಸೊನ್ನದ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿದರ್ೇಶಕ ಎಲ್.ಜಿ. ರಾಟಿಮನಿ ಸೇರಿದಂತೆ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ:
ಕಾರ್ಯಕ್ರಮದಲ್ಲಿ ತಾಲೂಕುವಾರು 8 ನೇ ತರಗತಿಯಿಂದ 12 ನೇ ತರಗತಿಯ ಶಾಲೆ ಹಾಗೂ ಕಾಲೇಜುಗಳಿಂದ ಇಬ್ಬರ ತಂಡದಂತೆ ಒಟ್ಟು 75 ತಂಡಗಳ 150 ವಿದ್ಯಾಥರ್ಿ, ವಿದ್ಯಾಥರ್ಿನಿಯರು ಭಾಗವಹಿಸಿದ್ದು, ಸ್ವಚ್ಛತಾ ರಸಪ್ರಶ್ನೆ-2019ರ ಕಾರ್ಯಕ್ರಮದ ಪ್ರಥಮ ಸ್ಥಾನ ಪಡೆದ ವಿಜೇತರಾದ ಗಂಗಾವತಿ ಬೆತಲ್ ಸ್ಕೂಲ್ನ 10ನೇ ತರಗತಿಯ ವಿದ್ಯಾಥರ್ಿಗಳಾದ ಗಾಯತ್ರಿ ಜಿ.ಎಸ್ ಮತ್ತು ಎಸ್.ಕೆ. ಭಾವನಾ ರೂ. 10,000 ಗಳ ಬಹುಮಾನವನ್ನು ಪಡೆದರು. ದ್ವೀತಿಯ ಸ್ಥಾನ ಆನೆಗುಂದಿ ಜಿ.ಹೆಚ್.ಎಸ್ ಶಾಲೆಯ ವಿದ್ಯಾಥರ್ಿಗಳಾದ ಶಭಾನಾ ಬಾನು ಹಾಗೂ ನವೀನ್ಕುಮಾರ ರೂ. 7,000 ಗಳ ಮತ್ತು ತೃತೀಯ ಸ್ಥಾನವನ್ನು ಶಿರಗುಂಪಿಯ ಆರ್.ಎಂ.ಎಸ್.ಎ ಶಾಲೆ ವಿದ್ಯಾಥರ್ಿಗಳಾದ ಸುಧಾ ಪೋಲಿಸ್ ಪಾಟೀಲ್ ಹಾಗೂ ಸೌಜನ್ಯ ಪ ಅಥಣಿ ರೂ. 5,000 ಗಳ ಬಹುಮಾನವನ್ನು ಪಡೆದುಕೊಂಡರು. ಈ ವಿದ್ಯಾಥರ್ಿಗಳಿಗೆ ಜಿಲ್ಲಾ ಪಂಚಾಯತ್ ಉಪಕಾರ್ಯದಶರ್ಿ ಎನ್.ಕೆ. ತೊರವಿ ಹಾಗೂ ವಾಲ್ನಟ್ ನಾಲೇಡ್ಜ್ ಸಲೂಷನ್ ಸಂಸ್ಥೆಯ ಅನಗಾ ಶ್ರೀಧರರವರು ಬಹುಮಾನವನ್ನು ವಿತರಣೆ ಮಾಡಿದರು.