ಕೊಪ್ಪಳ: ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಲು ಬಿಜೆಪಿ ಬೆಂಬಲಿಸಿ: ಗವಿಸಿದ್ದಪ್ಪ ಕರಡಿ

ಲೋಕದರ್ಶನ ವರದಿ

ಕೊಪ್ಪಳ 17: ದೇಶವನ್ನು ಬಡತನದಲ್ಲೇ ಇರುವಂತೆ ಮಾಡಿದ ಕಾಂಗ್ರೆಸ್ನ ದುರಾಡಳಿತ ಕೊನೆಗೊಳಿಸಿ ಐದು ವರ್ಷದಲ್ಲಿ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಪ್ರಧಾನಿ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲು ಬಿಜೆಪಿಯನ್ನು ಬೆಂಬಲಿಸುವಂತೆ ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ ಮನವಿ ಮಾಡಿದರು.  

ಅವರು ಬುಧುವಾರ ಹಿಟ್ನಾಳ ಜಿಲ್ಲಾ ಪಂಚಾಯತ್ ಕ್ಷೇತ್ರದ ಶಹಾಪುರು, ಲಿಂಗಾಪುರು,ಹೊಳೆ ಮುದ್ಲಾಪುರು, ಬಂಡಿ ಹರ್ಲಾಪುರ ಗ್ರಾಮಗಳಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಕೈಗೊಂಡು ಮಾತನಾಡಿದರು ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಕಳೆದ ಐದು ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಿ ವಿಶ್ವ ಮೆಚ್ಚಿದ ನಾಯಕ ಆಗಿದ್ದಾರೆ,ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಮೋದಿಯವರನ್ನು ಟೀಕಿಸುತ್ತ ದೇಶದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಾಳಜಿ ತೋರದೆ ಮೈಮರೆತಿವೆ. ಮೋದಿಯವರನ್ನು ಮತ್ತೊಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡಲು ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ  ಸಂಗಣ್ಣ ಕರಡಿಯವರಿಗೆ ಬೆಂಬಲಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗಿರೀಶ ಹಿರೇಮಠ, ಪ್ರದೀಪ್ಹಿಟ್ನಾಳ್, ಪ್ರಶಾಂತ ಲಿಂಗಪುರು, ಗವಿಸಿದ್ದಪ್ಪ ಜಂತಗಲ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.