ಕೊಪ್ಪಳ : ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಗ್ರಾಮೀಣ ಜನರ ಜೀವನಾಡಿ: ಪೆದ್ದಪ್ಪಯ್ಯ

ಕೊಪ್ಪಳ 18: ಕೊಪ್ಪಳ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಗ್ರಾಮೀಣ ಜನರ ಜೀವನಾಡಿಯಾಗಿದೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ   ಅಧಿಕಾರಿ ಆರ್.ಎಸ್. ಪೆದ್ದಪ್ಪಯ್ಯ ರವರು ತಿಳಿಸಿದ್ದಾರೆ.  

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರಸಕ್ತ ಸಾಲಿಗೆ ಜಿಲ್ಲೆಗೆ 44 ಲಕ್ಷ ಮಾನವ ದಿನಗಳ ಸೃಜನೆಯ ಗುರಿಯನ್ನು ಹೊಂದಲಾಗಿದೆ. ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಿಗೆ ಯಾರೂ ಗುಳೆ ಹೋಗದಂತೆ ಕೆಲಸಕ್ಕಾಗಿ ಬೇಡಿಕೆ ಸಲ್ಲಿಸಲು ಕುಟುಂಬಗಳಿಗೆ ಸ್ಥಳೀಯವಾಗಿ ಉದ್ಯೋಗ ಖಾತರಿ ಯೋಜನೆಯಡಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳಲ್ಲಿ ಕೆಲಸ ನೀಡಲಾಗುತ್ತಿದೆ.   

ಜಿಲ್ಲೆಯಲ್ಲಿ 4 ತಾಲೂಕುಗಳಲ್ಲಿ ಜಿಲ್ಲಾ ಪಂಚಾಯತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸಲು ಎಲ್ಲಾ ಅನುಷ್ಟಾನ ಇಲಾಖೆ ಅಧಿಕಾರಿಗಳಿಗೆ ಜನರು ಉದ್ಯೋಗ ಭೇಡಿಕೆ ನೀಡಿದ ತಕ್ಷಣ ಉದ್ಯೋಗ ಒದಗಿಸಲು ಹಾಗೂ ಸಕಾಲದಲ್ಲಿ ಕೂಲಿ ಪಾವತಿ ಮಾಡಲು ನಿದರ್ೇಶನ ನೀಡಲಾಗಿದೆ.  ಈಗಾಗಲೇ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ.  ಮೇ. 17 ರವರೆಗೆ 19758 ಕುಟುಂಬಗಳಿಗೆ ಉದ್ಯೋಗ ಒದಗಿಸಿ 371635 ಲಕ್ಷ ಮಾನವ ದಿನಗಳ ಸೃಜನೆ ಮಾಡಲಾಗಿದೆ.  

ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕನಿಷ್ಟ ಒಂದು ರಿಂದ ಎರಡು ಸಮುದಾಯ ಆಧಾರಿತ ಮತ್ತು ಕನಿಷ್ಟ 50 ವೈಯಕ್ತಿಕ ಕಾಮಗಾರಿಗಳನ್ನು ಪ್ರಾರಂಭಿಸಲು ಮತ್ತು ಪ್ರಗತಿಯಲ್ಲಿ ಇಡಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನಿದರ್ೇಶನ ನೀಡಲಾಗಿದೆ. ಉದ್ಯೋಗ ಬೇಡಿಕೆಯನ್ನು ಸಂಬಂಧಿಸಿದ ಗ್ರಾಮ ಪಂಚಾಯತ್ಗಳಲ್ಲಿ ನಮೂನೆ-6 ನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಅಥವಾ ಆಯಾ ತಾಲ್ಲೂಕು ಪಂಚಾಯತ್ ಅಥವಾ ಜಿಲ್ಲಾ ಪಂಚಾಯತ್ ಕಛೇರಿಗೆ ಸಂಪಕರ್ಿಸಿ ಮಾಹಿತಿ ಪಡೆಯಬಹುದಾಗಿದೆ.  

ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯ ಒದಗಿಸುವುದು, ನೈಸಗರ್ಿಕ ಸಂಪನ್ಮೂಲ ಬಲಪಡಿಸುವುದು, ವಲಸೆ ತಡೆಗಟ್ಟುವುದು, ಆಥರ್ಿಕ ಭದ್ರತೆ ಒದಗಿಸುವುದು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಬರಗಾಲ ನಿಮಿತ್ಯ ಜನರಿಗೆ ಉದ್ಯೋಗ ಒದಗಿಸುವ ಸಲುವಾಗಿ 184 ಕೆರೆಗಳನ್ನು ಗುರುತಿಸಲಾಗಿದ್ದು (ಜಲಾಮೃತ ಯೋಜನೆಯಡಿ) ಉದ್ಯೋಗ ಬೇಡಿ ಬಂದಲ್ಲಿ ತಕ್ಷಣ ಉದ್ಯೋಗ ಒದಗಿಸಲಾಗುವುದು ಜನರಿಗೆ ಕೆರೆ ಹೂಳೆತ್ತುವ, ರಸ್ತೆ ನಿಮರ್ಾಣ, ಶಾಲಾ ಕಂಪೌಂಡ, ಶಾಲಾ ಆಟದ ಮೈದಾನ, ಅರಣ್ಯ ಸಸಿ ನೆಡುವ, ಸಸಿ ನಿರ್ವಹಣೆ, ದನದದೊಡ್ಡಿ, ರೇಷ್ಮೆ ಬೆಳೆ, ತೋಟಗಾರಿಕೆ, ಮನೆ ನಿಮರ್ಾಣ, ಬದು ನಿಮರ್ಾಣ, ನಾಲಾ ದುರಸ್ತಿ, ಗೋಕಟ್ಟೆ ನಿಮರ್ಾಣ ಇನ್ನು ಹಲವು ಕಾಮಗಾರಿಗಳಲ್ಲಿ ಕೂಲಿಕಾರರಿಗೆ ಒದಗಿಸಲಾಗುತ್ತಿದೆ.

ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ (ಆಥರ್ಿಕ ವರ್ಷಕ್ಕೆ ನಿಗದಿಪಡಿಸಿದಂತೆ) ಉದ್ಯೋಗ ಚೀಟಿಗಳನ್ನು ಗ್ರಾಮ ಪಂಚಾಯತಿಗಳಲ್ಲಿ ಪಡೆಯಬೇಕು. ಉದ್ಯೋಗಕ್ಕಾಗಿ ನಮೂನೆ-6ರಲ್ಲಿ ಅಜರ್ಿ ಸಲ್ಲಿಸಿದ 15 ದಿನಗಳೊಳಗಾಗಿ ಕೆಲಸ ಖಾತರಿ, ಕೂಲಿ ಹಣವನ್ನು ಕೆಲಸ ನಿರ್ವಹಿಸಿದ 15 ದಿನಗಳೊಳಗಾಗಿ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ನೀಡಲಾಗುವುದು. ವೃದ್ಧರು ಮತ್ತು ವಿಕಲಚೇತನರಿಗೆ ಕೆಲಸದ ಪರಿಮಾಣದಲ್ಲಿ ಶೇ. 50 ರಿಯಾಯಿತಿ ಹಾಗೂ ಅಂಗವಿಕಲರಿಗೆ ಪ್ರತ್ಯೇಕ ಉದ್ಯೋಗ ಚೀಟಿ ನೀಡಲಾಗುವುದು.

ಗ್ರಾಮ ಪಂಚಾಯತಿಗಳಿಂದ ವೈಯಕ್ತಿಕ ಕಾಮಗಾರಿಗಳಾದ ಕುರಿ/ ದನದದೊಡ್ಡಿ (ಎಸ್.ಸಿ ಮತ್ತು ಎಸ್.ಟಿ ಕುಟುಂಬಗಳಿಗೆ ಮತ್ತು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಟಾನಿಸಿದೆ ಸಾಮಾನ್ಯ ಕುಟುಂಬಗಳಿಗೂ) ಭೂ ಅಭಿವೃದ್ಧಿ , ಒಡ್ಡು, ಬದು ನಿಮರ್ಾಣ, ಇಂಗು ಗುಂಡಿ, ಕೊಳವೆ ಭಾವಿ, ಮರು ಪೂರಣ ಘಟಕ ಹಾಗೂ ಸಮುದಾಯ ಕಾಮಗಾರಿಗಳಾದ ಕೆರೆ ಅಭಿವೃದ್ಧಿ ಕಾಮಗಾರಿ (ಕೆರೆ ಹೂಳೆತ್ತುವುದು ಮತ್ತು ಪಿಚ್ಚಿಂಗ್), ಆಟದ ಮೈದಾನ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ, ಗ್ರಾಮೀಣ ಗೋದಾಮು, ಮಲ್ಟಿ ಆಚರ್್ ಚೆಕ್ ಡ್ಯಾಂ, ಗ್ರಾಮೀಣ ಉದ್ಯಾನವನ, ಅಂಗನವಾಡಿ ಕೇಂದ್ರ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ), ನಮ್ಮ ಹೊಲ ನಮ್ಮ ದಾರಿ (ಮಣ್ಣು ರಸ್ತೆ 200 ಮೀಟರ್ಗೆ), ರೈತ ಕಣ, ಸಂತೆ ಕಟ್ಟೆ, ಶಾಲಾ ಶೌಚಾಲಯ (ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ), ಶಾಲಾ ಕಂಪೌಂಡ್, ಸಂಜೀವಿನಿ ಶೆಡ್, ರಾಜೀವಗಾಂಧಿ ಸೇವಾ ಕೇಂದ್ರ ಕಟ್ಟಡ, ಗೋಬರ್ ಗ್ಯಾಸ್ ಗುಂಡಿ ತೆಗೆಯುವುದು, ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ, ವಾಲ್ ಪೂಲ್ ಮಾದರಿ, ರಿಚಾರ್ಜ  ವೆಲ್, ಇಂಜಕ್ಷನ್ ರಿಚಾಜರ್್, ವೆಲ್, ಕಲ್ಲು ತಡೆ, ಕುಡಿಯುವ ನೀರಿನ ಬೋರವೆಲ್ ರಿಚಾಜರ್್ ಪಿಟ್, ಸಮುದಾಯ ದನದ ದೊಡ್ಡಿ, ನಿಮರ್ಾಣ ಮಾಡಲಾಗುವುದು.

ಯೋಜನೆಯಡಿ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯಿಂದ ಹಂದಿ, ಅಜೋಲ ತೊಟ್ಟಿ, ಅರಣ್ಯ ಇಲಾಖೆ ವತಿಯಿಂದ ಸ್ವಂತ ಜಮೀನು ಮತ್ತು ಮತ್ತು ಬದುಗಳಲ್ಲಿ ಸಿಲ್ಟರ್, ಹಬ್ಬೇವು, ಹಲಸು, ಸಾಗವಾನಿ, ತೇಗ ಮುಂತಾದ ಗಿಡಗಳನ್ನು, ಮೀನುಗಾರಿಕೆ ಇಲಾಖೆಯಿಂದ ಮೀನು ಕೃಷಿ ಹೊಂಡ, ರೇಷ್ಮೆ ಇಲಾಖೆಯಿಂದ ಹಿಪ್ಪು ನೇರಳೆ ನರ್ಸರಿ, ಹಿಪ್ಪು ನೇರಳೆ ನಾಟಿ ಜೋಡಿಸಾಲು ಪದ್ದತಿ, ಹಿಪ್ಪು ನೇರಳೆ ಮರಗಡ್ಡಿ ವಿಧಾನ, ಕೃಷಿ ಇಲಾಖೆಯಿಂದ ಎರೆಹುಳು ತೊಟ್ಟಿ, ಭೂ ಅಭಿವೃದ್ಧಿ, ಕೃಷಿ ಹೊಂಡ ನಿಮರ್ಾಣಕ್ಕೆ ಅವಕಾಶವಿದೆ.

ಯೋಜನೆಯ ಮಾಹಿತಿ ಹಾಗೂ ಕಾಮಗಾರಿಗಳ ವಿವರಗಳಿಗಾಗಿ ಕೊಪ್ಪಳ ಜಿಲ್ಲಾ ಪಂಚಾಯತಿಯ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕರ ಮೊ. ನಂ: 9482030938, ಕೊಪ್ಪಳ ಜಿಲ್ಲಾ ಪಂಚಾಯತಿಯ ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕರ ಮೋ. ನಂ : 9482056180, ಕೊಪ್ಪಳ ತಾಲ್ಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕರ ಮೋ. ನಂ: 9686829096, ಗಂಗಾವತಿ ತಾಲ್ಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕರ ಮೋ. ನಂ : 8217262363, ಕುಷ್ಟಗಿ ತಾಲ್ಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕರ ಮೋ. ನಂ : 7899320032, ಯಲಬುರ್ಗಾ ತಾಲ್ಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜಕರ ಮೋ. ನಂ. 8095235482 ನ್ನು ಸಂಪಕರ್ಿಸಬಹುದು.