ಕೊಪ್ಪಳ : ಕಾರ್ಗಿಲ ವಿಜಯೋತ್ಸವ ಕಾರ್ಯಕ್ರಮ

ಲೋಕದರ್ಶನ ವರದಿ

ಕೊಪ್ಪಳ 26: ಭಾಗ್ಯನಗರದ ಗಾಂಧಿವೃತ್ತ, ಅಂಬಾಭವಾನಿ ದೇವಸ್ಥಾನದ ಹತ್ತಿರ ಕಾಗರ್ಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಮಾಡಿ ಹುತ್ತಾತ್ಮರಾದ ಸೈನಿಕರ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಅಪರ್ಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಸಂಘಟನೆಯ ಮುಖಂಡ ಗವಿಸಿದ್ದಪ್ಪ ಜಂತಗಲ್ ಕಾಗರ್ಿಲ್ ಯುದ್ಧ ಇವತ್ತಿಗೆ 20 ವರ್ಷ ಆಗಿದೆ. ಈ ಒಂದು ಯುದ್ಧವನ್ನ ಇಡೀ ದೇಶವೆ ಎಂದು ಮರೆಯಲು ಸಾಧ್ಯವಿಲ್ಲ. ಎಕೆಂದರೆ ಅನೇಕ ಸೈನಿಕರು ತಮ್ಮ ಪ್ರಾಣ ಬಲಿದಾನದಿಂದ ಕಾಗರ್ಿಲ್ ಯುದ್ಧವನ್ನು ಗೆದ್ದಿರುವುದನ್ನು ನಾವು ನೋಡುತ್ತಿದ್ದೇವೆ. ಶತ್ರು ರಾಷ್ಟ್ರವಾಗಿರುವಂತಹ ಪಾಕಿಸ್ತಾನ ಶಾಂತಿ ಒಪ್ಪಂದ ಮೂಲಕ ಕಪಟತನದ ನಾಟಕವನ್ನು ಮಾಡಿ ಭಾರತದೊಳಗೆ ನುಗ್ಗಬೇಕೆನ್ನುವ ಅಕ್ರಮ ಯೋಚನೆಯನ್ನು ಮಾಡಿ ಪರ್ವತದ ಶಿಖರವನ್ನು ಏರಿದ ಶತ್ರು ರಾಷ್ಟ್ರವಾದ ಪಾಕಿಸ್ತಾನ ನಮ್ಮ ದೇಶದ ಒಳಗೆ ನುಗ್ಗಲು ಮುಂದಾದಾಗ ಆವತ್ತಿನ ದಿನದ ಪ್ರಧಾನ ಮಂತ್ರಿಗಳಾದ ಅಟಲ್ ಬಿಹಾರಿ ವಾಜೇಪಿಯವರು ಒಂದು ನಿರ್ಣಯವನ್ನ ತಗೆದುಕೊಂಡು ಭಾರತದ ಸೈನಿಕರಿಗೆ ಸ್ವತಂತ್ರವನ್ನು ನೀಡಿ ಹಾಗೂ ಅನೇಕ ಮೇಜರ್ ಕ್ಯಾಪ್ಟ್ನಗಳ ತಂಡವನ್ನು ರಚಿಸಿ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ನಿರ್ಧರಿಸಿದ್ದರು.

ಇದಾದ ನಂತರ ನಮ್ಮ ಸೈನಿಕರು ಪಾಕಿಸ್ತಾನದಿಂದ ಬಂದ ಉಗ್ರರನ್ನು ಹೊಡೆದು ನಮ್ಮ ದೇಶದ ಶಿಖರವನ್ನ ರಕ್ಷಣೆ ಮಾಡಿ ಮತ್ತು ನಮ್ಮ ದೇಶವನ್ನ ಕಾಪಾಡಿ ಅನೇಕ ಸೈನಿಕರು ತಮ್ಮ ಪ್ರಾಣವನ್ನು ದೇಶಕ್ಕಾಗಿ ತ್ಯಾಗ ಮಾಡಿರುವುದನ್ನು ನಾವು ನೋಡಿದ್ದೇವೆ.

ಕಾಗರ್ಿಲ್ ಯುದ್ಧದಿಂದ ಭಾರತ ದೇಶವನ್ನ ಜಗತ್ತಿಗೆ ತನ್ನ ಶಕ್ತಿ ಸಾಮಾರ್ಥವನ್ನು ಪರಿಚಯಿಸಿ ಹಾಗೂ ಇಡೀ ವಿಶ್ವವೇ ಜುಲೈ 26 1999 ರಂದು ಪ್ರತಿಯೊಬ್ಬ ನಾಗರಿಕರು ಸಂಭ್ರಮದ ಆಚರಣೆಯನ್ನು ದೇಶದಲ್ಲಿಯೇ ಮಾಡಲಾಯಿತು. ದೇಶದ ಪ್ರತಿಯೊಬ್ಬ ಪ್ರಜೆಯು ಹೆಮ್ಮೆ ಪಡುವ ದಿನವೆಂದರೆ ಅದುವೇ ಕಾಗರ್ಿಲ್ ವಿಜಯ ದಿವಸ ನನ್ನ ಸೈನ್ಯ ನನ್ನ ಹೆಮ್ಮೆ ಪ್ರತಿಯೊಬ್ಬರು ದೇಶಭಕ್ತಿ, ದೇಶಪ್ರೇಮ, ದೇಶದ ಬಗ್ಗೆ ವಿಚಾರವನ್ನ ಮಾಡಲೇಬೇಕೆಂದು ಮಾತನಾಡಿದರು.

ಈ ಒಂದು ಕಾರ್ಯಕ್ರಮದಲ್ಲಿ ರಾಘು ನಿರಂಜನ್, ವಾಸು ಮೇಘರಾಜ, ರಾಜು ಕಬ್ಬೇರ್, ರಾಘು ಪವಾರ್, ಪ್ರೇಮನಾಥ ಅಣಗಿ, ರಾಕೇಶ ಪಾನಘಂಟಿ, ಯಲ್ಲಪ್ಪ, ಯಮನಪ್ಪ ನರಗುಂದ, ದತ್ತುಸಾ ಚೌಹಾಣ ಇತರರು ಪಾಲ್ಗೊಂಡಿದ್ದರು.