ಕೊಪ್ಪಳ : 12ರಂದು ಗಂಗಾವತಿಗೆ ಪ್ರಧಾನಿ ನರೇಂದ್ರ ಮೋದಿ ಸಮಾವೇಶದಲ್ಲಿ ಲಕ್ಷಾಂತರ ಜನ ಭಾಗಿ: ಸಂಗಣ್ಣ

ಲೋಕದರ್ಶನ ವರದಿ

ಕೊಪ್ಪಳ 08: ಬಿಜೆಪಿ ಪ್ರಣಾಳಿಕೆಯು ದೇಶದ ಸಮಗ್ರ ಅಭಿವೃದ್ಧಿ ಹಾಗೂ ದೇಶ ಮುನ್ನಡೆಯಲು ಅತ್ಯಂತ ಸಂಕಲ್ಪದಿಂದ ಕೂಡಿವೆ ಎಂದು ಬಿಜೆಪಿ ಅಭ್ಯಥರ್ಿ ಸಂಗಣ್ಣ ಕರಡಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರದಂದು ಸುದ್ದಿಗೋಷ್ಠಿ ಬಿಜೆಪಿಯ ಪ್ರಣಾಳಿಕೆಯ ಪ್ರಮುಖ ಅಂಶಗಳ ಕುರಿತು ವಿವರಿಸಿ 45 ಪುಟದ 75 ಭರವಸೆಗಳಿದ್ದು, ರಾಷ್ಟ್ರದ ಸುರಕ್ಷತೆಗೆ ಹೆಚ್ಚು ಆದ್ಯತೆಯನ್ನು ನೀಡಲಾಗಿದೆ, ಈ ಹಿಂದಿನ ಭರವಸೆಗಳನ್ನು ಬಹುತೇಕ ಈಡೇರಿಸಿದ್ದು,  ದೇಶದ ಜನತೆ ಮೋದಿಯವರ ಆಡಳಿತವನ್ನು ಮೆಚ್ಚಿಕೊಂಡು ಈ ಚುನಾವಣೆಯಲ್ಲಿ ಮತ್ತೇ ಬೆಂಬಲಿಸಲಿದ್ದಾರೆ ಎಂದರು.

ಕೊಪ್ಪಳಕ್ಕೆ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯ ಮಂಜೂರಿಗೆ ಯತ್ನ: ಕಳೆದ ಐದು ವರ್ಷದಲ್ಲಿ ಕೇಂದ್ರದಿಂದ ರೈಲ್ವೆ, ರಸ್ತೆ, ಶಿಕ್ಷಣ, ಆರೋಗ್ಯ, ಸೇರಿ ವಿವಿಧ ವಲಯಗಳ ಅಭಿವೃದ್ಧಿಗೆ ಯೋಜನೆಗಳನ್ನು ಮಂಜೂರಿ ಆಗಿದ್ದು, ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಿದ ತೃಪ್ತಿ ಇದ್ದು, ಪ್ರಮುಖವಾಗಿ ಈ ಸಾರಿ ಕ್ಷೇತ್ರಕ್ಕೆ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯವನ್ನು ಮಂಜೂರಿ ಮಾಡಿಸಲಾಗುವದೆಂದರು.

  ಪ್ರಗತಿಯಲ್ಲಿರುವ ಮುನಿರಾಬಾದ್-ಮಹೆಬೂಬ ನಗರ ರೈಲ್ವೆ ಮಾರ್ಗವನ್ನು ರಾಯಚೂರವರೆಗೆ, ಗದಗ-ವಾಡಿ ರೈಲ್ವೆ ಯೋಜನೆಯ ಮಾರ್ಗವನ್ನು ಕುಷ್ಟಗಿ ಯವರೆಗೆ ಮುಂದಿನದಿನಗಳಲ್ಲಿ ಪೂರ್ಣಗೊಳಿಸಿ ರೈಲು ಓಡಾಟ ನಡೆಸಲಾಗುವುದು ಹಾಗೂ ಹೊಸದಾಗಿ ಮೂರು ರಾಷ್ಟ್ರೀಯ ಹೆದ್ದಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಈಗಾಗಲೇ ಡಿಪಿಆರ್ ಆಗಿದ್ದು ಇವುಗಳ ಅನುಷ್ಠಾನದ ಜೊತೆಯಲ್ಲಿ ಕೊಪ್ಪಳ ಹಾಗೂ ಸಿಂಗಟಾಲೂರ ಏತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಕೇಂದ್ರದ ಸಹಾಯ ಪಡೆಯಲಾಗುವದೆಂದರು.

12ರಂದು  ಮೋದಿ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಭಾಗಿ : ಕ್ಷೇತ್ರದ ಗಂಗಾವತಿಯಲ್ಲಿ ಇದೇ ಏ-12 ರಂದು ಏರ್ಪಡಿಸಿರುವ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೇರಿ ಪಕ್ಷದ ಅನೇಕ ವರಿಷ್ಠರು ಪಾಲ್ಗೊಳ್ಳುವ ಈ ಕಾರ್ಯಕ್ರಮದಲ್ಲಿ ಒಂದುವರೆ ಲಕ್ಷ ಜನ ಭಾಗವಹಿಸಲಿದ್ದಾರೆ ಎಂದು ಸಂಗಣ್ಣ ಕರಡಿ ಹೇಳಿದರು.

ಸಮಾವೇಶಕ್ಕಾಗಿ 30 ಎಕರೆ ವಿಸ್ತಾರದ ಪ್ರದೇಶದಲ್ಲಿ ವೇದಿಕೆಯನ್ನು ಸಿದ್ಧಪಡಿಸುವ ಕಾರ್ಯನಡೆದಿದೆ, ಬಿಜೆಪಿಯ ಶಕ್ತಿಏನೆಂಬುದನ್ನು ತೋರಿಸುತ್ತೇವೆ, ಪಕ್ಷದಲ್ಲಿ ಎಲ್ಲರೂ ಒಂದಾಗಿದ್ದು, ಮೋದಿಯವರ ಕೈಬಲಪಡಿಸಲು ಪಕ್ಷ ಗೆಲ್ಲಿಸಲು ಪಣತೊಡಲಾಗಿದೆ, ಇಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಅವೇಲ್ಲಾ ಗಾಳಿಸುದ್ದಿಗಳಾಗಿವೆ, ಕ್ಷೇತ್ರದಲ್ಲಿ ಬಿಜೆಪಿ ಅಲೆ ಇದ್ದು, ಜನ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ, ಮತ್ತೆ ಈ ಸಾರಿ ನಾನೇ ಗೆಲ್ಲುವುದು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಮುಖಂಡರಾದ ಸಿ.ವಿ.ಚಂದ್ರಶೇಖರ್, ಹೆಚ್. ಗಿರಿಗೌಡ, ಹಾಲೇಶ ಕಂದಾರಿ, ವಿರುಪಾಕ್ಷಪ್ಪ ಬಾರಕೇರ ಉಪಸ್ಥಿತರಿದ್ದರು.