ಲೋಕದರ್ಶನ ವರದಿ
ಕೊಪ್ಪಳ (ಗಂಗಾವತಿ) 09: ಇದೇ ಏ.12ಕ್ಕೆ ಜಿಲ್ಲೆಯ ಗಂಗಾವತಿಗೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯ ಬಹಿರಂಗ ಸಮಾವೇಶಕ್ಕೆ ರಾಯಚೂರು, ಕೊಪ್ಪಳ, ಬಳ್ಳಾರಿ ಕ್ಷೇತ್ರಗಳ ಸುಮಾರು 2ಲಕ್ಷ ಜನ ಸೇರುವ ನೀರಿಕ್ಷೆ ಇದೆ ಎಂದು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯ ರಘುನಾಥ್ ಮಲ್ಕಾಪುರೆ ಹೇಳಿದರು.
ಮಂಗಳವಾರ ಸಮಾವೇಶ ನಡೆಯುವ ಗಂಗಾವತಿ ಹೊರವಲಯರದ ಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಮೋದಿಯವರ ಜೊತೆ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಯಾರು ಬರುತ್ತಾರೆ ಎಂಬುದು ಇನ್ನೂ ಅಂತಿಮವಾಗಿಲ್ಲ. ಆದರೆ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಯ ಬಿಜೆಪಿ ನಾಯಕರು, ಶಾಸಕರು, ವಿಪ ಸದಸ್ಯರು ಸೇರಿದಂತೆ ಹಲವರು ಸಮಾವೇಶದಲ್ಲಿ ಹಾಜರಿರುತ್ತಾರೆ ಎಂದು ತಿಳಿಸಿದರು.
ಕಳೆದ ಚುನಾವಣೆಯಲ್ಲಿ ಹೈದ್ರಾಬಾದ್-ಕನರ್ಾಟಕ ಭಾಗದಲ್ಲಿ ಎರಡು ಕ್ಷೇತ್ರಗಳನ್ನು ನಾವು ಸೋತಿದ್ದೆವು, ಈ ಬಾರಿ ಕಲ್ಬುಗರ್ಿ ಕ್ಷೇತ್ರದಲ್ಲಿ ಮಲ್ಲಿಕಾಜರ್ುನ ಖಗರ್ೆ ವಿರುದ್ಧ ನಮ್ಮ ಅಭ್ಯಥರ್ಿ ಉಮೇಶ್ ಜಾಧವ್ 1 ಲಕ್ಷ ಮತಗಳಿಂದ ಜಯಗಳಿಸುವರು. ಅದರಂತೆ ರಾಯಚೂರು ಕ್ಷೇತ್ರದಲ್ಲಿ ಕಳೆದ ಬಾರಿ ಕೇವಲ ಒಂದು ಸಾವಿರ ಮತಗಳಲ್ಲಿ ಸೋತಿದ್ದೆವು.ಆದರೆ ಈ ಬಾರಿ ಗೆಲುವಿ ಶತಃಸಿದ್ಧ. ಇದಲ್ಲದೆ ಬಳ್ಳಾರಿ ಕ್ಷೇತ್ರದ ಉಪಚುನಾವಣೆಯಲ್ಲಿ ಸಮ್ಮಿಶ್ರ ಸಕರ್ಾರದ ಆಡಳಿತ ದುರುಪಯೋಗ, ಹಣ ಬಲ, ತೋಳ್ಬಲದಿಂದ ಉಗ್ರಪ್ಪ ಗೆದ್ದಿದ್ದರು. ಆದರೆ ಈ ಚುನಾವಣೆಯಲ್ಲಿ ಬಿಜೆಪಿ ಆಭ್ಯಥರ್ಿ ದಾಖಲೆ ಮತಗಳಿಂದ ಗೆಲ್ಲುವರು ಎಂದು ವಿಶ್ವಾಸವ್ಯಕ್ತಪಡಿಸಿದರು.
ಇನ್ನು ಮುಂಬೈ ಕನರ್ಾಟಕ ಭಾಗದ ಚಿಕ್ಕೋಡಿ ಕ್ಷೇತ್ರದಲ್ಲಿ ಕಡಿಮೆ ಮತದಲ್ಲಿ ಸೋತಿದ್ದೆವು, ಆದರೆ ಈ ಬಾರಿ ನಮ್ಮಅಭ್ಯಥರ್ಿ ಗೆಲ್ಲುತ್ತಾರೆ. ಆ ಮೂಲಕ ಉತ್ತರ ಕನರ್ಾಟಕ ಭಾಗದ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ಮೂಲಕ ಅಧಿಕ ಸ್ಥಾನಗಳನ್ನು ಗೆಲ್ಲುತ್ತೇವೆ. ಇದಕ್ಕೆ ಕೇಂದ್ರ ಸಕರ್ಾರ, ಮೋದಿಯವರು ನೀಡಿದ ಹಲವು ಅಭಿವೃದ್ಧಿ ಕಾರ್ಯಗಳೇ ಶ್ರೀರಕ್ಷೆ ಎಂದು ಹೇಳಿದರು.
ಬಳ್ಳಾರಿ ಕ್ಷೇತ್ರದ ವೆಂಕಟೇಶಪ್ರಸಾದ್ ಅವರಿಗೆ ಟಿಕೆಟ್ ಕೊಡುತ್ತೇವೆ ಎಂದು ಯಾರು ಹೇಳಿ ಪಕ್ಷಕ್ಕೆ ಕರೆತಂದಿಲ್ಲ. ನಮ್ಮದು ದೊಡ್ಡ ಪಕ್ಷ ಇಲ್ಲಿಗೆ ಯಾರಾದರೂ ಬರಬಹುದು. ಆದರೆ ಟಿಕೆಟ್ ಕೊಡುವ ಅಧಿಕಾರ ಇರುವುದು ಕೇಂದ್ರ ಸಮಿತಿಗೆ ಬಿಟ್ಟ ವಿಚಾರ. ಅವರು ಪಕ್ಷಕ್ಕಾಗಿ ದುಡಿಯುತ್ತಾರೆ ಎಂದು ಹೇಳಿದರು.
ಮೋದಿಯವರು ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದು ನಿಜ. ಆದರೆ ನೇರ ಉದ್ಯೋಗ ನೀಡುತ್ತೇವೆ ಎಂದು ಎಲ್ಲೂ ಹೇಳಿಲ್ಲ.ಬದಲಾಗಿ ಪರೊಕ್ಷವಾಗಿ ಉದ್ಯೋಗ ಸೃಷ್ಟಿ ಮಾಡಲಾಗಿದೆ. ಕೌಶಲ್ಯ ಅಭಿವೃದ್ಧಿ, ಮುದ್ರಾ ಯೋಜನೆ ಸೇರಿದಂತೆ ಸ್ವಯಂ ಉದ್ಯೋಗ ಸೃಷ್ಟಿ ಮಾಡಲಾಗಿದೆ. ಇದು ಕಾಂಗ್ರೆಸ್ ಸೇರಿದಂತೆ ಇತರೆ ವಿಪಕ್ಷಗಳಿಗೆ ಕಾಣುತ್ತಿಲ್ಲ. ರೈತರಿಗೆ ಪಿಂಚಣಿ ಕೊಡಲಾಗುವುದು, ಬಡ್ಡಿರಹಿತ ಸಾಲ ನೀಡಲಾಗುವುದು ಎಂದು ತಿಳಿಸಿದರು.
ಸಂಸದ ಹಾಗೂ ಬಿಜೆಪಿ ಅಭ್ಯಥರ್ಿ ಸಂಗಣ್ಣ ಕರಡಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಾಶ್ಮೀರದಲ್ಲಿ ಸೇನೆ ನಿಯೋಜನೆ ಮಾಡಿದ್ದನ್ನು ವಾಪಾಸ್ ಪಡೆಯಲಾಗುವುದು. ಸೇನೆಗೆ ಅಧಿಕಾರ ಮೊಟಕುಗೊಳಿಸಲಾಗುವುದು ಎಂದು ಪ್ರಣಾಳಿಕೆ ಹೊರಡಿಸುವ ಮೂಲಕ ಆ ಪಕ್ಷಕ್ಕಾಗಲಿ ಅಥವಾ ರಾಹುಲ್ ಗಾಂಧಿಗಾಗಲಿ ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಬದ್ಧತೆ ಇಲ್ಲ. ಆದರೆ ಬಿಜೆಪಿಗೆ ರಾಷ್ಟ್ರೀಯತೆಯೆ ಮುಖ್ಯವಾಗಿದೆ. ಬಿಜೆಪಿಗೆ ದೇಶ ಮೊದಲು ಎನ್ನುವುದನ್ನು ಜನತೆ ಕಂಡುಕೊಳ್ಳಬೇಕು ಎಂದರು.
ನಾವು ಬಿಜೆಪಿ ಯವರು, ನಮ್ಮ ನಾಯಕ ಮೋದಿ. ವಿಷಯ ಹೀಗಿರುವಾಗ ನಾವುಗಳು ಮೋದಿ ಮುಖವಾಡ ಧರಿಸದೆ, ಮೋದಿ ಹೆಸರೇಳದೇ ಸಿದ್ದರಾಮಯ್ಯ ಅವರ ರಾಹುಲ್ ಗಾಂಧಿ ಹೆಸರೇಳಿ ಮತ ಕೇಳಬೇಕೆ ಎಂದು ಮಾಮರ್ಿಕವಾಗಿ ಪ್ರತಿಕ್ರಯಿಸಿದರು.
ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕನಕಗಿರಿ ಶಾಸಕ ಬಸವರಾಜ್ ದಢೇಸೂಗೂರು, ಮಾಜಿ ಶಾಸಕ ಜಿ. ವೀರಪ್ಪ, ಮೃತ್ಯುಂಜಯ ಜಿನಗಾ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷ ಸಿಂಗನಾಳ, ಗಿರೇಗೌಡ, ಬಿಲ್ಗಾರ ನಾಗರಾಜ, ಲಂಕೇಶ್ ಗುಡದಾಳ, ಅಮರೇಶ್ ಕರಡಿ, ರಾಜು ಬಾಕಳೆ,ಚಂದ್ರಶೇಖರ ಕವಲೂರು, ಚಂದ್ರು ಹಲಗೇರಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.