ಕೊಪ್ಪಳ: ಸ್ವ-ಪ್ರೇರಣೆಯಿಂದ ಮತದಾನ ಮಾಡುವಂತೆ ಪ್ರೇರೆೇಪಿಸಿ: ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ್ ಅಧಿಕಾರಿ ವೆಂಕೋಬಪ್ಪ

ಕೊಪ್ಪಳ 09: ಸ್ವ-ಪ್ರೇರಣೆಯಿಂದ ಮತದಾನ ಮಾಡಲು ಮತದಾರರಿಗೆ ಪ್ರೇರೆಪಿಸುವಂತೆ ತಾಲೂಕ ಸ್ವೀಪ್ ಕಮೀಟಿ ಅಧ್ಯಕ್ಷ ಹಾಗೂ ಕೊಪ್ಪಳ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ್  ಅಧಿಕಾರಿ ವೆಂಕೋಬಪ್ಪ ಟಿ.ರವರು ಮಹಿಳೆಯರಿಗೆ ಕರೆ ನೀಡಿದರು.

ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ  ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ತಾಲೂಕ ಪಂಚಾಯತ ಸಂಭಾಗಣದಲ್ಲಿ ಮಂಗಳವಾರದಂದು ಆಯೋಜಿಸಲಾದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಮತದಾನ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.

ಮತದಾನವು ಶ್ರೇಷ್ಠವಾದ ಹಕ್ಕಾಗಿದ್ದು, ನೀವು ಹಾಗೂ ನಿಮ್ಮ ಸುತ್ತ-ಮುತ್ತಲಿನ ಸಾರ್ವಜನಿಕರಿಗೆ ಮತದಾನದ ಮಾಡುವಂತೆ ಅರಿವು ಮೂಡಿಸಿ.  ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ, ಯಾವುದೇ ಆಶೆ, ಆಮೀಷಗಳಿಗೆ ಒಳಗಾಗದೇ ಸ್ವ-ಪ್ರೇರಣೆಯಿಂದ ಮತದಾನ ಮಾಡಲು ಪ್ರೇರೆಪಿಸಬೇಕು.  ವಿಶ್ವದಲ್ಲಿ ಭಾರತವು ಪ್ರಜಾಪ್ರಭುತ್ವ ಬೃಹತ್ ರಾಷ್ಟ್ರವಾಗಿದ್ದು ಸಂವಿಧಾನದಲ್ಲಿ ಎಲ್ಲರಿಗೂ ಕಡ್ಡಾಯ ಮತದಾನ ಮಾಡಲು ಅವಕಾಶ ಇದ್ದು, ಈ ಕುರಿತು ಎಲ್ಲರಲ್ಲಿಯೂ ತಿಳುವಳಿಕೆ ಮೂಡಿಸಿ.  ಯಾವುದೇ ಕಾರಣಕ್ಕೂ ಸಾರ್ವಜನಿಕರು ಮತದಾನದಿಂದ ದೂರ ಇರದಂತೆ ನೋಡಿಕೊಳ್ಳಿ.  ಮುಂಬರುವ 5 ವರ್ಷಗಳ ಅಭಿವೃದ್ದಿಗಾಗಿ ನಿಮ್ಮ ಮತವನ್ನು ಯೋಚನೆಯಿಂದ ಚಲಾಯಿಸಿ ದೇಶದ ಅಭಿವೃದ್ದಿಗೆ ನಾಂದಿ ಹಾಡೋಣ ಎಂದು ತಾಲೂಕ ತಾಲೂಕ ಸ್ವೀಪ್ ಕಮೀಟಿ ಅಧ್ಯಕ್ಷರು ಹಾಗೂ ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿ ವೆಂಕೋಬಪ್ಪ ಟಿ.ರವರು ಹೇಳಿದರು.

ಕಾರ್ಯಕ್ರಮದಲ್ಲಿ ಗ್ರಾಮೀಣ ಉದ್ಯೋಗ ಸಹಾಯಕ ನಿದರ್ೇಶಕ ಶರಣಯ್ಯ ಸಸಿಮಠ, ತಾಲೂಕ ಕಾರ್ಯಕ್ರಮ ವ್ಯವಸ್ಥಾಪಕ ಸಾಬಣ್ಣ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಲೆಕ್ಕಿಗ ಹಾಗೂ ಆಡಳಿತ ಸಹಾಯಕ ವೆಂಕಟೇಶ ಶೀಗನಹಳ್ಳಿ, ವಲಯ ಮೇಲ್ವಿಚಾರಕಿ ವಿದ್ಯಾಲಕ್ಷ್ಮೀ ಹಿರೇಮಠ, ಮುಖ್ಯಬರಹಗಾರರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.