ಲೋಕದರ್ಶನ ವರದಿ
ಕೊಪ್ಪಳ 29: ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಇದ್ದ ಎಲ್ಲಾ ಊಹಾಪೋಗಳಿಗೆ ತೆರೆ ಎಳೆದ ಬಿಜೆಪಿ ಕೊನೆಗೂ ಹಾಲಿ ಸಂಸದ ಸಂಗಣ್ಣ ಕರಡಿಗೆ ಟಿಕೆಟ್ ನೀಡಿ ಬಿ-ಫಾರಂ ಕೊಟ್ಟಿದೆ. ಆ ಮೂಲಕ ಕೊಪ್ಪಳ ಕ್ಷೇತ್ರದ ಚುನಾವಣಾ ಕಣ ಈಗ ರಂಗೇರಿದೆ.
ಬಿಜೆಪಿ ಟಿಕೆಟ್ಗಾಗಿ ಅನೇಕ ಹುಸಿ ಮಾತುಗಳು ಸ್ವತಃ ಕೊಪ್ಪಳ ಬಿಜೆಪಿಯಲ್ಲಿ ಚಚರ್ೆಯಲ್ಲಿದ್ದವು. ಡಾ.ಕೆ.ಬಸವರಾಜಗೆ ಫೈನಲ್ ಆಗಿದೆ, ಸಿ.ವಿ. ಚಂದ್ರಶೇಖರ್ಗೆ ಟಿಕೆಟ್ ಸಿಕ್ಕಿದೆ, ಮೋದಿ, ಶ್ರೀರಾಮುಲು,ರಾಯರಡ್ಡಿ ಬರುತ್ತಾರೆ ಎಂಬ ಅನೇಕ ವದಂತಿಗಳು ಕ್ಷೇತ್ರದಲ್ಲಿ ಅಲ್ಲದೆ ಮಾಧ್ಯಮಗಳಲ್ಲೂ ಹರಿದಾಡಿದ್ದವು. ಆದರೆ ಅಸಲಿಗೆ ದೆಹಲಿ ಮಟ್ಟದಲ್ಲಿ ನಡೆದಿದ್ದೇ ಬೇರೆಯಾಗಿತ್ತು. ಆ ಎಲ್ಲಾ ಅಡೆತಡೆಗಳನ್ನು ದಾಟಿಬಂದ ಹಾಲಿ ಸಂಸದ ಸಂಗಣ್ಣ ಕರಡಿಗೆ ಕೊನೆಗೂ ಬಿಜೆಪಿ ವರಿಷ್ಠರು ಮತ್ತೊಮ್ಮೆ ಸ್ಪಧರ್ೆಗೆ ಅವಕಾಶ ನೀಡಿದ್ದಾರೆ. ಈಗೇನಿದ್ದರೂ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಏರ್ಪಟ್ಟಂತಾಗಿದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿ ಯಡಿಯೂರಪ್ಪಗೆ ಅಜರ್ಿ ಸಲ್ಲಿಸಿದ್ದು ಸಿ.ವಿ. ಚಂದ್ರಶೇಖರ್, ಬಿಜೆಪಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಹಾಗೂ ಡಾ.ಕೆ. ಬಸವರಾಜ ಅವರು ಮಾತ್ರ. ಹಾಲಿ ಸಂಸದರಿಗೆ ಟಿಕೆಟ್ ಎಂದು ಹೇಳಿದ ಕಾರಣ ಸಂಗಣ್ಣ ಸಲ್ಲಿಸಿರಲಿಲ್ಲ. ಆದರೆ ಅತ್ತ ಕೈ ಟಿಕೆಟ್ಗೆ ಬರೋಬ್ಬರಿ ಎಂಟು ಆಕಾಂಕ್ಷಿಗಳು ರೇಸ್ನಲ್ಲಿದ್ದರು. ಏಳೂ ಆಕಾಂಕ್ಷಿಗಳನ್ನು ಮೀರಿ ಕೆ.ರಾಜಶೇಖರ್ ಹಿಟ್ನಾಳ ಟಿಕೆಟ್ ಗಿಟ್ಟಿಸಿದರು. ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದು ಸಹಾಯವಾಯಿತು. ಆದರೆ ಟಿಕೆಟ್ ಸಿಗದೇ ಮುನಿಸಿಕೊಂಡ ಉಳಿದ ಆಕಾಂಕ್ಷಿಗಳಲ್ಲಿ ಮುನಿಸು ಮುಂದುವರೆದಿದೆ. ಹಿಟ್ನಾಳ ಕುಟುಂಬಕ್ಕೆ ಮಣೆ ಹಾಕಿದ್ದು ಸರಿಯಲ್ಲ ಎಂದು ಹೇಳುವ ಮೂಲಕ ಒಳಗೊಳಗೆ ಕಾಂಗ್ರೆಸ್ ಪಕ್ಷಕ್ಕೆ ಬೇಗುದಿ ಇದೆ. ಆದರೆ ಬಿಜೆಪಿ ಆಕಾಂಕ್ಷಿಗಳದ್ದು ಒಂದೇ ಮಾತಾಗಿತ್ತು ಹಾಲಿ ಸಂಸದರು ಸ್ಪಧರ್ೆಯಿಂದ ಹಿಂದೆ ಸರಿದರೆ ನಮಗೆ ಟಿಕೆಟ್ ಕೊಡಿಸಿ ಎಂದು ಹೇಳಿದ್ದರು. ಆ ಮೂಲಕ ಟಿಕೆಟ್ ಬಗ್ಗೆ ಅಷ್ಟೊಂದು ಪ್ರಬಲ ಪೈಪೋಟಿ ನೀಡಲಿಲ್ಲ. ಇದೀಗ ಹಾಲಿ ಸಂಸದ ಸಂಗಣ್ಣಗೆ ಟಿಕೆಟ್ ನೀಡಿದ್ದು, ಎಲ್ಲರೂ ಒಟ್ಟಾಗಿ ದುಡಿಯಲಿದ್ದೇವೆ ಎಂಬ ಸಂದೇಶ ನೀಡಿದ್ದಾರೆ. ಈ ಒಗ್ಗಟ್ಟು ಕಾಂಗ್ರೆಸ್ನಲ್ಲಿ ಇಲ್ಲದಾಗಿದೆ. ಒಬ್ಬೊಬ್ಬರದ್ದು ಒಂದೊಂದು ದಾರಿ ಎಂಬಂತಾಗಿದೆ.
ಬಿಜೆಪಿಗಿಂತ ಮೊದಲೇ ಕಾಂಗ್ರೆಸ್ ಟಿಕೆಟ್ ಘೋಷಣೆಯಾದ ಕಾರಣ ಆ ಪಕ್ಷದ ಅಭ್ಯಥರ್ಿ ಈಗಾಗಲೇ ಕ್ಷೇತ್ರವನ್ನು ಒಂದು ಸುತ್ತು ಹಾಕಿ ನಾಮಪತ್ರ ಸಲ್ಲಿಕೆಗೆ ಎಲ್ಲರನ್ನೂ ಆಹ್ವಾನಿಸಿದ್ದಾರೆ. ಇತ್ತ ಬಿಜೆಪಿ ಟಿಕೆಟ್ ಘೊಷಣೆ ವಿಳಂಭವಾದ ಕಾರಣ ಇಡೀ ಕ್ಷೇತ್ರದಲ್ಲಿ ಸಂಗಣ್ಣ ಕರಡಿಯವರ ಪರ ಅರ್ಧ ಪ್ರಚಾರವೇ ನಡೆದಿದೆ. ಸಂಗಣ್ಣಗೆ ಟಿಕೆಟ್ ನೀಡಬೇಕು ಇಲ್ಲವಾದರೆ ಬಿಜೆಪಿ ಗೆಲುವು ಕಷ್ಟ, ಯಾಕೆ ಸಂಗಣ್ಣಗೆ ಟಿಕೆಟ್ ನೀಡುತ್ತಿಲ್ಲ ಎನ್ನುವ ಮಾತುಗಳು ಕ್ಷೇತ್ರದ ಜನಸಾಮಾನ್ಯರ ಬಾಯಿಯಲ್ಲಿ ಕೇಳಿಬಂದಿವೆ. ಇದೇ ಅರ್ಧ ಪ್ರಚಾರ ಆಗಿದೆ. ಇನ್ನೇನಿದ್ದರು ಅಧಿಕೃತ ಪ್ರಚಾರ ಬಾಕಿ ಇದೆ ಎನ್ನುತ್ತಾರೆ ಬಿಜೆಪಿ ಕಾರ್ಯಕರ್ತರು.
ಬಿಜೆಪಿ ಟಿಕೆಟ್ ಘೋಷಣೆ ಮೂಲಕ ಕ್ಷೇತ್ರದಲ್ಲಿ ಇದೀಗ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಂತಾಗಿದೆ. ಕಾಂಗ್ರೆಸ್ ಅಭ್ಯಥರ್ಿ ಹೊಸಮುಖ ಆಗಿದ್ದು, ಎರಡೂ ಪಕ್ಷಗಳ ರಣತಂತ್ರಗಳು ಯಾವ ರೀತಿ ಇರಲಿವೆ ಎಂಬುದೇ ಕುತೂಹಲ ಮೂಡಿಸಿವೆ.