ಲೋಕದರ್ಶನ ವರದಿ
ಕೊಪ್ಪಳ 23: ಕೇಂದ್ರದ ಆಡಳಿತಾರೂಢ ಬಿಜೆಪಿ ಸರಕಾರದ ಜನಪರ ಯೋಜನೆಗಳು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರ ಅಭಿವೃದ್ಧಿಪರ ಕೆಲಸಗಳು ತಮ್ಮ ಗೆಲುವಿಗೆ ಸಹಕಾರಿದೆ. ಆದರೆ ಇನ್ನು ಮುಂದೆ ಕ್ಷೇತ್ರದ ನೀರಾವರಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ ಎಂದು ಎರಡನೇ ಬಾರಿಗೆ ಗೆಲವು ಸಾಧಿಸಿದ ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ಗುರುವಾರ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ತಮ್ಮ ಗೆಲುವು ಘೋಷಣಾ ವರದಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ಕಳೆದ ಐದು ವರ್ಷದಲ್ಲಿ ಜನಪರ ಹಾಗೂ ಅಭಿವೃದ್ಧಿಪರ ಆಡಳಿತ ನೀಡುತ್ತಾ ಬಂದಿದೆ. ಅದರಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೇಶಾಭಿಮಾನ, ದೇಶದ ಸಾಮಾನ್ಯ ಜನರ ಅಭಿವೃದ್ಧಿಗೆ ಟೊಂಕ ಕಟ್ಟಿ ಅಭಿವೃದ್ದಿಗೆ ಮುಂದಾದ ನರೇಂದ್ರ ಮೋದಿಯವ ಜನಪ್ರಿಯ ಯೋಜನೆಗಳು ತಮ್ಮ ಗೆಲುವಿಗೆ ನಿಣರ್ಾಯಕ ಪಾತ್ರ ವಹಿಸಿದವು ಎಂದರು.
ಕಳೆದ ಬಾರಿ ಅಧಿಕಾರಿಕ್ಕೆ ಬರುವ ಮುಂಚೆ. ಮಾತು ನೀಡಿದ್ದ ನರೇಂದ್ರ ಮೋದಿಯವರು ಹಲವಾರಿ ಬೇಡಿಕೆಗಳನ್ನು ಈಡೆರಿಸಿದ್ದಾರೆ. ದೇಶದ ರಕ್ಷಣೆಯಲ್ಲಿ ಈಡಿ ವಿಶ್ವವೇ ಬೆರಗಾಗುವಂತೆ ರಕ್ಷಣೆಗೆ ಮುಂದಾಗಿದ್ದರು. ಇದನ್ನೇಲ್ಲಾ ನೋಡಿದ ದೇಶದ ಜನ ಹಾಗೂ ಜಿಲ್ಲೆಯ ಜನ ಬಿಜೆಪಿಯನ್ನು ಬೆಂಬಲಿಸುವುದರ ಮೂಲಕ ನರೇಂದ್ರ ಮೋದಿಯವರನ್ನು ಮತ್ತೆ ಅಧಿಕಾರಕ್ಕೆ ಬರುವಂತೆ ಆಶಿರ್ವದಿಸಿದ್ದಾರೆ. ಇನ್ನು ಮುಂದೆ ದೇಶದ ಸಾಕಷ್ಟು ಅಭಿವೃದ್ದೀಗೆ ಮೋದಿಯವರು ಒತ್ತು ನೀಡಲಿದ್ದಾರೆ. ಅದರಂತೆ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದ ಕೃಷ್ಣಾ ಬಿ.ಸ್ಕಿಂ, ಸಿಮಟಾಲೂರ, ಏತ ನೀರಾವರಿ ಸೇರಿದಂತೆ ಕ್ಷೇತ್ರದ ನೀರಾವರಿಗೆ ಹೆಚ್ಚು ಆಧ್ಯತೆ ನೀಡಿ ನೀರಾರಿ ಯೋಜನೆಗಳನ್ನು ಪೂರ್ಣಗೊಳಿಸಲು ಶ್ರಮಿಸಲಾಗುವುದು ಎಂದು ಹೇಳಿದರು.
ಈಸಂದರ್ಭದಲ್ಲಿ ಶಾಸಕರಾದ ಹಾಲಪ್ಪ ಆಚಾರ, ಪರಣ್ಣ ಮುನವಳ್ಳಿ, ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ತಮ್ಮನ್ನು ಎರಡನೇ ಭಾರಿ ಚುನಾಯಿಸಿ ಕಳಿಸಿದ್ದಕ್ಕೆ ಅವರು ಮತದಾರರಿಗೆ ಧನ್ಯವಾದ ಅರ್ಪಿಸಿದರು.