ಲೋಕದರ್ಶನ ವರದಿ
ಕೊಪ್ಪಳ 07: ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಒಂದು ರೀತಿ ಹಿಟ್ ಅಂಡ್ ರನ್ ಕೇಸ್ ಇದ್ದಂತೆ. ಪ್ರಾರಂಭದಲ್ಲಿ ಹೇಳುವುದು, ನಂತರ ಮೈಮೇಲೆ ಬರುತ್ತಿದ್ದಂತೆ ನಾ ಹೇಳಿಯೇ ಇಲ್ಲ ಎಂದು ಯೂಟನರ್್ ತೆಗೆದುಕೊಳ್ಳುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.
ಅವರು ತಾಲೂಕಿನ ಹುಲಿಗಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪುಲ್ವಾಮಾ ದಾಳಿ ವಿಚಾರ ನನಗೆ ಮೊದಲೇ ಗೊತ್ತಿತ್ತು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಇದು ಮಾಧ್ಯಮಗಳಲ್ಲಿಯೂ ಸಹ ಬಂದಿದೆ. ಆ ವಿಚಾರಕ್ಕೆ ಸಂಬಂಧಪಟ್ಟಂತೆ ಕುಮಾರಸ್ವಾಮಿ ಈಗ ನಾನು ಆ ವಿಷಯ ಹೇಳಿಲ್ಲ ಎಂದು ಹೇಳುತ್ತಿದ್ದಾರೆ. ಕುಮಾರಸ್ವಾಮಿ ಈ ಹಿಂದೆಯೂ ಈ ರೀತಿ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಇಂತಹ ಹೇಳಿಕೆಗಳನ್ನು ನೀಡೋದು, ನಂತರ ನಾನು ಹೇಳಿಲ್ಲ ಅನ್ನೋದು. ದಾಳಿ ವಿಚಾರ ಮೊದಲೇ ಗೊತ್ತಿದ್ದರೆ, ಯಾಕೆ ಕೇಂದ್ರ ಗುಪ್ತಚರ ಇಲಾಖೆಗೆ ತಿಳಿಸಲಿಲ್ಲ ಎಂದರು.
ರಾಜ್ಯದ ಸಣ್ಣ ನೀರಾವರಿ ಸಚಿವ ಸಿ. ಎಸ್. ಪುಟ್ಟರಾಜು ಹಾಗೂ ಮಾಜಿ ಸಂಸದ ಜಿ. ಮಾದೇಗೌಡ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಐಟಿ ದಾಳಿಯಾದಾಗ ಸಿಎಂ ಕುಮಾರಸ್ವಾಮಿ, ಸಚಿವ ಡಿಕೆಶಿ ಸೇರಿ ಮೊದಲಾದವರು ಪ್ರತಿಭಟಿಸಿದರು. ಈಗ ಮಂಡ್ಯದಲ್ಲಿ ಹಣ ಹರಿದಾಡುತ್ತಿದೆ ಎಂಬುದಕ್ಕೆ ವೈರಲ್ ಆಗಿರುವ ಈ ಆಡಿಯೋ ಉದಾಹರಣೆ. ಹಣದ ಕುರಿತಂತೆ ಆಡಿಯೋ ವೈರಲ್ ಆಗಿರೋದು ನಾಚಿಕೆಗೇಡು. ಮಂಡ್ಯದಲ್ಲಿ ಹಣದ ಅವ್ಯವಹಾರ ಶುರುವಾಗಿದೆ. ಈ ಬಗ್ಗೆ ಈ ಹಿಂದೆಯೇ ಸುಮಲತಾ ಅಂಬರೀಷ್ ಅವರು ಸಹ ಆರೋಪಿಸಿದ್ದರು. ಮತದಾರರಿಗೆ ಆಮಿಷ ಒಡ್ಡುವುದನ್ನು ಅಲ್ಲಿ ಶುರು ಮಾಡಿದ್ದಾರೆ ಎಂಬುದಕ್ಕೆ ಆಡಿಯೋ ಮೇಲ್ನೋಟಕ್ಕೆ ಸಾಕ್ಷಿಯಾಗುತ್ತದೆ. ಕಾಮಗಾರಿ ಪೂರ್ಣಗೊಳಿಸದೆ ಗುತ್ತಿಗೆದಾರರಿಗೆ ಸಕರ್ಾರ ಹಣ ಪಾವತಿಸಿದೆ. ಚುನಾವಣೆಗೆ ಹಣ ಬಳಸುವುದೇ ಇದರ ಉದ್ದೇಶ. ಇದೇ ಹಣದಿಂದ ಮೈತ್ರಿ ಸಕರ್ಾರ ಚುನಾವಣೆ ಮಾಡುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗಂಭೀರವಾಗಿ ಆರೋಪಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ, ಶಾಸಕ ಬಸವರಾಜ್ ದಡೇಸೂಗೂರು, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ, ಬಿಜೆಪಿ ಮುಖಂಡ ಸಿ.ವಿ.ಚಂದ್ರಶೇಖರ, ಗಿರೇಗೌಡರು, ಹುಲಿಗಿ ತಾಲೂಕಾ ಪಂಚಾಯತ್ ಸದಸ್ಯ ಫಾಲಾಕ್ಷಪ್ಪ ಗುಂಗಾಡಿ, ನಾಗರಾಜ್ ಬಿಲ್ಗಾರ್ ಸೇರಿದಂತೆ ಮತ್ತೀತರರು ಉಪಸ್ಥಿತರಿದ್ದರು.