ಲೋಕದರ್ಶನ ವರದಿ
ಕೊಪ್ಪಳ 02: ರಾಜ್ಯದ ಸಮ್ಮೀಶ್ರ ಸಕರ್ಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಈಗ ಪುತ್ರನ ಸಲುವಾಗಿ ಮಂಡ್ಯ ಮುಖ್ಯಮಂತ್ರಿಯಾಗಿದ್ದಾರೆ ಇದರಿಂದ ಅವರು ನಾಡಿನ ಜನತೆಗೆ ದ್ರೋಹ ಬಗೆದಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಟೀಕಿಸಿದರು.
ಅವರು ಸೋಮವಾರ ಕೊಪ್ಪಳ ವಿಧಾನಸಭಾ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಸಿದ್ದರಾಮಯ್ಯ ಕುರುಬರನ್ನು ಕೇವಲ ರಾಜಕೀಯಕ್ಕೆ ಬಳಸಿಕೊಂಡು ಅವರಿಗೆ ಸ್ಥಾನಮಾನ ನೀಡದೆ ದುರಂಕಾರದ ಆಡಳಿತ ನಡೆಸಿದರು. ಅದಕ್ಕಾಗಿಯೇ ಚಾಮುಂಡೇಶ್ವರಿ ಚುನಾವಣೆಯಲ್ಲಿ ಸಿದ್ದರಾಮಯ್ಯನವರನ್ನು ರಾಹು-ಕೇತು-ಶನಿ ಸೋಲಿಸಿ ಪಾಠ ಕಲಿಸಿದರು ಕಾಂಗ್ರೆಸ್ನಲ್ಲಿದ್ದ ಕುಟುಂಬ ರಾಜಕಾರಣ ಈಗ ದೇವೇಗೌಡರ ಕುಟುಂಬದಲ್ಲಿ ನಡೆಯುತ್ತಿದೆ. ಒಂದು ವೇಳೆ ದೇವೆಗೌಡರಿಗೆ 14 ಜನ ಮಕ್ಕಳಿದ್ದರೆ, ಅವರ 14 ಸೊಸೆಯರನ್ನು ಸೇರಿಸಿ 28 ಕ್ಷೇತ್ರದಲ್ಲೂ ಸ್ಪಧರ್ೆ ಮಾಡ್ತಾ ಇದ್ದರು. ಅಷ್ಟು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಆದರೆ ದೇವೆಗೌಡರ ಕುಟುಂಬ ರಾಜಕಾರಣ ನೋಡಿ ಜನ ಬೇಸತ್ತಿದ್ದಾರೆ. ಇವರಿಗೆ ಜನಾ ಆಶೀವರ್ಾದ ಮಾಡೋದಿಲ್ಲ. ಆದರೂ ಕೂಡ ಕಾಟಾಚಾರಕ್ಕೆ ಕಾಂಗ್ರೆಸ್ನವರು ಇವರ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಇದರಿಂದ ಮೈತ್ರಿ ಸಕರ್ಾರದಲ್ಲಿ ಆತಂರಿಕ ಹಾಗೂ ಬಾಹ್ಯ ಭಿನ್ನಮತ ಸಾಕಷ್ಟು ಇದೆ. ಇದಕ್ಕಾಗಿಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಸುಪುತ್ರ ಸ್ಪಧರ್ೆ ಮಾಡಿದ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಧ್ವಜಗಳು ಕಾಣುತ್ತಿಲ್ಲ. ಆದರೆ ಅದೇ ಸುಮಲತಾ ಅವರ ಪ್ರಚಾರದಲ್ಲಿ ಕಾಂಗ್ರೆಸ್ ಬಾವುಟಗಳು ಕಾಣ್ತಾ ಇವೆ. ಇದರಿಂದ ಮಂಡ್ಯದಲ್ಲಿ ಕಾಂಗ್ರೆಸ್ನವರು ನಿಖಿಲ್ ಅವರನ್ನು ಸೋಲಿಸುತ್ತಾರೆ. ಹಾಸನ ತುಮಕೂರಲ್ಲಿ ಜೆಡಿಎಸ್ ಸೋಲುತ್ತೆ ಎಂದು ಭವಿಷ್ಯ ನುಡಿದರು ಅವರು ಈ ಬಾರಿ ಬಿಜೆಪಿ ರಾಜ್ಯದಲ್ಲಿ 21 ಸ್ಥಾನ ಗೆಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥರ್ಿ ಸಂಗಣ್ಣ ಕರಡಿ, ಅಧ್ಯಕ್ಷ ವಿರುಪಾಕ್ಷಪ್ಪ ಸಿಂಗನಾಳ, ಸಿ.ವಿ.ಚಂದ್ರಶೇಖರ, ಮಾಜಿ ಸಚಿವ ವಿರೂಪಾಕ್ಷಪ್ಪ ಅಗಡಿ,ಅಂದಾನಪ್ಪ ಅಗಡಿ, ಅಮರೇಶ ಕರಡಿ, ಹೆಚ್.ಗಿರೇಗೌಡ,ವಿ.ಎಂ.ಭೂಸನೂರು, ಕೆ.ಶರಣಪ್ಪ, ಪಿ.ಆರ್.ಹೊಸಳ್ಳಿ, ಡಾ.ಕೆ.ಜಿ.ಕುಲಕಣರ್ಿ, ಆರ್.ಬಿ.ಪಾನಗಂಟಿ, ಮಧುರಾ ಕರಣಂ, ಹೇಮಲತಾ ನಾಯಕ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು